ETV Bharat / state

ಮಹದಾಯಿ ವಿಷಯದಲ್ಲಿ ಕಾಂಗ್ರೆಸ್‌ನವರದು ಓತಿಕಾಟದ ಗುಣ : ಸಚಿವ ಪ್ರಹ್ಲಾದ್​ ಜೋಶಿ - ಮಹದಾಯಿ ವಿಷಯದಲ್ಲಿ ದಿನೇಶ್ ಗುಂಡೂರಾವ್ ಹೇಳಿಕೆ

ಕಾಂಗ್ರೆಸ್‌ನವರದು ಇಲ್ಲಿದ್ದಾಗ ಒಂದು ರೂಪ, ಅಲ್ಲಿದ್ದಾಗ ಒಂದು ರೂಪದಲ್ಲಿ ಇರುತ್ತಾರೆ. ಒಂದೊಂದು ಕಡೆ ಒಂದೊಂದು ಬಣ್ಣ ಅವರದು..

Union minister Prahlad Joshi
ಮಹದಾಯಿ ವಿಷಯದಲ್ಲಿ ಕಾಂಗ್ರೆಸ್‌ನವರದು ಓತಿಕಾಟದ ಗುಣ: ಪ್ರಹ್ಲಾದ್​ ಜೋಶಿ
author img

By

Published : Nov 1, 2020, 1:30 PM IST

ಧಾರವಾಡ : ಮಹದಾಯಿ ವಿಷಯದಲ್ಲಿ ಮಾಜಿ ಸಚಿವ ದಿನೇಶ್​ ಗುಂಡೂರಾವ್ ಹೇಳಿಕೆಗೆ ಸಂಬಂಧಿಸಿದಂತೆ ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಪ್ರತಿಕ್ರಿಯಿಸಿದ್ದಾರೆ.

ಮಹದಾಯಿ ವಿಷಯದಲ್ಲಿ ಕಾಂಗ್ರೆಸ್‌ನವರದು ಓತಿಕಾಟದ ಗುಣ : ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿಯ ಒಂದು ಹನಿ ನೀರು ಕೊಡುವುದಿಲ್ಲ ಎಂದು ಸೋನಿಯಾ ಗಾಂಧಿ ಹೇಳಿದ್ದರು. ಅವರು ಆಗ ಏನು ಹೇಳಿದ್ದಾರೋ ಅವರ ಪಕ್ಷದವರು ಹಾಗೆಯೇ ಹೇಳುತ್ತಿದ್ದಾರೆ. ‌ಕುಡಿಯುವ ನೀರು ಬಿಟ್ಟು ನ್ಯಾಯಾಧೀಕರಣಕ್ಕೆ ಕೊಡಿ ಎಂದು ನಾವು ಕೇಳಿದ್ದೆವು. ಕಳಸಾ-ಬಂಡೂರಿ ನ್ಯಾಯಾಧೀಕರಣದಿಂದ ಬಿಡಿ ಎಂದಿದ್ದೆವು.

ಮಹದಾಯಿ ಮಾತ್ರ ನ್ಯಾಯಾಧೀಕರಣಕ್ಕೆ ಕೊಡಿ ಎಂದು ಕೇಳಿಕೊಂಡಿದ್ದೆವು. ಆದರೆ, ಆಗ ಗೋವಾ‌ ಚುನಾವಣೆ ಇದ್ದರಿಂದ ಎಲ್ಲವನ್ನೂ ನ್ಯಾಯಾಧೀಕರಣಕ್ಕೆ ಕೊಟ್ಟರು. ಕಾಂಗ್ರೆಸ್‌ನವರದು ಓತಿಕಾಟದ ಗುಣ. ಇಲ್ಲಿದ್ದಾಗ ಒಂದು ರೂಪ, ಅಲ್ಲಿದ್ದಾಗ ಒಂದು ರೂಪದಲ್ಲಿ ಇರುತ್ತಾರೆ. ಒಂದೊಂದು ಕಡೆ ಒಂದೊಂದು ಬಣ್ಣ ಅವರದು ಎಂದು ಸಚಿವರು ಹರಿಹಾಯ್ದರು.

ಸರ್ದಾರ್‌ ವಲ್ಲಭಬಾಯಿ ಪಟೇಲ್ ಮತ್ತು ಬಿಜೆಪಿಗೆ ಏನು ಸಂಬಂಧ ಅಂತಾ ಕಾಂಗ್ರೆಸ್‌ಗರು ಕೇಳುತ್ತಿದ್ದಾರೆ. ಸಿದ್ದರಾಮಯ್ಯ ಇರೋದು ಡುಪ್ಲಿಕೇಟ್, ನಕಲಿ ಕಾಂಗ್ರೆಸ್‌ನಲ್ಲಿ ನಾವು ಓರಿಜನಲ್ ಕಾಂಗ್ರೆಸ್‌ನವರನ್ನು ಗೌರವಿಸುತ್ತೇವೆ. ಗಾಂಧೀಜಿ, ಪಟೇಲ್‌ರವರೆಗೆ ದೇಶಕ್ಕೆ ಕಾಣಿಕೆ ಕೊಟ್ಟವರಿಗೆ ಬಿಜೆಪಿ ಗೌರವ ಕೊಡುತ್ತಿದೆ ಎಂದು ಸ್ಪಷ್ಟಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.