ಹುಬ್ಬಳ್ಳಿ: ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸರ್ಕಾರ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಎಲ್ಲೆಂದರಲ್ಲಿ ಮಾಸ್ಕ್ ಲಭ್ಯವಾಗುವಂತೆ ಮಾಸ್ಕ್ ವೆಂಡಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಆದರೆ ಈ ಮಾಸ್ಕ್ ವೆಂಡಿಂಗ್ ಮಷಿನ್ಗೆ ನಾಣ್ಯ ಹಾಕಿ ಮಾಸ್ಕ್ ಬರುವವರೆಗೂ ಕಾಯುವ ಸ್ಥಿತಿ ಬಂದಿದೆ.
ಹೌದು, ಈಗಾಗಲೇ ನಗರದ 12 ಕಡೆಗಳಲ್ಲಿ ಮಾಸ್ಕ್ ವೆಂಡಿಂಗ್ ಮಷಿನ್ ಅನುಷ್ಠಾನಗೊಳಿಸಲಾಗಿದೆ. ಆದರೆ ಹುಬ್ಬಳ್ಳಿ ಮಿನಿವಿಧಾನಸೌಧದಲ್ಲಿ 2 ರೂ. ನಾಣ್ಯವನ್ನು ಹಾಕಿದರೂ ಮಾಸ್ಕ್ ಬಾರದೇ ಇರುವುದರಿಂದ ಜನರು ಮಷಿನ್ ಬಡಿಯುತ್ತಿದ್ದಾರೆ. ಮಿನಿವಿಧಾನಸೌಧದಲ್ಲಿ ಸಾರ್ವಜನಿಕರು ಸರ್ಜಿಕಲ್ ಮಾಸ್ಕ್ ಪಡೆದುಕೊಳ್ಳಲು ನಾಣ್ಯವನ್ನು ಹಾಕುತ್ತಿದ್ದಾರೆ. ಆದರೆ ಹಾಕಿದ ಹಣಕ್ಕೆ ಮಾಸ್ಕ್ ದೊರೆಯದೆ ನಿರಾಸೆಯಿಂದ ತೆರಳುತ್ತಿದ್ದಾರೆ.
ದೇಶದಲ್ಲಿ ಚೆನ್ನೈ ನಂತರ ಇಂತಹದ್ದೊಂದು ಪ್ರಯೋಗವನ್ನು ಹುಬ್ಬಳ್ಳಿಯ ಯಂಗ್ ಇಂಡಿಯಾ ಸಂಸ್ಥೆ ಅನುಷ್ಠಾನಗೊಳಿಸಿದೆ. 20 ಸಾವಿರ ರೂ.ವೆಚ್ಚದ 12 ಸ್ವಯಂಚಾಲಿತ ಮಾಸ್ಕ್ ವಿತರಣಾ ಯಂತ್ರಗಳನ್ನು ಅಳವಡಿಸಲಾಗಿದೆ.