ETV Bharat / state

ಅಧಿಕಾರಿಗಳಿಗೆ ಕಂದಾಯ ಸಚಿವ ಆರ್.ಅಶೋಕ ಖಡಕ್ ಸೂಚನೆ

ಕಂದಾಯ ಸಚಿವ ಆರ್.ಅಶೋಕ್ ಧಾರವಾಡದ ಸರ್ಕ್ಯೂಟ್ ಹೌಸ್​ನಲ್ಲಿ ನಡೆದ ಅಧಿಕಾರಗಳ ಸಭೆಯಲ್ಲಿ ನೆರೆ ಹಾನಿ‌ ಕುರಿತಂತೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

Minister R. Ashoka
ಸರ್ಕಾರಿ ಅಧಿಕಾರಿಗಳಿಗೆ ಕಂದಾಯ ಸಚಿವ ಆರ್.ಅಶೋಕ ಖಡಕ್ ಸೂಚನೆ
author img

By

Published : Dec 10, 2019, 10:42 PM IST

ಧಾರವಾಡ: ಜಿಲ್ಲೆಯಲ್ಲಿ ನೆರೆ ಹಾವಳಿಯಿಂದ ಸಾಕಷ್ಟು ಹಾನಿಯಾಗಿದ್ದು ಕೂಡಲೇ ಅಧಿಕಾರಿಗಳು ಸರ್ಕಾರದ ಸೌಲಭ್ಯಗಳನ್ನು ಸಾರ್ವಜನಿಕರಿಗೆ ಮುಟ್ಟಿಸಲು ಚುರುಕಾಗಿ ಕೆಲಸ ಮಾಡಬೇಕೆಂದು ಕಂದಾಯ ಸಚಿವ ಆರ್.ಅಶೋಕ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಸರ್ಕಾರಿ ಅಧಿಕಾರಿಗಳಿಗೆ ಕಂದಾಯ ಸಚಿವ ಆರ್.ಅಶೋಕ ಖಡಕ್ ಸೂಚನೆ

ನಗರದ ಸರ್ಕ್ಯೂಟ್ ಹೌಸ್​ನಲ್ಲಿ ನಡೆದ ಅಧಿಕಾರಗಳ ಸಭೆಯಲ್ಲಿ ನೆರೆ ಹಾನಿ‌ ಕುರಿತಂತೆ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಸಾರ್ವಜನಿಕರು ಸರ್ಕಾರಿ ಕಚೇರಿಗೆ ಅಲೆದಾಡಿ ಚಪ್ಪಲಿ ಸವೆಸಿರುವುದು ಸಾಕು. ಇನ್ನಾದರೂ ಅಧಿಕಾರಿಗಳು ಸಾರ್ವಜನಿಕರ ಮನೆ ಮನೆಗೆ ಭೇಟಿ ನೀಡಿ ಜನತೆಯ ಅಳಲನ್ನು ಆಲಿಸಬೇಕು. ಧಾರವಾಡ ಜಿಲ್ಲೆಗೆ ನೆರೆ ಪರಿಹಾರಕ್ಕೆ ಸರ್ಕಾರದಿಂದ 214 ಕೋಟಿ ರೂ ಹಣವನ್ನು ನೀಡಲಾಗಿದೆ. ಅಲ್ಲದೇ 68 ಕೋಟಿ ರೂ ಹಣವನ್ನು ಬೆಳೆ ಪರಿಹಾರಕ್ಕಾಗಿ ನೀಡಲಾಗಿದ್ದು, ನೆರೆ ಸಂತ್ರಸ್ತರ ಮನೆ ನಿರ್ಮಾಣ ಕಾರ್ಯಗಳು 8 ತಿಂಗಳಲ್ಲಿ ಪೂರ್ಣಗೊಳ್ಳಬೇಕು ಎಂದು ಸೂಚನೆ ನೀಡಿದ್ರು.

ಇನ್ನು ಶಾಲೆ ಹಾಗೂ ಅಂಗನವಾಡಿ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ಅಲ್ಲದೇ ರಸ್ತೆ ಕಾಮಗಾರಿಗೆ ಎನ್​ಡಿಆರ್​ಎಫ್ ಹಾಗೂ ಪಿಡಬ್ಲೂಡಿ ಸಹಯೋಗದಲ್ಲಿ ಶೀಘ್ರವಾಗಿ ಪೂರ್ಣಗೊಳಿಸುವ ಮೂಲಕ ಸಾರ್ವಜನಿಕರ ‌ಹಿತಾಸಕ್ತಿ ಕಾಪಾಡಬೇಕು. ವೃದ್ಧಾಪ್ಯ ವೇತನದ ವಿತರಣೆಯಲ್ಲಿ ಮಧ್ಯವರ್ತಿಗಳಿಂದ 800-900 ಕೋಟಿ ರೂ ಅವ್ಯವಹಾರ ಆಗುತ್ತಿದ್ದು, ಇಂತಹ ವ್ಯವಸ್ಥೆಗೆ ಕಡಿವಾಣ ಹಾಕಲು ಆಧಾರ್ ಕಾರ್ಡ್ ಲಿಂಕ್ ಮಾಡುವ ಮೂಲಕ ಫಲಾನುಭವಿಗಳಿಗೆ ಲೆಟರ್ ಬರೆಯುವ ಮೂಲಕ ಅರ್ಹ ಫಲಾನುಭವಿಗಳಿಗೆ ಈ ಯೋಜನೆಯ ಸದುಪಯೋಗ ನೀಡಲಾಗುತ್ತದೆ ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ದೀಪಾ ಚೋಳನ್ ಸೇರಿದಂತೆ ವಿವಿಧ ಇಲಾಖೆಯ ‌ಅಧಿಕಾರಿಗಳು ಪಾಲ್ಗೊಂಡಿದ್ದರು.

