ETV Bharat / state

ಪೊಲೀಸ್​ ಆಯುಕ್ತರ ಕರ್ತವ್ಯ ಲೋಪ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಜಾಮೀನು ಕೋರಿದ್ದಾರೆ: ಅಶೋಕ ಅಣ್ವೇಕರ

author img

By

Published : Mar 5, 2020, 7:04 PM IST

ಹುಬ್ಬಳ್ಳಿಯಲ್ಲಿ ಪಾಕ್​ ಪರ ವಿದ್ಯಾರ್ಥಿಗಳು ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರು ವಕೀಲರ ತಂಡ ಜಾಮೀನು ಅರ್ಜಿ ಸಲ್ಲಿಸಿದ್ದು, ಪೊಲೀಸ್ ಆಯುಕ್ತರು ಮಾಡಿದ ಕರ್ತವ್ಯ ಲೋಪದ ಆಧಾರದ ಮೇಲೆ ಜಾಮೀನು ಕೇಳಿದ್ದಾರೆ ಎಂದು ಹುಬ್ಬಳ್ಳಿ ವಕೀಲರಾದ ಅಶೋಕ ಅಣ್ವೇಕರ ಹಾಗೂ ಶಿವಾನಂದ ವಡ್ಡಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.

Lawyers
ಬೇಸರ ವ್ಯಕ್ತಪಡಿಸಿದ ವಕೀಲರು

ಹುಬ್ಬಳ್ಳಿ: ಪಾಕ್ ಪರ ಘೋಷಣೆ ಪ್ರಕರಣದ ಆರೋಪಿಗಳ ಪರ ವಕೀಲರು, ಪೊಲೀಸ್ ಆಯುಕ್ತರು ಮಾಡಿದ ಕರ್ತವ್ಯ ಲೋಪದ ಆಧಾರದ ಮೆಲೆ ಜಾಮೀನು ಕೇಳಿದ್ದಾರೆ ಎಂದು ಯುವ ವಕೀಲರ ವೇದಿಕೆ ಮುಖಂಡ ಅಶೋಕ ಅಣ್ವೇಕರ ಹಾಗೂ ಶಿವಾನಂದ ವಡ್ಡಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ್ರೋಹಿಗಳ ಜಾಮೀನು ಅರ್ಜಿ ವಿಚಾರಣೆ ಹಿನ್ನೆಲೆಯಲ್ಲಿ ಪೊಲೀಸ್ ಆಯುಕ್ತ ಆರ್. ದಿಲೀಪ್ ಅವರೇ ಬಾಂಡ್ ಮೇಲೆ ಬಿಡುಗಡೆ ಮಾಡಿದ್ದರು ಎಂಬುವಂತಹ ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಆರೋಪಿಗಳ ಪರ ವಕೀಲರು ಜಾಮೀನು ಕೇಳಿದ್ದಾರೆ ಎಂದು ದೂರಿದರು.

ಆರೋಪಿಗಳ ಪರ ವಕೀಲ ಬಿ.ಟಿ.ವೆಂಕಟೇಶ ಅವರು ವಾದ ಮಂಡಿಸಿದ್ದು, ಹು-ಧಾ ಕಮೀಷನರ್ ದಿಲೀಪ್ 169 ಸಿಆರ್​​ಪಿಸಿ ಬಾಂಡ್ ಮೇಲೆ ಬಿಡುಗಡೆ ಮಾಡಿದ್ದರು ಎಂದು ವಾದ ಮಾಡಿದ್ದಾರೆ. ಅದಕ್ಕೆ ಪ್ರತಿಯಾಗಿ ಸರ್ಕಾರಿ ವಕೀಲರಿಂದ ಜಾಮೀನು ನೀಡಿದರೆ ಸಾಕ್ಷ್ಯ ನಾಶ ಮಾಡುತ್ತಾರೆಂದು ಪ್ರತಿವಾದ ಮಾಡಲಾಗಿದೆ ಎಂದು ಅವರು ಹೇಳಿದರು.

ಇಬ್ಬರ ವಾದ-ಪ್ರತಿವಾದ ಕೇಳಿದ ನ್ಯಾಯಾಧೀಶರು, ತೀರ್ಪನ್ನು ಮಾ.9ಕ್ಕೆ ಮೂಂದುಡಿ ಆದೇಶ ನೀಡಿದ್ದಾರೆ. ಕೋರ್ಟ್ ಜಾಮೀನು ನೀಡಿದರೆ ಅದಕ್ಕೆ ನೇರ ಹೊಣೆಗಾರಿಕೆ ಪೊಲೀಸ್ ಆಯುಕ್ತರ ಕರ್ತವ್ಯ ಲೋಪ ಕಾರಣ ಎಂದು ಆರೋಪಿಸಿದ ಅವರು, ಪೊಲೀಸ್ ಇಲಾಖೆಯ ಕರ್ತವ್ಯ ಲೋಪದ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಹುಬ್ಬಳ್ಳಿ ವಕೀಲರ ಕ್ಷಮೆಯಾಚನೆ ಮಾಡಿದ ಆರೋಪಿಗಳ ಪರ ವಕೀಲ:

ಕಳೆದ ಬಾರಿ ನ್ಯಾಯಾಲಯಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಆರೋಪಿಗಳ ಪರ ವಕೀಲ ಬಿ.ಟಿ.ವೆಂಕಟೇಶ ,ಹುಬ್ಬಳ್ಳಿ ವಕೀಲರಿಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು. ಇದು ಹುಬ್ಬಳ್ಳಿ ವಕೀಲರ ಕೆಂಗಣ್ಣಿಗೆ ಗುರಿಯಾಗಿತ್ತು. ಇಂದು ಜಾಮೀನು ಅರ್ಜಿ ವಿಚಾರಣೆಗೆ ಆಗಮಿಸಿದ್ದ ಬಿ.ಟಿ.ವೆಂಕಟೇಶ ಹುಬ್ಬಳ್ಳಿ ಬಾರ್ ಕೌನ್ಸಿಲ್ ಅಧ್ಯಕ್ಷರಾದ ಅಶೋಕ ಬಳಿಗಾರ ಅವರನ್ನು ಭೇಟಿಯಾಗಿ ಮೌಖಿಕವಾಗಿ ಕ್ಷಮೆ ಯಾಚಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.