ETV Bharat / state

ಹುಬ್ಬಳ್ಳಿ: ಮಾರಕಾಸ್ತ್ರದಿಂದ ಮೂವರು ಮಕ್ಕಳ ಕೊಲೆಗೈದು ವ್ಯಕ್ತಿ ಆತ್ಮಹತ್ಯೆ; ಪತ್ನಿಗೆ ಚಿಕಿತ್ಸೆ - kannada crime incident

ಫಕೀರಪ್ಪ ಎಂಬಾತ ಪತ್ನಿ, ಮಕ್ಕಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣದ ಬಗ್ಗೆ ಎಸ್​ಪಿ ವಿವರ ನೀಡಿದರು.

man-attacked-wife-and-children-in-hubballi-case
ಮಾರಕಾಸ್ತ್ರಗಳಿಂದ ಪತ್ನಿ ಮಕ್ಕಳ‌ ಮೇಲೆ ಹಲ್ಲೆ ಪ್ರಕರಣ: ಎಸ್ಪಿ ಹೇಳೋದೇನು??
author img

By

Published : Feb 1, 2023, 10:27 PM IST

ಮಾರಕಾಸ್ತ್ರದಿಂದ ಮೂವರು ಮಕ್ಕಳ ಕೊಲೆಗೈದು ವ್ಯಕ್ತಿ ಆತ್ಮಹತ್ಯೆ

ಧಾರವಾಡ: ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮದಲ್ಲಿ ಪತ್ನಿ ಮತ್ತು ಮಕ್ಕಳ‌ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಎಸ್‌ಪಿ ಲೋಕೇಶ್ ಮಾಹಿತಿ ನೀಡಿದರು. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಮೂವರು ಮಕ್ಕಳು ಮೃತಪಟ್ಟಿದ್ದಾರೆ. ತಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.

ಹಲ್ಲೆಗೊಳಗಾದ ಪತ್ನಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆ ಮಾಡಿದ ನಂತರ ಫಕೀರಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆ ಯಾವ ಕಾರಣಕ್ಕೆ ಆಗಿದೆ ಅಂತಾ ತನಿಖೆ ನಡೆಯುತ್ತಿದೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದರು.

ಇದನ್ನೂ ಓದಿ: ಅಮಾನವೀಯ.. ಗಂಡನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಕ್ಕೆ ವಿಧವೆಗೆ ಚಪ್ಪಲಿ ಹಾರ, ಮೆರವಣಿಗೆ, ಹಲ್ಲೆ!

ಪತ್ನಿ, ಮಕ್ಕಳ ಮೇಲೆ ಹಲ್ಲೆ ಮಾಡಿದ ಫಕೀರಪ್ಪನ ಮೇಲೆ ಯಾವುದೇ ಅಪರಾಧ ಪ್ರಕರಣಗಳಿಲ್ಲ. ಆತ ಒಬ್ಬ ಕಟ್ಟಡ ಕಾರ್ಮಿಕ. ಆದರೆ ಸ್ಥಳೀಯರ ಮಾಹಿತಿ ಪ್ರಕಾರ, ಕೌಟುಂಬಿಕ ಕಲಹವಿತ್ತು. ಅದರಿಂದಾಗಿ ಘಟನೆ ನಡೆದಿರುವ ಶಂಕೆ ಇದೆ ಎಂದು ಎಸ್.ಪಿ.ಲೋಕೇಶ್ ಹೇಳಿದರು.

ಇದನ್ನೂ ಓದಿ: ಯುವತಿಗೆ ಮೆಸೇಜ್​ ಮಾಡಿದ್ದಕ್ಕೆ ಯುವಕನ ಹತ್ಯೆ; ಚಾರ್ಮಾಡಿ ಘಾಟ್‌ನಲ್ಲಿ ಶವ ಎಸೆದ ಆರೋಪಿಗಳು ಸೆರೆ

ಘಟನೆಯ ಹಿನ್ನೆಲೆ: ಸುಳ್ಳ ಗ್ರಾಮದಲ್ಲಿ ಬುಧವಾರ ಮುಂಜಾನೆ ಫಕೀರಪ್ಪ ಎಂಬಾತ ಮನೆಯಲ್ಲಿ ಟಿವಿಯ ಧ್ವನಿ ಹೆಚ್ಚಿಸಿ​ ಮಾರಕಾಸ್ತ್ರದಿಂದ ಹೆಂಡತಿ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಪತ್ನಿ ಮುದುಕವ್ವ ಜೋರಾಗಿ ಕಿರುಚಿಕೊಂಡಿದ್ದು, ಮನೆಯಲ್ಲಿ ಮಲಗಿದ್ದ ಮೂವರು ಮಕ್ಕಳು ಎದ್ದು ಅಳಲು ಶುರು ಮಾಡಿದ್ದಾರೆ. ಬಳಿಕ ಫಕೀರಪ್ಪ ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬೆಳಗ್ಗೆ 6 ಗಂಟೆ ಸುಮಾರಿಗೆ ಅಕ್ಕಪಕ್ಕದ ಮನೆಯವರು ಟಿವಿಯ ಜೋರಾದ ಶಬ್ದ ಕೇಳಿ ಬಾಗಿಲು ಬಡಿದಾಗ ಯಾರೂ ಬಾಗಿಲು ತೆಗಿದಿಲ್ಲ. ಅನುಮಾನಗೊಂಡ ನೆರೆಹೊರೆಯವರು ಬಾಗಿಲು ಒಡೆದು ಮನೆಯೊಳಗೆ ಪ್ರವೇಶಿಸಿದ್ದಾರೆ. ರಕ್ತದ ಮಡುವಿನಲ್ಲಿಬಿದ್ದಿದ್ದ ಮೂವರು ಮಕ್ಕಳು ಹಾಗೂ ಪತ್ನಿ ಮುದುಕವ್ವನನ್ನು ತಕ್ಷಣ ಹುಬ್ಬಳಿಯ ಕಿಮ್ಸ್​ ಆಸ್ಪತ್ರೆಗೆ ದಾಖಲಿಸಿದ್ದರು.

ಇದನ್ನೂ ಓದಿ: ವಿಚ್ಛೇದಿತ ಪತಿ ಹತ್ಯೆ ಮಾಡಲು ಮಾಜಿ ಪತ್ನಿ ಸುಪಾರಿ ಆರೋಪ: ದೂರು ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.