ETV Bharat / state

ಕೊಲೆಯಾದ ವ್ಯಕ್ತಿಗೆ ಮಾನವೀಯತೆ ಮೆರೆದ ಮಹಿಳೆ: ವಿಡಿಯೋದಲ್ಲಿ ವೈರಲ್

ಮೊನ್ನೆ ಹುಬ್ಬಳ್ಳಿಯಲ್ಲಿ ನಡೆದ ಭೀಕರ ಕೊಲೆಯ ನಂತರ ಹಲ್ಲೆಗೆ ಒಳಗಾದವನಿಗೆ ಮಹಿಳೆಯೊಬ್ಬರು ಆತನ ಗಾಯಗಳಿಗೆ ಬಟ್ಟೆ ಕಟ್ಟುತ್ತಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.

woman
ಸಹಾಯಕ್ಕೆ ಮುಂದಾದ ಮಹಿಳೆ
author img

By

Published : Feb 21, 2023, 1:42 PM IST

Updated : Feb 21, 2023, 1:54 PM IST

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಹಾಡಹಗಲೇ ನಡೆದ ಯುವಕನ ಕೊಲೆ ವಾಣಿಜ್ಯ ನಗರಿಯನ್ನು ಬೆಚ್ಚಿಬಿಳಿಸಿತ್ತು. ಭಾನುವಾರ ನಡೆದ ಭೀಕರ ಕೊಲೆಯ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ರಸ್ತೆಯಲ್ಲಿಯೇ ನೆತ್ತರು ಹರೆದಿರುವ ಭಯಾನಕ ದೃಶ್ಯ ಈಗ ವೈರಲ್ ಆಗಿದೆ. ಹುಬ್ಬಳ್ಳಿಯ ನೇಕಾರ ನಗರದಲ್ಲಿ ನಾಗರಾಜ ಚಲವಾದಿ ಎಂಬ ಯುವಕನನ್ನು ಕೊಲೆ ಮಾಡಲಾಗಿತ್ತು. ತಲ್ವಾರ್ ನಿಂದ ಕೊಚ್ಚಿ, ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದು, ಇದೀಗ ಕೊಲೆ ನಡೆದ ಸ್ಥಳದಲ್ಲಿನ ವಿಡಿಯೋ ವೈರಲ್ ಆಗಿದೆ.

ರಕ್ತ ಸುರಿಯೋದನ್ನು ಕಂಡು ಬಟ್ಟೆ ಕಟ್ಟಿದ ಮಹಿಳೆ: ಇನ್ನೂ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿರೋ ನಾಗರಾಜ ಚಲವಾದಿ ಹಾಗೂ ಪಕ್ಕದಲ್ಲಿ ಬಿದ್ದಿರುವ ತಲ್ವಾರ್ ಹಾಗೂ ಕಲ್ಲು ವಿಡಿಯೋದಲ್ಲಿ ಸೆರೆಯಾಗಿದೆ. ಈ ವೇಳೆ ನಾಗರಾಜನ ಸ್ಥಿತಿ ಕಂಡು ಮಹಿಳೆಯೊಬ್ಬರು ಸಹಾಯಕ್ಕೆ ಮುಂದಾಗಿದ್ದಾಳೆ. ಯಾರೂ ಮುಟ್ಟದಿದ್ದರೂ, ಧೈರ್ಯವಾಗಿ ರಕ್ತ ಸುರಿಯೋದನ್ನು ಕಂಡು ಬಟ್ಟೆ ಕಟ್ಟಿದ ಮಹಿಳೆಯ ವಿಡಿಯೋ ವೈರಲ್ ಆಗಿದೆ.