Intro:ಹುಬ್ಬಳ್ಳಿ-04

ಧಾರವಾಡ ಜಿಲ್ಲೆಯಲ್ಲಿ ನೆರೆ ಹಾವಳಿಯಿಂದ ಸಾಕಷ್ಟಯ ಹಾನಿಯಾಗಿದ್ದು, ಕೂಡಲೇ ಅಧಿಕಾರಿಗಳು ಸರ್ಕಾರದ ಸೌಲಭ್ಯಗಳನ್ನು ಸಾರ್ವಜನಿಕರಿಗೆ ಮುಟ್ಟಿಸಲು ಅಧಿಕಾರಿಗಳು ಚುರುಕಾಗಿ ಕೆಲಸ ಮಾಡಬೇಕು.ಬಡವರ ಕೆಲಸವನ್ನು ಅಧಿಕಾರಿಗಳು ಖುಷಿಯಿಂದ ಮಾಡಬೇಕು. ಅಂದಾಗ ಜನ ಸಂತೋಷ ಪಡುತ್ತಾರೆ. ಅಧಿಕಾರಿಗಳೇ ಜನರ ಬಳಿಗೆ ಹೋಗಬೇಕು ಎಂದು ಅಧಿಕಾರಿಗಳಿಗೆ ಕಂದಾಯ ಸಚಿವ ಆರ್.ಅಶೋಕ ಅವರು ಅಧಿಕಾರಿಗಳುಗೆ ಖಡಕ್ ವಾರ್ನಿಂಗ್ ಮಾಡಿದರು.

ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಅಧಿಕಾರಗಳ ಸಭೆಯಲ್ಲಿ ನೆರೆ ಹಾನಿ‌ ಕುರಿತಂತೆ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಸಾರ್ವಜನಿಕರು ಸರ್ಕಾರಿ ಕಚೇರಿಗೆ ಅಲೆದಾಡಿ ಚಪ್ಪಲಿ ಸವೆಸಿರುವುದು ಸಾಕು. ಇನ್ನಾದರೂ ಅಧಿಕಾರಿಗಳು ಸಾರ್ವಜನಿಕರ ಮನೆ ಮನೆಗೆ ಭೇಟಿ ನೀಡಿ ಜನತೆಯ ಅಳಲನ್ನು ಆಲಿಸಬೇಕು ಎಂದರು.

ಧಾರವಾಡ ಜಿಲ್ಲೆಗೆ ನೆರೆ ಪರಿಹಾರಕ್ಕೆ ಸರ್ಕಾರದಿಂದ 214 ಕೋಟಿ ಹಣವನ್ನು ನೀಡಲಾಗಿದೆ.ಅಲ್ಲದೇ 68 ಕೋಟಿ ಹಣವನ್ನು ಬೆಳೆ ಪರಿಹಾರಕ್ಕಾಗಿ ನೀಡಲಾಗಿದ್ದು, ನೆರೆ ಸಂತ್ರಸ್ತರ ಮನೆ ನಿರ್ಮಾಣ ಕಾರ್ಯಗಳು ಎಂಟು ತಿಂಗಳಲ್ಲಿ ಪೂರ್ಣಗೊಳ್ಳಬೇಕು ಎಂದರು.
ಶಾಲೆ ಹಾಗೂ ಅಂಗನವಾಡಿ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು.ಅಲ್ಲದೇ ರಸ್ತೆ ಕಾಮಗಾರಿಗೆ ಎನ್ ಡಿ ಆರ್ ಎಫ್ ಹಾಗೂ ಪಿಡಬ್ಲೂಡಿ ಸಹಯೋಗದಲ್ಲಿ ಶೀಘ್ರವಾಗಿ ಪೂರ್ಣಗೊಳಿಸುವ ಮೂಲಕ ಸಾರ್ವಜನಿಕರ ‌ಹಿತಾಸಕ್ತಿ ಕಾಪಾಡಬೇಕು ಎಂದರು.

ವೃದ್ಧಾಪ್ಯ ವೇತನದ ವಿತರಣೆಯಲ್ಲಿ ಮಧ್ಯವರ್ತಿಗಳಿಂದ 800-900 ಕೋಟಿ ಅವ್ಯವಹಾರ ಆಗುತ್ತಿದ್ದು,ಇಂತಹ ವ್ಯವಸ್ಥೆಗೆ ಕಡಿವಾಣ ಹಾಕಲು ಆಧಾರ ಕಾರ್ಡ್ ಲಿಂಕ್ ಮಾಡುವ ಮೂಲಕ ಫಲಾನುಭವಿಗಳಿಗೆ ಲೇಟರ್ ಬರೆಯುವ ಮೂಲಕ ಅರ್ಹ ಪಲಾನುಭವಿಗಳಿಗೆ ಈ ಯೋಜನೆಯ ಸದುಪಯೋಗ ನೀಡಲಾಗುತ್ತದೆ ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿ ದೀಪಾ ಚೋಳನ್ ಸೇರಿದಂತೆ ವಿವಿಧ ಇಲಾಖೆಯ ‌ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.Body:H B GaddadConclusion:Etv hubli
ETV Bharat Logo

Copyright © 2024 Ushodaya Enterprises Pvt. Ltd., All Rights Reserved.