ಹುಬ್ಬಳ್ಳಿ: ರಾಜ್ಯ ಸರ್ಕಾರದ ಅನುದಾನದಲ್ಲಿ ನಿರ್ಮಾಣಗೊಂಡಿರುವ ಹಿಂದುಳಿದ ವರ್ಗದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಕೊಡ ಮಾಡುವ ಮಾಂಸ ಮತ್ತು ಮಾಂಸದಿಂದ ತಯಾರಿಸಿದ ಖಾದ್ಯ ಪದಾರ್ಥಗಳ ಸಂಚಾರಿ ಮಾರಾಟ ಮಳಿಗೆಯನ್ನು ಹುಬ್ಬಳ್ಳಿಯಲ್ಲಿ ಸಚಿವ ಜಗದೀಶ್ ಶೆಟ್ಟರ್ ಉದ್ಘಾಟಿಸಿದರು.
11ಲಕ್ಷ 50 ಸಾವಿರ ರೂಪಾಯಿ ಹಣದಲ್ಲಿ ನಿರ್ಮಾಣವಾದ ಈ ವಾಹನಕ್ಕೆ ರಾಜ್ಯ ಸರ್ಕಾರದಿಂದ 8 ಲಕ್ಷ 25 ಸಾವಿರ ರೂಪಾಯಿ ಸಹಾಯಧನವಾಗಿ ನೀಡಲಾಗುತ್ತದೆ. ಉಳಿದ 2.25 ಸಾವಿರ ರೂಪಾಯಿ ಹಣವನ್ನು ಬ್ಯಾಂಕ್ ಲೋನ್ ಮಾಡುವ ಮೂಲಕ ಫಲಾನುಭವಿಗಳು ಪಾವತಿಸಬೇಕು ಎಂದು ಸೂಚನೆ ನೀಡಲಾಗಿದೆ.
ಜೊತೆಗೆ ಈ ವಾಹನವನ್ನು ಹೇಗೆ ಉಪಯೋಗಿಸಬೇಕು ಮತ್ತು ಮಾಂಸವನ್ನು ಯಾವ ರೀತಿ ಸಂಸ್ಕರಿಸಬೇಕು ಎಂಬುದರ ಬಗ್ಗೆ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ಹೈದರಾಬಾದ್ನಲ್ಲಿ ತರಬೇತಿ ನೀಡಲಾಗಿದೆ. ಇದೇ ವೇಳೆ ನೇಕಾರನಗರ ನಿವಾಸಿ ಶ್ರೀಧರ ಸಾಮ್ರಾಣಿ ಅವರಿಗೆ ಸಂಚಾರಿ ವಾಹನವನ್ನು ಹಸ್ತಾಂತರಿಸಲಾಯಿತು.