ETV Bharat / state

ಹುಬ್ಬಳ್ಳಿ ಧಾರವಾಡ ಅವಳಿ ನಗರ ಧೂಳಿನಿಂದ ಮುಕ್ತ ಮಾಡಲು ಮಹಾನಗರ ಪಾಲಿಕೆ ದಿಟ್ಟ ಹೆಜ್ಜೆ..!

author img

By ETV Bharat Karnataka Team

Published : Nov 9, 2023, 8:19 PM IST

Updated : Nov 10, 2023, 6:27 AM IST

ಧೂಳು ನಿಯಂತ್ರಣ ಮಾಡುವ ಹಾಗೂ ಕಸಗೂಡಿಸುವ ಹಳೆಯ ಯಂತ್ರಗಳು ನಿರುಪಯುಕ್ತ ವಾಗಿದ್ದು, ಶೆಡ್​​ನಲ್ಲಿ ತುಕ್ಕು ಹಿಡಿದಿವೆ. ಹುಬ್ಬಳ್ಳಿ ಧಾರವಾಡ ಮಹಾನಗರ ಬೆಳೆದಂತೆ ಧೂಳಿನ ಸಮಸ್ಯೆ ಹೆಚ್ಚಾಗಿದ್ದು,ಇದನ್ನು ತಡೆಗೆ ಪಾಲಿಕೆ 2.96 ಕೋಟಿ ವೆಚ್ಚದಲ್ಲಿ ಎರಡು ಹೊಸ ಮಷಿನ್ ಖರೀದಿಗೆ ಮುಂದಾಗಿದೆ.

Hubli-dharwad metropolitan corporation
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ
ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಮಾಹಿತಿ ನೀಡಿದರು.

ಹುಬ್ಬಳ್ಳಿ:ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆ ಗಳಿಸಿರುವ ಹುಬ್ಬಳ್ಳಿ- ಧಾರವಾಡ ಅವಳಿ ನಗರ ಬೆಳೆಯುತ್ತಲೇ ಇದೆ. ಆದ್ರೆ ನಗರದಲ್ಲಿ ಉಸಿರಾಡಲು ಸ್ವಚ್ಛ ಗಾಳಿ ಸಿಗದಂತಾಗಿದೆ. ಅವಳಿ ನಗರದಲ್ಲಿ ಧೂಳಿನ ಸಮಸ್ಯೆಯಿಂದ ಜನರು ಹೈರಾಣ ಆಗಿದ್ದಾರೆ. ಅವಳಿ ನಗರದಲ್ಲಿ ಧೂಳು ಹೆಚ್ಚಾಗಿರುವ ಹಿನ್ನೆಲೆ ಹುಬ್ಬಳ್ಳಿ ಧಾರವಾಡ ಜನರಿಗೆ ವಿವಿಧ ಅಲರ್ಜಿಗಳು ಕಾಡುತ್ತಿವೆ. ಹೀಗಾಗಿ ಅವಳಿ‌ನಗರ ಧೂಳುಮುಕ್ತ ಮಾಡಲು ಹಾಗೂ ಧೂಳು ತೆಗೆಯಲು ಈಗ ಪಾಲಿಕೆ ನಿರ್ಧಾರವೊಂದನ್ನು ತೆಗೆದುಕೊಂಡಿದೆ.

ಧೂಳು ನಿಯಂತ್ರಣ ಮಾಡುವ ಹಾಗೂ ಕಸ ಗೂಡಿಸುವ ಹಳೆಯ ಯಂತ್ರಗಳು ಶೆಡ್​​ನಲ್ಲಿ ತುಕ್ಕು ಹಿಡಿದಿವೆ. ಹುಬ್ಬಳ್ಳಿ ಧಾರವಾಡ ಮಹಾನಗರ ಬೆಳೆದಂತೆ ಧೂಳಿನ ಸಮಸ್ಯೆ ಮತ್ತಷ್ಟು ಉಲ್ಭಣಗೊಳ್ಳುತ್ತಿದೆ‌. ಧೂಳು ನಿಯಂತ್ರಣ ಮಾಡುವ ಹಾಗೂ ಕಸ ಗೂಡಿಸುವ ಯಂತ್ರಗಳು ಸಮರ್ಪಕವಾಗಿ ಕಾರ್ಯ ನಿರ್ವಹಣೆ ಮಾಡುತ್ತಿಲ್ಲ. ಇದರಿಂದಾಗಿ ಪಾಲಿಕೆ ಈಗ ಸುಮಾರು ಮೂರು ಕೋಟಿ ವೆಚ್ಚದಲ್ಲಿ ಎರಡು ಮಷಿನ್ ಖರೀದಿಗೆ ಮುಂದಾಗಿದೆ.

