ETV Bharat / state

ಬಂದ್ ಆದೇಶದ ನಂತರವೂ ಕಾನೂನು ಘಟಿಕೋತ್ಸವ: ಕಾನೂನು ಸಚಿವರ ಸ್ಪಷ್ಟನೆ - Dharwad Law university Convention

'ಹೊರಗಡೆಯಿಂದ ಬಹಳ ಜನ ವಿದ್ಯಾರ್ಥಿಗಳು ಬಂದಾಗಿತ್ತು. ಹೀಗಾಗಿ ಸರ್ಕಾರದ ಅನುಮತಿ ಪಡೆದುಕೊಂಡು ರಾಜ್ಯಪಾಲರ ಅನುಪಸ್ಥಿತಿ ಮಧ್ಯೆ ಘಟಿಕೋತ್ಸವ ಕಾರ್ಯಕ್ರಮ ಮಾಡಿದ್ದೇವೆ'.

law-minister-jc-madhuswamy-reaction-about-dharwad-law-university-convention
ಬಂದ್ ಆದೇಶದ ನಂತರವೂ ಕಾನೂನು ಘಟಿಕೋತ್ಸವ..ಸ್ಪಷ್ಟನೆ ನೀಡಿದ ಕಾನೂನು ಸಚಿವ
author img

By

Published : Mar 14, 2020, 7:41 PM IST

ಧಾರವಾಡ: ಕೊರೊನಾ ಮಧ್ಯೆಯೂ ಧಾರವಾಡ ಕಾನೂನು ವಿವಿ ಘಟಿಕೋತ್ಸವ ನಡೆಸಿದ ವಿಚಾರಕ್ಕೆ‌ ಸಂಬಂಧಿಸಿದಂತೆ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

ಬಂದ್ ಆದೇಶದ ನಂತರವೂ ಕಾನೂನು ಘಟಿಕೋತ್ಸವ..ಸ್ಪಷ್ಟನೆ ನೀಡಿದ ಕಾನೂನು ಸಚಿವ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊರಗಡೆಯಿಂದ ಬಹಳ ಜನ ವಿದ್ಯಾರ್ಥಿಗಳು ಆಗಲೇ ಬಂದಿದ್ದು, ಹೀಗಾಗಿ ಸರ್ಕಾರದ ಅನುಮತಿ ಪಡೆದುಕೊಂಡು ರಾಜ್ಯಪಾಲರ ಅನುಪಸ್ಥಿತಿ ಮಧ್ಯೆ ಘಟಿಕೋತ್ಸವ ಕಾರ್ಯಕ್ರಮ ಮಾಡಿದ್ದೇವೆ. ಕಲಬುರಗಿಯಲ್ಲಿ ಕೊರೊನಾ ಪಾಸಿಟಿವ್ ಆಗಿದ್ದು, ಆ ಕಾರಣ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದೇವೆ. ಸಾರ್ವಜನಿಕ ಸಭೆ ಸಮಾರಂಭ ನಡೆಸದಂತೆ ನಿನ್ನೆ ಸಂಜೆಯೇ ಆದೇಶವಾಗಿದೆ. ಸಂಜೆಯಾದ ಕಾರಣ ಇಂದು ಘಟಿಕೋತ್ಸವ ಮಾಡಿದ್ದೇವೆ ಎಂದರು.

ಕೊರೊನಾ ಬಗ್ಗೆ ರಾಜ್ಯದ ಜನ ಆತಂಕಪಡುವ ಪ್ರಶ್ನೆ ಇಲ್ಲ. ನಮ್ಮಲ್ಲಿ ಪಾಸಿಟಿವ್ ಪ್ರಮಾಣ ಕಡಿಮೆಯಿದ್ದು, ಸರ್ಕಾರ ಜನರ ಜೊತೆಗೆ ಇದೆ. ಮಾಡಬೇಕಾದ ಆರೈಕೆ ಮತ್ತು ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.