ETV Bharat / state

ನಮ್ಮ ಪಕ್ಷದಲ್ಲಿ ಯಾವುದೇ ಸಹಿ ಸಂಗ್ರಹ, ಒತ್ತಡಗಳಿಗೆ ಆಸ್ಪದವಿಲ್ಲ: ನಳಿನ್​ ಕುಮಾರ್ ಕಟೀಲ್‌ - Nalin Kumar Katil reaction on signature collection

ನಮ್ಮ ಪಕ್ಷದಲ್ಲಿ ನಮ್ಮ ಪಕ್ಷದಲ್ಲಿ ಯಾವುದೇ ಸಹಿ ಸಂಗ್ರಹ, ಒತ್ತಡಗಳಿಗೆ ಆಸ್ಪದವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್​ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ರೇಣುಕಾಚಾರ್ಯ ಹೇಳಿದ್ದಕ್ಕೆ ನಾನು ಉತ್ತರ ಕೊಡೋಕೆ ಆಗಲ್ಲ. ನಂಗಂತೂ ಯಾವ ವಿಷಯವೂ ಗೊತ್ತಿಲ್ಲ ಎಂದು ಕೃಷಿ ಸಚಿವ ಬಿ. ಸಿ ಪಾಟೀಲ್​ ತಿಳಿಸಿದ್ದಾರೆ.

BC Patil and Nalin Kumar Kateel
ಬಿ ಸಿ ಪಾಟೀಲ್ ಹಾಗೂ ನಳಿನ್​ ಕುಮಾರ್​ ಕಟೀಲ್
author img

By

Published : Jun 7, 2021, 8:33 PM IST

ಹುಬ್ಬಳ್ಳಿ: ಬಿಎಸ್​ವೈ ಪರ ಸಹಿ ಸಂಗ್ರಹಿಸುತ್ತಿರುವ ಯಾವುದೇ ಪ್ರಸಂಗಗಳು ಬಿಜೆಪಿಯಲ್ಲಿ ನಡೆದಿಲ್ಲ. ನಮ್ಮ ಪಾರ್ಟಿಯಲ್ಲಿ ಸಹಿ ಸಂಗ್ರಹ, ಒತ್ತಡ, ಒತ್ತಾಯದಂತಹ ವಿಷಯಗಳಿಗೆ ಆಸ್ಪದವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್ ಕಟೀಲ್ ಅವರು ಸಹಿ ಸಂಗ್ರಹಿಸುವವರಿಗೆ ಎಚ್ಚರಿಕೆ ನೀಡಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್ ಕಟೀಲ್ ಮಾತನಾಡಿದರು

ನಗರದಲ್ಲಿಂದು ಮಾತನಾಡಿದ ಅವರು, ಯಡಿಯೂರಪ್ಪ ಪರ ಸಹಿ ಬಗ್ಗೆ ರೇಣುಕಾಚಾರ್ಯ ಹೇಳಿಕೆ ವಿಚಾರವಾಗಿ ಮಾತನಾಡಿ, ನಮ್ಮದು ಶಾಸನಬದ್ಧ ಪಾರ್ಟಿಯಾಗಿದೆ. ನಮ್ಮ ಪಕ್ಷದಲ್ಲಿ ಯಾವುದೇ ಸಹಿ ಸಂಗ್ರಹ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.

ರಾಷ್ಟ್ರೀಯ ನಾಯಕರು, ಹೈಕಮಾಂಡ್​ ಏನು ಸೂಚಿಸುತ್ತದೆಯೋ ಅದನ್ನು ಪಾಲನೆ ಮಾಡುವ ಪಕ್ಷ ನಮ್ಮದು. ಅದನ್ನೇ ನಿನ್ನೆ ಸಿಎಂ ಚೆನ್ನಾಗಿ ಹೇಳಿದ್ದಾರೆ. ರಾಷ್ಟ್ರೀಯ ನಾಯಕರು ಏನು ಹೇಳ್ತಾರೆ ಅದರ ಮೇಲೆ ನನ್ನ ಕೆಲಸ ಅಂದಿದ್ದಾರೆ. ಅದನ್ನು ಪಕ್ಷದ ಕಾರ್ಯಕರ್ತರು, ನಾಯಕರು, ಶಾಸಕರು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಸಿಎಂ ಹುದ್ದೆ ಖಾಲಿ ಇಲ್ಲ : ಇಲ್ಲಿ ಸಹಿ ಸಂಗ್ರಹ ಅವಶ್ಯಕತೆ ಇಲ್ಲ. ನಾನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಯಾರಾದರು ಇಂತಹ ಕೆಲಸಕ್ಕೆ ಮುಂದಾದರೆ ಅವರನ್ನು ಕರೆದು ಮಾತನಾಡುತ್ತೇನೆ ಎಂದು ಹೇಳಿದ ಅವರು, ಶಾಸಕರು ಯಾರೊಬ್ಬರು ಅವರವರ ಕ್ಷೇತ್ರ ಬಿಟ್ಟು ತೆರಳಬಾರದು. ಕೊರೊನಾ ನಿಯಂತ್ರಣ ಕೆಲಸ ಮಾಡಬೇಕು. ಎಲ್ಲವನ್ನೂ ಪಾರ್ಟಿ ಗಮನಿಸುತ್ತಿದೆ. ಮುಂದೆ ಅನಿವಾರ್ಯ ಇದ್ದರೆ ಬೆಂಗಳೂರಿಗೆ ಹೋಗಲಿ. ಜನ ನಮಗೆ ಆಶೀರ್ವಾದ ಮಾಡಿದ್ದು, ಜನಸೇವೆ ಮಾಡುವುದಕ್ಕೆ. ನಮ್ಮ ಪಕ್ಷದಲ್ಲಿ ಸರ್ವ ಸಮ್ಮತಿಯ ನಾಯಕ ಬಿ.ಎಸ್. ಯಡಿಯೂರಪ್ಪ. ಹೀಗಾಗೇ ಯಾವುದೇ ಚರ್ಚೆಗಳಿಲ್ಲ, ಸಿಎಂ ಹುದ್ದೆ ಖಾಲಿ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಸಹಿ ಸಂಗ್ರಹಣೆ ಯಾವ ವಿಷಯಕ್ಕಾಗಿ ಮಾಡ್ತಿದ್ದಾರೋ ಗೊತ್ತಿಲ್ಲ: ಸಚಿವ ಬಿ ಸಿ ಪಾಟೀಲ್​