ಕೇಂದ್ರದಿಂದ ಪಾಲಿಕೆಗೆ 20 ಕೋಟಿ ಅನುದಾನ ಮಂಜೂರು: ಅವಳಿ ನಗರದಲ್ಲಿ ಧೂಳಿನ ಪ್ರಮಾಣ 2.5 ದಿಂದ 10 ಎಂ ಎಂ ಇದ್ದು ಇದು ನೇರ ಶ್ವಾಸಕೋಸಕ್ಕೆ ಹೋಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಹೀಗಾಗಿ ಮಹಾನಗರ ಪಾಲಿಕೆಗೆ ಕೇಂದ್ರ ಸರ್ಕಾರದ ರಾಷ್ಟ್ರೀಯ ಶುದ್ಧಗಾಳಿ ಯೋಜನೆ(NCAP) ಅಡಿ ಪಾಲಿಕೆಗೆ 20 ಕೋಟಿ ಅನುದಾನ ಮಂಜೂರಾಗಿದೆ. ಮಾಲಿನ್ಯ ನಿಯಂತ್ರಣ ಯೋಜನೆಗೆ ಇದನ್ನು ಬಳಸಿಕೊಳ್ಳಬೇಕಿದ್ದು, ಜಿಲ್ಲಾಧಿಕಾರಿ ನೇತೃತ್ವದಲ್ಲಿ ಯೋಜನೆ ರೂಪಿಸಲಾಗಿದೆ.

ಮೊದಲ ಹಂತದಲ್ಲಿ ದೂಳು ತೆಗೆಯುವ ಎರಡು ಯಂತ್ರಗಳನ್ನು ಖರೀದಿಸಲು ಈಗಾಗಲೇ ಟೆಂಡರ್‌ ಕರೆಯಲಾಗಿದೆ. ಇದೇ 21 ಟೆಂಡರ್‌ಗೆ ಅಂತಿಮ ದಿನವಾಗಿದೆ. ಒಂದು ಯಂತ್ರಕ್ಕೆ 1.48 ಕೋಟಿ ನಿಗದಿಪಡಿಸಲಾಗಿದೆ. ಯಂತ್ರ ಒದಗಿಸಲು ಟೆಂಡರ್‌ ಪಡೆದವರು ಮೂರು ವರ್ಷ ನಿರ್ವಹಣೆ ಜವಾಬ್ದಾರಿ ಹೊರಲಿದ್ದು, ಅದಕ್ಕೆ 88 ಲಕ್ಷ ವಿನಿಯೋಗಿಸಲಾಗುವುದು. ಡಿಸೆಂಬರ್‌ ಮೊದಲ ವಾರದಲ್ಲಿ ಯಂತ್ರಗಳು ಕಾರ್ಯಾಚರಣೆ ನಡೆಸಲಿವೆ ಎಂದು ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಮಾಹಿತಿ‌ ನೀಡಿದರು.

ಅವಳಿ ನಗರದಲ್ಲಿ 2,739 ಕಿ.ಮೀ ರಸ್ತೆಯಿದ್ದು, ಅದರಲ್ಲಿ 2,300 ಕಿ.ಮೀ. ಕಾಂಕ್ರಿಟ್‌ ರಸ್ತೆಯಾಗಿದೆ. ಒಂಬತ್ತು ಮೀಟರ್‌ಗಿಂತ ಅಗಲವಿರುವ ರಸ್ತೆಯಲ್ಲಿನ ಧೂಳನ್ನು ಯಂತ್ರಗಳು ತೆಗೆಯಲಿವೆ. ಪ್ರತಿದಿನ ರಾತ್ರಿ 12ರಿಂದ ಬೆಳಗ್ಗೆ 6ರ ವರೆಗೆ ಕಾರ್ಯಾಚರಣೆ ನಡೆಸಲಿವೆ. ಆದರೆ ಮೊದಲಿದ್ದ ಸಂಪನ್ಮೂಲಗಳನ್ನು ಸದ್ಬಳಕೆ ಮಾಡಿಕೊಳ್ಳುವದಕ್ಕೆ ಮಹಾನಗರ ಪಾಲಿಕೆ ಸಾಧ್ಯವಾಗುತ್ತಿಲ್ಲ.‌ ಆದ್ರೆ ಪಾಲಿಕೆ ಈಗಲಾದರೂ ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕಿದೆ.

ಇದನ್ನೂಓದಿ:ಚಳಿಗಾಲ ಅಧಿವೇಶನಕ್ಕೆ ಬರುವ ಜನಪ್ರತಿನಿಧಿಗಳೇ ನಮ್ಮ ಆತಿಥ್ಯ ಸ್ವೀಕರಿಸಿ : ಸರ್ಕಾರಕ್ಕೆ ಬೆಳಗಾವಿ ರೈತರ ವಿಶೇಷ ಮನವಿ

Last Updated : Nov 10, 2023, 6:27 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.