ತಲೆಗೆ ಬಟ್ಟೆ ಕಟ್ಟಿ ನಾಗರಾಜ್ ನನ್ನು ಉಳಿಸೋ ಪ್ರಯತ್ನ ಮಾಡಿದ್ದಾಳೆ. ಸುತ್ತ ನೂರಾರು ಜನ ನಿಂತಿದ್ದರೂ, ಯಾರೂ ಮುಟ್ಟದಿದ್ದರೂ, ಮಹಿಳೆಯೊಬ್ಬಳು ನಾಗರಾಜ್ ಉಳಿಸೋ ಪ್ರಯತ್ನ ಮಾಡಿದ್ದಾಳೆ. ಆದರೆ, ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿದ್ದ, ನಾಗರಾಜ​ ಕೊನೆಗೂ ಪ್ರಾಣ ಬಿಟ್ಟಿದ್ದಾನೆ. ಹುಬ್ಬಳ್ಳಿ ಕಿಮ್ಸ್ ಗೆ ದಾಖಲಿಸುವ ಮಾರ್ಗ ಮದ್ಯೆ ನಾಗರಾಜ ಸಾವನ್ನಪ್ಪಿದ್ದಾನೆ. ಮಹಿಳೆ ಸಹಾಯಕ್ಕೆ ಮುಂದಾಗಿರೋ ವಿಡಿಯೋ ಇದೀಗ ವೈರಲ್ ಆಗಿದ್ದು, ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೇ ಕೊಲೆ ಮಾಡಿರುವ ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ: ಗಂಡ ಹೆಂಡತಿಯ ಜಗಳದಲ್ಲಿ ಕೂಸು 'ಬಲಿ': ಹೆತ್ತ ಮಗುವನ್ನೇ ಕೊಂದ ತಾಯಿ

ಹತ್ಯೆಯ ಹಿನ್ನೆಲೆ: ಹಳೇ ದ್ವೇಷದ ಕಾರಣದಿಂದ ಹುಬ್ಬಳ್ಳಿ ನೇಕಾರ ನಗರದ ಸಂತೋಷ ಕಾಲೋನಿಯಲ್ಲಿ ಆಟೋದಲ್ಲಿ ಬಂದ 4-5 ಜನರ ಗುಂಪೊಂದು ಮೃತ ನಾಗರಾಜ ಚಲವಾದಿ ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಇದರಿಂದ ನಾಗರಾಜ ಮೃತಪಟ್ಟಿರುತ್ತಾರೆ. ಇನ್ನು ಹಲ್ಲೆಗೆ ಆಸ್ತಿ ವಿಚಾರ ಹಾಗೂ ಹಳೇ ದ್ವೇಷಗಳು ಕಾರಣವಾಗಿರಬಹುದೆಂದು ಮೃತ ನಾಗರಾಜನ ಗೆಳೆಯ ಕೃಷ್ಣ ಮಾಹಿತಿ ನೀಡಿದ್ದನು.

ಮಾಹಿತಿ ತಿಳಿದ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದ್ದು, ಹಾಡಹಗಲೇ ಈ ಘಟನೆ ನಡೆದಿರುವುದರಿಂದ ಆರೋಪಿಗಳನ್ನು ಪತ್ತೆ ಹಚ್ಚಲು ತೀವ್ರ ತನಿಖೆ ಕೈಗೊಂಡಿದ್ದಾರೆ. ಇನ್ನು ಸಾರ್ವಜನಿಕವಾಗಿ ತಮ್ಮ ಮಗನ ಕೊಲೆ ಮಾಡಿರುವುದನ್ನು ತಿಳಿದ ಕುಟುಂಬದವರ ಆಕ್ರಂದನವಂತೂ ಮುಗಿಲು ಮುಟ್ಟಿತ್ತು.

ಇದನ್ನೂ ಓದಿ: ಹಳೇ ದ್ವೇಷಕ್ಕೆ ಹುಬ್ಬಳ್ಳಿಯಲ್ಲಿ ಹರಿಯಿತು ನೆತ್ತರು.. ಯುವಕನನ್ನು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ

Last Updated : Feb 21, 2023, 1:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.