ETV Bharat / state

ಧಾರವಾಡ: ನಿರ್ಮಾಣ ಹಂತದ ಕಟ್ಟಡದಲ್ಲಿ ಪ್ರೇಮಿಗಳು ಆತ್ಮಹತ್ಯೆ - ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ

ಪ್ರೇಮಿಗಳಿಬ್ಬರು ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ತಾಲೂಕಿನಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಜೋಡಿ
ಆತ್ಮಹತ್ಯೆ ಮಾಡಿಕೊಂಡ ಜೋಡಿ
author img

By

Published : Mar 30, 2023, 5:06 PM IST

ಧಾರವಾಡ: ಪ್ರೀತಿಗೆ ವಿರೋಧ ವ್ಯಕ್ತವಾದ ಹಿನ್ನೆಲೆ ಪ್ರೇಮಿಗಳಿಬ್ಬರು ನಿರ್ಮಾಣ ಹಂತದ ಮನೆಯಲ್ಲಿ ಆತ್ಮಹತ್ಯೆಗೆ ಶರಣಾದ ಘಟನೆ ಬುಧವಾರ ನಡೆದಿದೆ. ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಇಬ್ಬರು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಬಾಲಕಿ ಮನೆಯವರಿಂದ ಪ್ರೀತಿಗೆ ವಿರೋಧ : ಅದೇ ಗ್ರಾಮದ 22 ವರ್ಷದ ಯುವಕ ಹಾಗೂ 16 ವರ್ಷದ ಅಪ್ರಾಪ್ತೆ ಆತ್ಮಹತ್ಯೆಗೆ ಶರಣಾದವರು. ಇವರಿಬ್ಬರ ಮಧ್ಯೆ ಕಳೆದ ಹಲವಾರು ವರ್ಷದಿಂದ ಪ್ರೇಮ ಏರ್ಪಟ್ಟಿತ್ತು. ಕಳೆದ ಮೂರ್ನಾಲ್ಕು ದಿನಗಳಿಂದ ಈ ಇಬ್ಬರೂ ನಾಪತ್ತೆ ಕೂಡ ಆಗಿದ್ದರು.

ನಿರ್ಮಾಣ ಹಂತದ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು: ಹುಡುಗಿಯ ತಂದೆ ತಾಯಿ ತಮ್ಮ ಮಗಳು ಕಾಣೆಯಾಗಿದ್ದಾಳೆ ಎಂದು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ಸಹ ನೀಡಿದ್ದರು. ಆದರೆ ಇಬ್ಬರು ಪ್ರೇಮಿಗಳು ಆ ಯುವಕನ ನಿರ್ಮಾಣ ಹಂತದ ಮನೆಯಲ್ಲಿ ನಿನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಬ್ಬರು ಪ್ರೀತಿಸುತ್ತಿದ್ದ ವಿಷಯ ಎರಡು ಮನೆಯಲ್ಲಿಯೂ ತಿಳಿದಿತ್ತು.

ಮೃತದೇಹಗಳನ್ನು ಕೆಳಗಿಳಿಸಿ ಮರಣೋತ್ತರ ಪರೀಕ್ಷೆಗೆ ರವಾನೆ: ಜೋಡಿ ಮಂಗಳವಾರ ರಾತ್ರಿ ನಾಪತ್ತೆಯಾಗಿದ್ದರು. ಬುಧವಾರ ನಿರ್ಮಾಣ ಹಂತದ ಕಟ್ಟಡದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನನ್ನ ಮಗಳು ಹಾಗೂ ಯುವಕ ಇಬ್ಬರು ಪ್ರೀತಿಸುತ್ತಿದ್ದರು. ನಂತರ ಇಬ್ಬರು ಮಾನಸಿಕವಾಗಿ ನೊಂದು ನಿರ್ಮಾಣ ಹಂತದ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗಳ ಹಾಗೂ ಯುವಕನ ಸಾವಿನಲ್ಲಿ ನಮಗೆ ಯಾವುದೇ ಸಂಶಯವಿರುವುದಿಲ್ಲ ಎಂದು ಮೃತಳ ತಾಯಿ ಅವರು ನೀಡಿರುವ ವರದಿಯನ್ನು ಸ್ವೀಕರಿಸಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ : ಬೆಂಗಳೂರು: ಪತ್ನಿ ಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ ಪತಿ

ಪ್ರೇಮಿಗಳು ಆತ್ಮಹತ್ಯೆ : ಇನ್ನೊಂದೆಡೆ ಮನೆಯಲ್ಲಿ ಮದುವೆಗೆ ನಿರಾಕರಿಸಿದ್ದರಿಂದ ಮನನೊಂದು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಜೈನಾಪೂರ ಗ್ರಾಮದ ಹೊರವಲಯದಲ್ಲಿ (ಜನವರಿ 18, 2023) ಬುಧವಾರ ನಡೆದಿತ್ತು. 23 ವರ್ಷದ ಯುವಕ 19 ವರ್ಷ ಹರೆಯದ ಯುವತಿ ಮೃತಪಟ್ಟಿರುವ ಪ್ರೇಮಿಗಳು ಎಂದು ಗುರುತಿಸಲಾಗಿತ್ತು. ಈ ಪ್ರೇಮಿಗಳು ಆತ್ಮಹತ್ಯೆಗೂ ಮುನ್ನ ಮದುವೆ ಆಗಿದ್ದರು ಎಂದು ತಿಳಿದು ಬಂದಿತ್ತು.

ಇದನ್ನೂ ಓದಿ : ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ: ರಾಯಚೂರಿನಲ್ಲಿ ಪ್ರಾಂಶುಪಾಲ ಅರೆಸ್ಟ್‌

ಬಸವನ ಬಾಗೇವಾಡಿಯ ಜೈನಾಪೂರ ಗ್ರಾಮದ ಹೊರ ವಲಯದ ತೋಟವೊಂದರಲ್ಲಿ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿತ್ತು. ಪರಸ್ಪರ ಪ್ರೀತಿಸುತ್ತಿದ್ದ ಯುವಕ ಮತ್ತು ಯುವತಿ ಮಂಗಳವಾರವೇ ಮನೆಯಿಂದ ನಾಪತ್ತೆ ಆಗಿದ್ದರು. ಇಬ್ಬರೂ ಕಳೆದ ಮೂರ್ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು ಎಂಬ ಮಾಹಿತಿ ಸಿಕ್ಕಿತ್ತು.

ಇದನ್ನೂ ಓದಿ : ವಿಜಯಪುರದಲ್ಲಿ ಪ್ರೇಮಿಗಳು ಆತ್ಮಹತ್ಯೆ.. ಹರಪನಹಳ್ಳಿಯಲ್ಲಿ ಮಕ್ಕಳೊಂದಿಗೆ ತಾಯಿ ಸೂಸೈಡ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.