ETV Bharat / state

ಫಿಟ್ನೆಸ್​ ಕಳೆದುಕೊಂಡು ಸೊರಗಿದ ಜಿಮ್‌ಗಳು.. ಮಾಲೀಕರ ಜೇಬು ವೇಯ್ಟ್ 'ಲಾಸ್'!! - latest news at hubli

ಇದೀಗ ಲಾಕ್​ಡೌನ್ ಸಡಿಲಿಕೆಯಿಂದ ಜಿಮ್ ಪ್ರಾರಂಭ ಮಾಡಲು ಅನುಮತಿ ‌ನೀಡುತ್ತಾರೆ ಎಂಬ ಭರವಸೆಯಲ್ಲಿ ಸರ್ಕಾರದ ಆದೇಶಕ್ಕೆ ಕಾಯುತ್ತಿದ್ದಾರೆ. ಸರ್ಕಾರ ಆದೇಶ‌‌‌ ನೀಡಿದರೂ ಕೂಡ ಜಿಮ್ ಆಸಕ್ತರು ಬರುವ ನಿರೀಕ್ಷೆ ಕಡಿಮೆ ಇದೆ.

lackdown-effect
ಜಿಮ್​ ಮಾಲೀಕರು ಕಂಗಾಲು
author img

By

Published : May 31, 2020, 7:13 PM IST

ಹುಬ್ಬಳ್ಳಿ : ಕೊರೊನಾ ಮಹಾಮಾರಿಯಿಂದ ಹಲವಾರು ಕ್ಷೇತ್ರಗಳು ನಲುಗಿವೆ. ಜಿಮ್ ಮಾಲೀಕರು ಸಹ ಆದಾಯವಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಲಾಕ್​ಡೌನ್ ಹಿನ್ನೆಲೆ ಅಗತ್ಯ ವಸ್ತುಗಳನ್ನು ಹೊರತುಪಡಿಸಿ, ಎಲ್ಲಾ ವ್ಯಾಪಾರ, ವಹಿವಾಟು ಸ್ಥಗಿತಗೊಳಿಸುವಂತೆ ಆದೇಶಿಸಿದ ಪರಿಣಾಮ ಜಿಮ್‌ಗಳನ್ನೂ ಕೂಡ ಬಂದ್​ ಮಾಡಲಾಯಿತು. ಇದರಿಂದಾಗಿ ಇದನ್ನ ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಕುಟುಂಬಗಳು ಎರಡು ತಿಂಗಳಿಂದ ಕೈಯಲ್ಲಿ ಕೆಲಸವಿಲ್ಲದೇ ಜೀವನ ನಿರ್ವಹಣೆಗೆ ಕಷ್ಟಪಡುವಂತಾಗಿವೆ.

ಇದೀಗ ಲಾಕ್​ಡೌನ್ ಸಡಿಲಿಕೆಯಿಂದ ಜಿಮ್ ಪ್ರಾರಂಭ ಮಾಡಲು ಅನುಮತಿ ‌ನೀಡುತ್ತಾರೆ ಎಂಬ ಭರವಸೆಯಲ್ಲಿ ಸರ್ಕಾರದ ಆದೇಶಕ್ಕೆ ಕಾಯುತ್ತಿದ್ದಾರೆ. ಸರ್ಕಾರ ಆದೇಶ‌‌‌ ನೀಡಿದರೂ ಕೂಡ ಜಿಮ್ ಆಸಕ್ತರು ಬರುವ ನಿರೀಕ್ಷೆ ಕಡಿಮೆ ಇದೆ.

ಫಿಟ್ನೆಸ್‌ ಕಳೆದುಕೊಂಡು ಸೊರಗಿದ ಜಿಮ್‌ಗಳು..

ಜಿಮ್‌ ಬಾಡಿಗೆ ಹಾಗೂ ಟ್ರೈನರ್​ಗಳಿಗೆ ಕೊಡಲು ಹಣವಿಲ್ಲದೆ ಪರದಾಡುವಂತಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರ ಜಿಮ್ ತೆರೆಯಲು ಅವಕಾಶ ನೀಡಿದ್ರೆ, ಮುಂಜಾಗ್ರತಾ ಕ್ರಮವಾಗಿ ಮಾಸ್ಕ್, ಸ್ಯಾನಿಟೈಜರ್​, ಸ್ಕ್ರೀನಿಂಗ್ ಟೆಸ್ಟ್​ಗೆ ಒಳಪಡಿಸಿಯೇ ಒಳಗಡೆಗೆ ಬರಲು ಅವಕಾಶ ಮಾಡಿಕೊಡಲು ಫಿಟ್ನೆಸ್​ ಸೆಂಟರ್‌ಗಳು ಸಿದ್ಧತೆ ನಡೆಸಿವೆ.

ಸಂಕಷ್ಟಕ್ಕೀಡಾಗಿರುವ ಫಿಟ್ನೆಸ್​ ಕೇಂದ್ರಗಳಿಗೂ ಸರ್ಕಾರ ಪರಿಹಾರ ನೀಡಬೇಕೆಂದು ಜಿಮ್​ ಮಾಲೀಕರು ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.