ಧಾರವಾಡ: ಮಹಾರಾಷ್ಟ್ರ ಗಡಿ ಕ್ಯಾತೆ ತೆಗೆದ ಬೆನ್ನಲ್ಲೆ ಗೋವಾದಿಂದ ಮಹದಾಯಿ ತಗಾದೆ ಶುರುವಾಗಿದ್ದು, ಒಂದೇ ಸಲ ಕರ್ನಾಟಕ ರಾಜ್ಯಕ್ಕೆ ನೆರೆ ರಾಜ್ಯಗಳು ತಿರುಗಿ ಬಿದ್ದಿವೆ.
ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ ಅಧಿವೇಶನದಲ್ಲಿ ಮಹದಾಯಿ ವಿಷಯ ಪ್ರಸ್ತಾಪಿಸಿದ್ದು, ಮಹದಾಯಿ ನಮ್ಮ ತಾಯಿ ಎಂದು ಪಕ್ಷವನ್ನು ಬದಿಗಿಟ್ಟು ಮಹದಾಯಿ ನೋಡಿವೆ ಎಂದು ಹೇಳಿರುವುದಕ್ಕೆ ಜಿಲ್ಲೆಯ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಓದಿ: ಇಂದು ಶಶಿಕಲಾಗೆ ಕೊರೊನಾ ಪರೀಕ್ಷೆ.. ನಗೆಟಿವ್ ಬಂದರೆ ನಾಳೆ ಡಿಸ್ಚಾರ್ಜ್
ಅದೊಂದು ರಾಜಕೀಯ ಬೆಳವಣಿಗೆಗೋಸ್ಕರ ಹೇಳಿಕೆ ನೀಡಿದ್ದಾರೆ ಅನಿಸುತ್ತದೆ. ನ್ಯಾಯಾಧಿಕರಣದಲ್ಲಿ ಸಂಪೂರ್ಣವಾಗಿ ನ್ಯಾಯ ಬಗೆಹರಿದಿದೆ. ಒಂದು ರಾಜ್ಯದ ಮುಖ್ಯಮಂತ್ರಿಗಳಾಗಿ ಯಾವುದೇ ಯೋಚನೆ ಮಾಡದೇ ಈ ರೀತಿಯ ಹೇಳಿಕೆ ನೀಡುವುದು ಸರಿಯಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾಲ್ಕು ದಶಕದ ನಿರಂತರ ಹೋರಾಟದಿಂದ ಮಹದಾಯಿ ನ್ಯಾಯಾಧೀಕರಣದಲ್ಲಿ ಬಗೆಹರಿದಿದ್ದು, ಕೂಡಲೇ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗೋವಾ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿ ತಕ್ಕ ಪ್ರತ್ಯುತ್ತರ ನೀಡಬೇಕೆಂದು ಆಗ್ರಹಿಸಿದ್ದಾರೆ.