ಹುಬ್ಬಳ್ಳಿ: ನಗರದ ಬಸ್ ನಿಲ್ದಾಣ ಹಾಗೂ ಜನನಿಬಿಡ ಸ್ಥಳಗಳಲ್ಲಿ ಮೊಬೈಲ್ ಫೋನ್‌ಗಳನ್ನು ಕಳವು ಮಾಡುತ್ತಿದ್ದ ಆರು ಮಂದಿಯನ್ನು ಬಂಧಿಸುವಲ್ಲಿಉಪನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಮನೋಜ ಗಾಯಕವಾಡ, ಮಂಜುನಾಥ ಜಾಧವ, ರೋಹಿತ ಜಾಧವ, ನಾಗೇಶ ಗೋಕಾಕ, ನಾಗರಾಜ ಮತ್ತಿಗಟ್ಟಿ ಹಾಗೂ ರವಿ ಗಬ್ಬೂರ ಬಂಧಿತರು. ಆರೋಪಿಗಳಿಂದ 1.72 ಲಕ್ಷ ರೂ. ಮೌಲ್ಯದ 18 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಎಫ್ಡಿಎ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ಇಬ್ಬರು ಕಿಂಗ್ಪಿನ್ಗಳು ಅಂದರ್