ಶಾಸಕ ರೇಣುಕಾಚಾರ್ಯ ಹೇಳಿದ್ದಕ್ಕೆ ನಾನು ಉತ್ತರ ಕೊಡೋಕೆ ಆಗಲ್ಲ. ನಂಗಂತೂ ಯಾವ ವಿಷಯವೂ ಗೊತ್ತಿಲ್ಲ. ಸಹಿ ಸಂಗ್ರಹಣೆ ಯಾವ ವಿಷಯಕ್ಕಾಗಿ ಮಾಡ್ತಿದ್ದಾರೆ ಗೊತ್ತಿಲ್ಲ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್​ ಹೇಳಿದ್ದಾರೆ.

ಕೃಷಿ ಸಚಿವ ಬಿ. ಸಿ ಪಾಟೀಲ್ ಮಾತನಾಡಿದರು

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ ಎಂ ಬದಲಾವಣೆ ಇಲ್ಲ. ಇನ್ನೂ ಎರಡು ವರ್ಷ ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ. ಮುಂದಿನ ಚುನಾವಣೆ ಕೂಡ ಅವರ ನಾಯಕತ್ವದಲ್ಲಿ ನಡೆಯುತ್ತೆ. ಇದು ನಾನು ಹೇಳಿದ್ದಲ್ಲ. ನಮ್ಮ ರಾಜ್ಯಾಧ್ಯಕ್ಷರು ಹೇಳಿದ್ದಾರೆ. ಕೆಂದ್ರ ಸಚಿವ ಜೋಶಿ ಅವರು ಹೇಳಿದ್ದಾರೆ. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರು ಹೇಳಿದ್ದಾರೆ ಎಂದರು.

ಕೇಂದ್ರದ ಹೈಕಮಾಂಡ್​ನಲ್ಲಿ ಯಾವುದೇ ರೀತಿಯ ಚರ್ಚೆ ಆಗಿಲ್ಲ ಎಂದು ಹೇಳಿದ್ದಾರೆ. ಇದು ಬರಿ ಊಹಾ ಪೋಹಾ. ಯಾರ್ಯಾರೋ ಏನೆನೋ ಮಾತಾಡುತ್ತಾ ಹೋದರೆ, ಅದಕ್ಕೆ ಉತ್ತರ ಕೊಡೋಕೆ ಆಗಲ್ಲ. ಕಟೀಲ್​ ಅವರು ಕಟ್ಟುನಿಟ್ಟಾಗಿ ಹೇಳಿದ್ದಾರೆ. ಯಾರು ಯಾವುದೇ ರೀತಿಯ ಹೇಳಿಕೆ ಕೊಡಬಾರದು ಅಂತಾ‌. ಏನೇ ಇದ್ದರೂ ನಮ್ಮ ಪಕ್ಷದ ಚೌಕಟ್ಟಿನೊಳಗೆ ಕುಳಿತುಕೊಂಡು ಮಾತನಾಡೋಣಾ ಎಂದು ತಿಳಿಸಿದರು.

ಓದಿ: ಲಸಿಕೆ ವಿತರಣೆಗೆ ಕೇಂದ್ರೀಕೃತ ವ್ಯವಸ್ಥೆ: ಪ್ರಧಾನಿ ಘೋಷಣೆಗೆ ಮುಖ್ಯಮಂತ್ರಿ ಸ್ವಾಗತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.