ETV Bharat / state

ಸಂಪುಟ ವಿಸ್ತರಣೆ ಮಾಡೋದು ಕಷ್ಟವಿರುತ್ತೆ: ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ

ಯಾರನ್ನ ಮಂತ್ರಿ ಮಾಡಬೇಕು, ಯಾರನ್ನ ಬಿಡಬೇಕು ಅನ್ನೋ ವಿಚಾರ ಸಿಎಂ ಯಡಿಯೂರಪ್ಪನವರ ವಿವೇಚನೆಗೆ ಬಿಟ್ಟಿದ್ದು ಅಂತಾ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಹೇಳಿದ್ದಾರೆ.

Minister Prahlad Joshi Comment on Cabinet Extension
ಪ್ರಹ್ಲಾದ್​ ಜೋಶಿ, ಕೇಂದ್ರ ಸಚಿವ
author img

By

Published : Jan 15, 2020, 3:45 PM IST

ಹುಬ್ಬಳ್ಳಿ: ಯಾರನ್ನ ಮಂತ್ರಿ ಮಾಡಬೇಕು, ಯಾರನ್ನ ಬಿಡಬೇಕು ಅನ್ನೋ ವಿಚಾರ ಸಿಎಂ ಯಡಿಯೂರಪ್ಪನವರ ವಿವೇಚನೆಗೆ ಬಿಟ್ಟಿದ್ದು ಅಂತಾ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಹೇಳಿದ್ದಾರೆ.

ಪ್ರಹ್ಲಾದ್​ ಜೋಶಿ, ಕೇಂದ್ರ ಸಚಿವ

ನಗರದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ಕೊಟ್ಟ ಬಳಿಕ ಮಾತನಾಡಿದ ಅವರು, ಸಚಿವ ಸ್ಥಾನಕ್ಕೆ ಬೇಡಿಕೆ ಸಲ್ಲಿಸಬಹುದು ಮತ್ತು ಸಲಹೆ ನೀಡಬಹುದು. ಸಚಿವರನ್ನಾಗಿ ಮಾಡುವುದು ಸಿಎಂ ಪರಮಾಧಿಕಾರ ಎಂದರು. ಸಿಎಂ ನನ್ನನ್ನು ಮಂತ್ರಿ ಮಾಡಲಿಲ್ಲ ಎಂದು ಬಹಳಷ್ಟು ಜನರು ಆರೋಪಿಸುತ್ತಾರೆ. ಆದ್ರೆ ಸಿಎಂ ಸ್ಥಾನ ನಿಭಾಯಿಸೋದು ಕಷ್ಟವಿರುತ್ತೆ. ಜೊತೆಗೆ ಸಚಿವ ಸಂಪುಟ ವಿಸ್ತರಣೆ ಮಾಡೋದು ಅಷ್ಟು ಸುಲಭವಲ್ಲ. ಅದು ಸಿಎಂ ಆದವರಿಗೆ ಮಾತ್ರ ಅರಿವಿರುತ್ತೆ ಎಂದರು.

ಹುಬ್ಬಳ್ಳಿಗೆ ಕೇಂದ್ರ ಸಚಿವ ಅಮಿತ್ ಶಾ ಆಗಮನ ಹಿನ್ನೆಲೆ, ಕಾಂಗ್ರೆಸ್ ಹಮ್ಮಿಕೊಂಡಿರುವ ಗೋಬ್ಯಾಕ್ ಅಮಿತ್ ಶಾ ಹೇಳಿಕೆಗೆ ತೀರಗೇಟು ನೀಡಿದ ಜೋಶಿ, ಕಾಂಗ್ರೆಸ್​ಗೆ ಜನರು ಈಗಾಗಲೇ ಗೋಬ್ಯಾಕ್ ಅಂತಾ ಹೇಳಿದ್ದಾರೆ.
ವಿರೋಧ ಪಕ್ಷವಾಗಿ ಸರಿಯಾಗಿ ಹೋರಾಟ ಮಾಡುವ ಯೋಗ್ಯತೆಯಿಲ್ಲ. ರಚನಾತ್ಮಕವಾಗಿ ಹೋರಾಟ ಮಾಡುವುದು ಬಿಟ್ಟು ಗೋಬ್ಯಾಕ್ ಅನ್ನುವುದು ಸರಿಯಲ್ಲ. ಮೊದಲು ಪ್ರತಿಭಟನೆ ಯಾವುದಕ್ಕೆ ಮಾಡಬೇಕು ಅನ್ನೋದನ್ನ ಕಲಿಯಲಿ ಎಂದು ವಿಪಕ್ಷಗಳ ವಿರುದ್ಧ ಕುಟುಕಿದರು.

