ETV Bharat / state

ನೀರಿನಲ್ಲಿ ತೇಲಿ ಹೋಗಿ ಮೃತಪಟ್ಟ ಬಾಲಕಿ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರದ ಚೆಕ್ ವಿತರಣೆ - Ganjikatti village girl death news

ಕಲಘಟಗಿ ತಾಲೂಕಿನ ಗಂಜಿಗಟ್ಟಿ ಗ್ರಾಮದ ಬಾಲಕಿ ನೀರಿನಲ್ಲಿ ತೇಲಿ ಹೋಗಿ ಮೃತಪಟ್ಟಿದ್ದಳು. ಸಚಿವ ಪ್ರಹ್ಲಾದ್ ಜೋಶಿ ಮೃತಳ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ 5 ಲಕ್ಷ ರೂ. ಪರಿಹಾರದ ಚೆಕ್ ಅನ್ನು ಹಸ್ತಾಂತರ ಮಾಡಿದರು.

Prahlad joshi
Prahlad joshi
author img

By

Published : Aug 9, 2020, 12:19 PM IST

ಧಾರವಾಡ : ನೀರಿನಲ್ಲಿ ತೇಲಿ ಹೋಗಿ ಮೃತಪಟ್ಟಿದ್ದ ಬಾಲಕಿ ಕುಟುಂಬದವರನ್ನು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಭೇಟಿ ನೀಡಿ, ಕುಟುಂಬಸ್ಥರಿಗೆ 5 ಲಕ್ಷ ರೂ. ಪರಿಹಾರದ ಚೆಕ್ ನೀಡಿ, ಸಾಂತ್ವನ ಹೇಳಿದರು.

ಕಲಘಟಗಿ ತಾಲೂಕಿನ ಗಂಜಿಗಟ್ಟಿ ಗ್ರಾಮದ ಬಾಲಕಿ ಶ್ರೀದೇವಿ ನೀರಿನಲ್ಲಿ ತೇಲಿ ಹೋಗಿ ಮೃತಪಟ್ಟಿದ್ದಳು. ಎನ್​ಡಿಆರ್​ಎಫ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ನಡೆಸಿ ಬಾಲಕಿಯ ಶವ ಪತ್ತೆಹಚ್ಚಿದ್ದರು. ಈ ಹಿನ್ನೆಲೆ ಇಂದು ಸಚಿವರು ಮೃತ ಬಾಲಕಿ ಮನೆಗೆ ಭೇಟಿ ನೀಡಿ ಪರಿಹಾರದ ಚೆಕ್ ಅನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್, ಡಿವೈಎಸ್‍ಪಿ ರವಿ ನಾಯಕ್, ಸಿಪಿಐ ವಿಜಯ್ ಬಿರಾದಾರ, ಮುಖಂಡರಾದ ಬಸವರಾಜ ಕುಂದಗೊಳಮಠ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಮತ್ತು ಹನುಮಂತಪ್ಪ ಗಾಣಿಗೇರ ಕುಟುಂಬದ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.