ಧಾರವಾಡ: ಕೊರೊನಾ ಸೋಂಕು ತಡೆಯಲು ಲಾಕ್ಡೌನ್ ಮಾಡಿದ ಪರಿಣಾಮ ಆಶ್ರಯ ತಾಣದಲ್ಲಿದ್ದ ಕಾರ್ಮಿಕ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳ ಗ್ರಾಮದ ಹನುಮಂತಪ್ಪ ಬೇನಾಳ ಮೃತ ವ್ಯಕ್ತಿ.
ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಕಾರ್ಮಿಕ ಆಶ್ರಯ ಪಡೆಯುತ್ತಿದ್ದ ಈತನನ್ನು ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.