ETV Bharat / state

ಸರಿಯಾದ ಸಮಯಕ್ಕೆ ಆ್ಯಂಬುಲೆನ್ಸ್ ಬಾರದೇ ವ್ಯಕ್ತಿ ಸಾವು: ಸ್ಥಳೀಯರ ಆಕ್ರೋಶ - ಹುಬ್ಬಳ್ಳಿಯ ಕಲಘಟಗಿ ಪಟ್ಟಣದಲ್ಲಿ ವ್ಯಕ್ತಿ ಸಾವು

ಸಮಯಕ್ಕೆ ಸರಿಯಾಗಿ ಆ್ಯಂಬುಲೆನ್ಸ್ ಬರದೆ ಇರುವ ಕಾರಣ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಸ್ಥಳೀಯರು ಆಸ್ಪತ್ರೆಯ ಎದುರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಗೆ ಜಿಲ್ಲಾ ಆರೋಗ್ಯ ಅಧಿಕಾರಿಗಳು ಬರುವವರಗೂ ಇಲ್ಲಿಂದ ಕದಲುವುದಿಲ್ಲ. ಕೂಡಲೇ ಇಲ್ಲಿಯ ಮುಖ್ಯ ಆರೋಗ್ಯಾಧಿಕಾರಿಯನ್ನು ಅಮಾನತು ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.

man dies while waiting for ambulance in hubli
ಆ್ಯಂಬುಲೆನ್ಸ್ ಬಾರದೆ ವ್ಯಕ್ತಿ ಸಾವು: ಆಸ್ಪತ್ರೆಯ ಎದುರು ಸ್ಥಳೀಯರ ಆಕ್ರೋಶ
author img

By

Published : Jan 28, 2022, 8:35 AM IST

ಹುಬ್ಬಳ್ಳಿ: ಕಾಲು ತೊಳೆಯಲು ಹೋಗಿ ಕೆರೆಯಲ್ಲಿ ಬಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲು ಸರಿಯಾದ ಸಮಯಕ್ಕೆ ಆ್ಯಂಬುಲೆನ್ಸ್ ಬಾರದ ಕಾರಣ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಹುಬ್ಬಳ್ಳಿಯ ಕಲಘಟಗಿ ಪಟ್ಟಣದ ಹೊರವಲಯದ ರುಸ್ತುಸಾಬ ಕೆರೆಯ ಬಳಿ ಈ ಘಟನೆ ನಡೆದಿದೆ.

ಆ್ಯಂಬುಲೆನ್ಸ್ ಬಾರದೇ ವ್ಯಕ್ತಿ ಸಾವು: ಆಸ್ಪತ್ರೆಯ ಎದುರು ಸ್ಥಳೀಯರ ಆಕ್ರೋಶ

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಶಂಕ್ರಯ್ಯ ಗುರುಶಾಂತಯ್ಯ ಹಿರೇಮಠ (60) ಮೃತ ದುರ್ದೈವಿ. ಈತ ಕೈಕಾಲು ತೊಳೆದುಕೊಳ್ಳಲು ಹೋದಾಗ ಕಾಲು ಜಾರಿ ಕೆರೆಯಲ್ಲಿ ಬಿದ್ದಿದ್ದಾನೆ. ಕೂಡಲೇ ಸ್ಥಳೀಯರು ವ್ಯಕ್ತಿಯನ್ನು ಕೆರೆಯಿಂದ ಹೊರತೆಗೆದು ಆ್ಯಂಬುಲೆನ್ಸ್​​ಗೆ ಕರೆ ಮಾಡಿದ್ದಾರೆ. ಆದರೆ 45 ನಿಮಿಷಗಳ ಕಾದರೂ ಆ್ಯಂಬುಲೆನ್ಸ್ ಬಾರದ ಹಿನ್ನೆಲೆ ಸ್ಥಳೀಯರು ಬೇರೆ ವಾಹನದಲ್ಲಿ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಆಸ್ಪತ್ರೆಗೆ ಕರೆದುಕೊಂಡು ಬಂದ ಸ್ವಲ್ಪ ಸಮಯದ ನಂತರ ವ್ಯಕ್ತಿ ಮೃತಪಟ್ಟಿದ್ದಾನೆ ಎನ್ನಲಾಗ್ತಿದೆ.

ಆಸ್ಪತ್ರೆಯ ಎದುರು ಸ್ಥಳೀಯರ ಆಕ್ರೋಶ: ಸಮಯಕ್ಕೆ ಸರಿಯಾಗಿ ಆ್ಯಂಬುಲೆನ್ಸ್ ಬಾರದೇ ಇರುವ ಕಾರಣ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಸ್ಥಳೀಯರು ಆಸ್ಪತ್ರೆಯ ಎದುರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಗೆ ಜಿಲ್ಲಾ ಆರೋಗ್ಯ ಅಧಿಕಾರಿಗಳು ಬರುವವರಗೂ ಇಲ್ಲಿಂದ ಕದಲುವುದಿಲ್ಲ. ಕೂಡಲೇ ಇಲ್ಲಿಯ ಮುಖ್ಯ ಆರೋಗ್ಯಾಧಿಕಾರಿಯನ್ನು ಅಮಾನತು ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಕಲಘಟಗಿ ಠಾಣೆಯ ಸಿಪಿಐ ಪ್ರಭು ಸೂರಿನ ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

ಇದನ್ನೂ ಓದಿ: ಐದು ತಿಂಗಳ ಮಗುವಿನೊಟ್ಟಿಗೆ ತಾಯಿ ನಾಪತ್ತೆ: ಅದೇ ಗ್ರಾಮದ ವ್ಯಕ್ತಿ ವಿರುದ್ಧ ಗಂಡನ ದೂರು

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.