ಧಾರವಾಡ: ವಜಾಗೊಂಡ ಪೊಲೀಸ್ ಕಾನ್ಸ್ಟೇಬಲ್ ಮನೆಯಲ್ಲಿ ಗಾಂಜಾ ಪತ್ತೆಯಾಗಿದ ಪ್ರಕರಣ ನಗರದಲ್ಲಿ ಪತ್ತೆಯಾಗಿದೆ.
ಇಲ್ಲಿನ ಮುರುಘಾಮಠದ ಬಳಿ ಮನೆ ಮಾಡಿಕೊಂಡಿದ್ದ ಹುದ್ದೆಯಿಂದ ವಜಾಗೊಂಡ ಸಂಜು ಪಾಟೀಲ ಎಂಬುವವರ ಮನೆ ಮೇಲೆ ದಾಳಿ ಮಾಡಿದಾಗ ವಿಷಯ ಗೊತ್ತಾಗಿದೆ.
ಮೂಲತಃ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಕನದಾಳ ಗ್ರಾಮದವರು ಎನ್ನಲಾಗಿದ್ದು, ಈ ಹಿಂದೆ ಈತ ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ದೀರ್ಘಾವಧಿ ರಜೆ ಪಡೆಯುತಿದ್ದ ಹಿನ್ನೆಲೆ ಇವರನ್ನು ಪೊಲೀಸ್ ಇಲಾಖೆ ವಜಾ ಮಾಡಿತ್ತು.
ಬಳಿಕ ಸಂಜು ಪಾಟೀಲ್ ಧಾರವಾಡದಲ್ಲಿ ಬಂದು ನೆಲೆಸಿದ್ದರು. ಖಚಿತ ಮಾಹಿತಿ ಮೇರೆಗೆ ಈತನ ಮನೆ ಮೇಲೆ ದಾಳಿ ಮಾಡಿದ ಉಪನಗರ ಪೊಲೀಸರು, ಈತನಿಂದ 283 ಗ್ರಾಂ ಗಾಂಜಾ ಹಾಗೂ ಮೊಬೈಲ್ ವಶಕ್ಕೆ ಪಡೆದಿದ್ದಾರೆ.