ಹುಬ್ಬಳ್ಳಿ : ಸೂಕ್ತ ವ್ಯವಸ್ಥೆ ಇಲ್ಲ ಎಂದು ಆರೋಪಿಸಿ ನಗರದ ಕೋವಿಡ್ ಕೇರ್ ಸೆಂಟರ್ನಲ್ಲಿರುವ ರೋಗಿಗಳು ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗೋಕುಲ ರಸ್ತೆಯ ಕೆ.ಎಸ್ ಶರ್ಮಾ ಆವರಣದಲ್ಲಿರುವ ಸಂಜೀವಿನಿ ಕೋವಿಡ್ ಕೇರ್ ಸೆಂಟರ್ನಲ್ಲಿ ಶೌಚಾಲಯ ಹಾಗೂ ಸ್ನಾನಗೃಹಗಳು ಗಬ್ಬೆದ್ದು ನಾರುತ್ತಿದ್ದು, ಈ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ. ಶೌಚಾಲಯ ಸ್ವಚ್ಛ ಮಾಡಿ ವಾರಗಳೇ ಕಳೆದಿವೆ. ಅಲ್ಲದೇ, ಬೇಕಾ ಬಿಟ್ಟಿಯಾಗಿ ಕಸ ಗುಡಿಸುತ್ತಾರೆ. ಈ ಕುರಿತು ಸಂಬಂಧಪಟ್ಟವರ ಗಮನಕ್ಕೆ ತಂದರೆ ಸಬೂಬು ಹೇಳಿ ಹೋಗುತ್ತಿದ್ದಾರೆ ಎಂದು ಕೋವಿಡ್ ಸೋಂಕಿತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿಗೆ ಬಂದು ಆರು ದಿನಗಳು ಕಳೆದಿವೆ. ಈ ಅವಧಿಯಲ್ಲಿ ಒಂದು ಬಾರಿ ಮಾತ್ರ ಶೌಚಾಲಯ ಸುಚಿಗೊಳಿಸಲಾಗಿದೆ. ಇಲ್ಲಿ ಸೋಂಕು ನಿವಾರಣೆ ಆಗುವ ಬದಲು ಹೆಚ್ಚುವ ಲಕ್ಷಣಗಳಿವೆ ಎಂದು ಸೋಂಕಿರು ಅಳಲು ತೋಡಿಕೊಂಡಿದ್ದು, ಸಂಬಂಧಪಟ್ಟ ಅಧಿಕಾರಿಗಳ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.