ETV Bharat / state

ನಿಸಾರ್ ಅಹಮದ್ ನಿಧನಕ್ಕೆ ಶೆಟ್ಟರ್ ಸಂತಾಪ​ - jagdish shetter latest news

ಹುಬ್ಬಳ್ಳಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹಿರಿಯ ಸಾಹಿತಿ ನಿಸಾರ್​ ಅಹಮದ್​ ನಿಧನಕ್ಕೆ ಸಂತಾಪ ಸೂವಿಸಿದ್ದಾರೆ.

Minister Jagdish Shetter
ಸಂತಾಪ ಸೂಚಿಸಿದ ಶೆಟ್ಟರ್​
author img

By

Published : May 3, 2020, 5:23 PM IST

ಹುಬ್ಬಳ್ಳಿ : ಕನ್ನಡದ ಹಿರಿಯ ಸಾಹಿತಿ ಪ್ರೊ. ಕೆ. ಎಸ್. ನಿಸಾರ್ ಅಹಮದ್ ಅವರ ನಿಧನಕ್ಕೆ ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಸಂತಾಪ ಸೂಚಿಸಿದ್ದಾರೆ.

ತಮ್ಮ ಕಾವ್ಯದ ಮೂಲಕ ನಾಡಿಗೆ ಮಹತ್ವದ ಕೊಡುಗೆ ನೀಡಿರುವ ನಿಸಾರ್ ಅಗಲಿಕೆಯಿಂದ ಸಾಹಿತ್ಯ, ಸಾಂಸ್ಕೃತಿಕ ಲೋಕಕ್ಕೆ ದೊಡ್ಡ ನಷ್ಟವಾಗಿದೆ. ಸರಳ, ಸಜ್ಜನಿಕೆ ವ್ಯಕ್ತಿತ್ವದ ಅವರ ಸಾರ್ಥಕ ಬದುಕು ನಾಡಿಗೆ ಆದರ್ಶಪ್ರಾಯವಾಗಿದೆ. ಅವರ ನಿತ್ಯೋತ್ಸವ ಗೀತೆ ಪ್ರತಿಯೊಬ್ಬ ಕನ್ನಡಿಗನ ಮನೆ ಮನದ ಹಾಡಾಗಿದೆ.

ಅವರ ಉಳಿದ ಕೃತಿಗಳು ಕೂಡ ಕನ್ನಡದ ಹೆಮ್ಮೆಯ ರಚನೆಗಳಾಗಿವೆ. ಕುಟುಂಬದ ಸದಸ್ಯರು, ಓದುಗರು, ಒಡನಾಡಿಗಳು ಮತ್ತು ಅವರ ಅಭಿಮಾನಿಗಳಿಗೆ ನಿಸಾರ್​ ಅಗಲಿಕೆಯ ದುಃಖ ಭರಿಸುವ ಶಕ್ತಿ ಕೊಡಲಿ ಎಂದು ಸಚಿವರು ಕಂಬನಿ ಮಿಡಿದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.