ETV Bharat / state

ಕೆಎಲ್ಇ ಸಂಸ್ಥೆಗೆ ಆಸ್ತಿ ದಾನದ ಹಿಂದೆ ಹಣದ ವ್ಯವಹಾರ ಆಗಿದೆ: ದಿಂಗಾಲೇಶ್ವರ ಸ್ವಾಮೀಜಿ ಆರೋಪ - ಗೃಹ ಸಚಿವ ಬಸವರಾಜ್ ಬೊಮ್ಮಾಯಿ

ಕೆಎಲ್ಇ ಸಂಸ್ಥೆಗೆ ಆಸ್ತಿ ದಾನದ ಹಿಂದೆ ಹಣದ ವ್ಯವಹಾರ ಆಗಿದ್ದು, ಯಾರು ಹಣದ ವ್ಯವಹಾರ ಮಾಡಿದ್ದಾರೆ ಅವರು ಬಹಿರಂಗ ಪಡಿಸಬೇಕು. ಹಣದ ವ್ಯವಹಾರ ಆಗಿದೆ ಅನ್ನೋದನ್ನು ಹಿರಿಯರು ನನ್ನ ಮುಂದೆ ಹೇಳಿದ್ದಾರೆ ಎಂದಿದ್ದಾರೆ.

Dingaleswara Swamiji
ದಿಂಗಾಲೇಶ್ವರ ಶ್ರೀಗಳು
author img

By

Published : Jan 7, 2021, 10:28 PM IST

ಹುಬ್ಬಳ್ಳಿ: ಕೆಎಲ್ಇ ಸಂಸ್ಥೆಗೆ ಆಸ್ತಿ ದಾನದ ಹಿಂದೆ ಹಣದ ವ್ಯವಹಾರ ಆಗಿದೆ ಅಂತಾ ನನ್ನ ಗಮನಕ್ಕೆ ಬಂದಿದೆ ಎಂದು ದಿಂಗಾಲೇಶ್ವರ ಶ್ರೀಗಳು ಹೊಸ ಬಾಂಬ್ ಸಿಡಿಸಿದ್ದಾರೆ. ನಗರದಲ್ಲಿ ನಿನ್ನೆ ರಾತ್ರಿ ಭಕ್ತರ ಸಭೆಯ ಬಳಿಕ‌ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಾರು ಹಣದ ವ್ಯವಹಾರ ಮಾಡಿದ್ದಾರೆ ಅವರು ಬಹಿರಂಗ ಪಡಿಸಬೇಕು. ನಾನು ಅದರಲ್ಲಿ ಇರಲಿಲ್ಲ, ಮಠದ ನ್ಯಾಯ ಬಗೆಹರಿಸುವಲ್ಲಿ ನಾನು ಒಬ್ಬ ಪಾತ್ರಧಾರಿಯಾಗಿದ್ದೆ ಎಂದರು.

ಕೆಎಲ್ಇ ಸಂಸ್ಥೆಗೆ ಆಸ್ತಿ ದಾನದ ಹಿಂದೆ ಹಣದ ವ್ಯವಹಾರ ನಡೆದಿದೆ ಎಂದು ಆರೋಪಿಸಿದ ದಿಂಗಾಲೇಶ್ವರ ಸ್ವಾಮೀಜಿ

ಆಸ್ತಿ ಹಾಳು ಮಾಡಿಸುವುದರಲ್ಲಿ, ಹಣದ ವ್ಯವಹಾರದಲ್ಲಿ ನಾನು ಇಲ್ಲ. ಮಠದ ನ್ಯಾಯ ಮುಗಿಸಲು ನಾನು 1 ಕೋಟಿ 25 ಲಕ್ಷ ಕೊಡಿಸಿದ್ದೇನೆ. ಇವರು ಆಸ್ತಿ ಹೊಡೆಯಲು ಆಗಿರುವ ವ್ಯವಹಾರ ನನಗೆ‌ ಗೊತ್ತಿಲ್ಲ. ಹಣದ ವ್ಯವಹಾರ ಆಗಿದೆ ಅನ್ನೋದನ್ನು ಹಿರಿಯರು ನನ್ನ ಮುಂದೆ ಹೇಳಿದ್ದಾರೆ. ಹಿರಿಯರೇ ದಾನದ ಆಸ್ತಿಯ ವಿಚಾರದಲ್ಲಿನ ಹಣದ ವ್ಯವಹಾರದ ಬಗ್ಗೆ ಬಾಯಿ ಬಿಡಬೇಕು. ಇದು ಸುಳ್ಳು, ಸತ್ಯ ಅನ್ನೋದನ್ನು ಬಹಿರಂಗಪಡಿಸಬೇಕು. ಇವರು ಪ್ರಾಮಾಣಿಕರಾಗಿದ್ದರೆ ಒಂದು ಸ್ಪಷ್ಟೀಕರಣ ಕೊಡಬೇಕು ಎಂದು ಸವಾಲು ಹಾಕಿದರು.

ಉನ್ನತ ಸಮಿತಿಯಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ‌, ಉಸ್ತುವಾರಿ ಜಗದೀಶ್ ಶೆಟ್ಟರ್, ವಿರೋಧ ಪಕ್ಷದಲ್ಲಿ ಹೊರಟ್ಟಿ ಇದ್ದಾರೆ. ಸದ್ಯಕ್ಕೆ‌ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮೋಹನ್ ಲಿಂಬಿಕಾಯಿ ಇದ್ದಾರೆ. ಇವರೆಲ್ಲರೂ ಯಾಕೆ ಮಾತನಾಡುವುದಿಲ್ಲ, ಯಾಕೆ ಬಾಯಿ ಮುಚ್ಚಿಕೊಂಡು ಕೂತಿದ್ದಾರೆ? ಹಣದ ವ್ಯವಹಾರ ಆಗಿದ್ರೆ ಆಗಿದೆ ಅಂತಾ ಹೇಳಲಿ. ಇಲ್ಲವಾದರೆ ಇಲ್ಲ ಅಂತಾ ಹೇಳಲಿ. ನಮ್ಮನ್ಯಾರು ಕೇಳುತ್ತಾರೆ ಅಂತಾ‌ ಸುಮ್ಮನೆ ಇದ್ದರೆ ಜನ ಸುಮ್ಮನೆ ಇರೋಲ್ಲ ಎಂದರು.

ಇದನ್ನೂ ಓದಿ: ಅವ್ಯವಹಾರದ ದಾಖಲೆಗಳಿದ್ದರೆ ಬಿಡುಗಡೆ ಮಾಡಿ; ದಿಂಗಾಲೇಶ್ವರ ಶ್ರೀಗಳಿಗೆ ಹೊರಟ್ಟಿ ಸವಾಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.