ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡದ ಪೊಲೀಸ್ ಕಮೀಷನರೇಟ್ನ ಕಾನೂನು ಮತ್ತು ಸುವ್ಯವಸ್ಥೆ ನೂತನ ಡಿಸಿಪಿಯಾಗಿ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಸಹಾಯಕ ಪೊಲೀಸ್ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆ.ರಾಮರಾಜನ್ ಅವರನ್ನು ಓಓಡಿ (ಅನ್ಯ ಕರ್ತವ್ಯದ ಆಧಾರದ ಮೇಲೆ) ಕರ್ತವ್ಯದ ಆಧಾರದ ಮೇಲೆ ನಿಯೋಜಿಸಲಾಗಿದೆ.
ಹು-ಧಾ ಪೊಲೀಸ್ ಕಮಿಷನರೇಟ್ನಲ್ಲಿ ಡಿಸಿಪಿ ಕಾನೂನು ಸುವ್ಯವಸ್ಥೆ ಹುದ್ದೆ ಖಾಲಿ ಇದ್ದು, ಅದನ್ನು ಧಾರವಾಡದ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಕಾಂತ ಅವರು ಪ್ರಭಾರಿ ಆದೇಶದ ಮೇರೆಗೆ ನಿರ್ವಹಣೆ ಮಾಡುತ್ತಿದ್ದರು.
![K. Ramarajan, IPS officer as Law & Order DCP](https://etvbharatimages.akamaized.net/etvbharat/prod-images/kn-hbl-05-hubli-new-dcp-av-7208089_18112020163840_1811f_1605697720_946.jpg)
ಈಗ ಓಓಡಿ ಆದೇಶದ ಮೇರೆಗೆ ಕೆ.ರಾಮರಾಜನ್ ಅವರನ್ನು ನಿಯೋಜಿಸಲಾಗಿದ್ದು, ಜಿಲ್ಲಾ ವರಿಷ್ಠಾಧಿಕಾರಿ ಹಾಗೂ ಡಿಸಿಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿ.ಕೃಷ್ಣಕಾಂತ ಅವರಿಗೆ ಹೊರೆ ಕಡಿಮೆಯಾದಂತಾಗಿದೆ.