ETV Bharat / state

ಸಂಭ್ರಮದಿಂದ ನೆರವೇರಿದ ಮುರುಘಾಮಠ ಜಾತ್ರಾ ಮಹೋತ್ಸವ.. - ಡಾ.ಶಿವಮೂರ್ತಿ ಮುರುಘಾ ಶರಣ

ಡಾ.ಶಿವಮೂರ್ತಿ ಮುರುಘಾ ಶರಣರು ಮುರುಘೇಂದ್ರ ಮಹಾಶಿವಯೋಗಿಗಳ ರಥೋತ್ಸವಕ್ಕೆ ಚಾಲನೆ ನೀಡಿದರು. ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿಗಳ ಮುಂದಾಳತ್ವದಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು.

Murughamath Jatra Mahotsav celebrated
ಮುರುಘಾಮಠ ಜಾತ್ರಾ ಮಹೋತ್ಸವ
author img

By

Published : Feb 16, 2021, 8:47 PM IST

ಧಾರವಾಡ: ಕೊರೊನಾದಿಂದಾಗಿ ಕಳೆದ ಒಂದು ವರ್ಷದಿಂದ ನಾಡಿನ ಎಲ್ಲಾ ಜಾತ್ರಾ ಮಹೋತ್ಸವಗಳು ಬಂದ್ ಆಗಿದ್ದವು. ಆದರೆ ಇದೀಗ ಕೊರೊನಾ ಹಾವಳಿ ಕಡಿಮೆಯಾಗಿರುವುದರಿಂದ ಸರ್ಕಾರವು ಜಾತ್ರೆಗಳನ್ನು ನಡೆಸಲು ಪರವಾನಗಿ ನೀಡಿದೆ.

ಓದಿ: ದಿಶಾ ರವಿ ಬಂಧನ ಖಂಡನೀಯ ; ಯುವ ಸಮುದಾಯದ ಹಕ್ಕು ರಕ್ಷಣೆಗೆ ಹೋರಾಟ ಅನಿವಾರ್ಯ : ಡಿಕೆಶಿ

ಧಾರವಾಡದ ಮುರುಘಾಮಠದ ಮುರುಘೇಂದ್ರ ಮಹಾಶಿವಯೋಗಿಗಳ ರಥೋತ್ಸವ ಮಂಗಳವಾರ ಅದ್ಧೂರಿಯಾಗಿ ನೆರವೇರಿತು. ಕಳೆದ ಹತ್ತು ದಿನಗಳಿಂದ ಜಾತ್ರಾ ಮಹೋತ್ಸವದ ಅಂಗವಾಗಿ ಮುರುಘಾಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.

ಮುರುಘಾಮಠ ಜಾತ್ರಾ ಮಹೋತ್ಸವ

ಮಠದಲ್ಲಿ ಲಿಂಗದೀಕ್ಷೆ ಕಾರ್ಯಕ್ರಮ ನೆರವೇರಿದ್ದು, ಸಂಜೆ ಡಾ.ಶಿವಮೂರ್ತಿ ಮುರುಘಾ ಶರಣರು ಮುರುಘೇಂದ್ರ ಮಹಾಶಿವಯೋಗಿಗಳ ರಥೋತ್ಸವಕ್ಕೆ ಚಾಲನೆ ನೀಡಿದರು. ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿಗಳ ಮುಂದಾಳತ್ವದಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು.

ಶ್ರೀ ಮಠದಿಂದ ಎಳೆಯಲ್ಪಟ್ಟ ರಥಕ್ಕೆ ಭಕ್ತರು ಉತ್ತುತ್ತಿ, ಬಾಳೆಹಣ್ಣು, ನಿಂಬೆಹಣ್ಣು ತೂರಿ ಭಕ್ತಿಯ ನಮನ ಸಲ್ಲಿಸಿದರು. ರಥ ಡಿಪೋ ಸರ್ಕಲ್​ವರೆಗೆ ಬಂದು ಮರಳಿ ಮುರುಘಾಮಠಕ್ಕೆ ತಲುಪಿತು. ಈ ಜಾತ್ರಾ ಮಹೋತ್ಸವಕ್ಕೆ ಸಾವಿರಾರು ಜನ ಮೆರಗು ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.