ಧಾರವಾಡ : ನನ್ನ ಅಭಿಪ್ರಾಯ ನಾನು ಹೇಳಿದ್ದೇನೆ. ಬೇರೆಯವರ ಅಭಿಪ್ರಾಯ ನನಗೆ ಗೊತ್ತಿಲ್ಲ ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಹಿಜಾಬ್ ಧರಿಸಿದಿದ್ದರೆ ಅತ್ಯಾಚಾರ ಆಗುತ್ತವೆ ಎಂಬ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಸ್ಲಿಂ ಮಹಿಳೆಯರ ಸೌಂದರ್ಯ ಕಾಣಬಾರದು. ಅವರ ಮೇಲೆ ಯಾರ ಕಣ್ಣು ಹಾಕಬಾರದು. ಭಾರತದಲ್ಲಿ ಅತ್ಯಾಚಾರ ಪ್ರಕರಣಗಳ ರೇಟ್ ಹೆಚ್ಚಾಗಿದೆ. ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸಿದರೆ ಅತ್ಯಾಚಾರ ಆಗಲ್ಲ. ಹಿಂದಿನ ಕಾಲದಿಂದಲೂ ಮಹಿಳೆಯರು ಹಿಜಾಬ್ ಧರಿಸುತ್ತಾ ಬಂದಿದ್ದಾರೆ ಎಂದರು.
ನಮ್ಮಲ್ಲಿ ಕೆಲವರು ಹಿಜಾಬ್ ಹಾಕಲ್ಲ. ಹಿಜಾಬ್ ಹಾಕಬೇಕು ಧರಿಸಬೇಕೆಂದಿಲ್ಲ. ಸುರಕ್ಷತೆ ದೃಷ್ಟಿಯಿಂದ ಹಿಜಾಬ್ ಧರಿಬೇಕೆಂದು ಹೇಳಿದ್ದೇನೆ. ದೇಶದಲ್ಲಿ ಅತ್ಯಾಚಾರದ ರೇಟ್ ಬಗ್ಗೆ ಮಾಹಿತಿ ತೆಗೆದುಕೊಂಡು ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದರು.
ನಮ್ಮ ಧರ್ಮದಲ್ಲಿ ಐದು ಬಾರಿ ನಮಾಜ್ ಮಾಡಬೇಕು. ಯಾರು ಮಾಡಲ್ಲ. ಹಿಜಾಬ್ ಹಾಕಿದ್ರೆ ಅತ್ಯಾಚಾತ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತೆ ಎಂದರು.
ಇದನ್ನೂ ಓದಿ: ಹಿಜಾಬ್ ಧರಿಸದಿದ್ರೆ ಮುಸ್ಲಿಂ ಮಹಿಳೆಯರು ಅತ್ಯಾಚಾರಕ್ಕೀಡಾಗುವ ಸಾಧ್ಯತೆ ಇದೆ.. ಜಮೀರ್ ಅಹ್ಮದ್