Intro:HubliBody:ಸ್ಲಗ್:- ಸಂಪುಟ ರಚನೆ ಮಾಡುವುದು ಬಹಳ ಕಷ್ಟವಿರುತ್ತೆ! ಜೋಶಿ

ಹುಬ್ಬಳ್ಳಿ:-ಯಾರನ್ನಾ ಮಂತ್ರಿ ಮಾಡಬೇಕು ಎನ್ನುವ ವಿಚಾರ ಸಿಎಮ್ ಅವರಿಗೆ ವಿವೇಚನೆಗೆ ಬಿಟ್ಟದ್ದು'
ಸಚಿವ ಸ್ಥಾನಕ್ಕೆ ಬೇಡಿಕೆ ಸಲ್ಲಿಸಬಹುದು'ಮತ್ತು ಸಲಹೆ ನೀಡಬಹುದು.
ಸಚಿವರನ್ನು ಮಾಡುವುದು ಸಿಎಮ್ ಪರಮಾಧಿಕಾರ' ಹಾಗೂ ಸಚಿವ ಸಂಪುಟ ರಚನೆ ಮಾಡುವುದು ಬಹಳ ಕಷ್ಟವಿರುತ್ತೆ.ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು. ನಗರದಲ್ಲಿ ರಸ್ತೆ ಕಾಮಗಾರಿ ಭೂಮಿ ಪೂಜೆ ಮಾಡಿದ ನಂತರ ಮಾತನಾಡಿದ ಅವರು.ಮಂತ್ರಿ ನನಗೆ ಮಾಡಿಲ್ಲ, ನಿನಗೆ ಮಾಡಿಲ್ಲ ಎಂದು ಬಹಳಷ್ಟು ಜನ ಆರೋಪಿಸುತ್ತಾರೆ.
ಸಿಎಮ್ ಸ್ಥಾನ ನಿಭಾಯಿಸುವುದು ಎಷ್ಟು ಕಷ್ಟ ಎನ್ನುವುದು ಸಿಎಮ್ ಆದವರಿಗೇ ಅರಿವಿರುತ್ತೆ.ಹುಬ್ಬಳ್ಳಿಗೆ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಆಗಮನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಗೊಬ್ಯಾಕ್ ಅಮಿತ್ ಶಾ ಹೇಳಿಕೆಗೆ ತೀರಗೇಟು ನೀಡಿದ ಅವರು.ಕಾಂಗ್ರೆಸ್ ಪಕ್ಷಕ್ಕೆ ಜನ ಈಗಾಗಲೆ ಗೋಬ್ಯಾಕ್ ಅಂತಾ ಹೇಳಿದ್ದಾರೆ.
ವಿರೋಧ ಪಕ್ಷವಾಗಿ ಸರಿಯಾಗಿ ಹೋರಾಟ ಮಾಡುವ ಯೋಗ್ಯತೆಯಿಲ್ಲ.
ರಚನಾತ್ಮಕವಾಗಿ ಹೋರಾಟ ಮಾಡುವುದು ಬಿಟ್ಟು ಗೋಬ್ಯಾಕ್ ಅನ್ನುವುದು ಸರಿಯಲ್ಲ.ಮೊದಲು ಪ್ರತಿಭಟನೆ ಯಾವದಕ್ಕೆ ಮಾಡಬೇಕು ಅನ್ನೊದನ್ನಾ ಕಲಿಯಲಿ ಎಂದರು..

ಬೈಟ್:- ಪ್ರಲ್ಹಾದ ಜೋಶಿ ( ಕೇಂದ್ರ ಸಚಿವ್ರು)

__________________________Conclusion:Yallappa kundagol

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.