ಹುಬ್ಬಳ್ಳಿ: ಬ್ಯಾಂಕ್ ಕಾರ್ಮಿಕ ಸಂಘಗಳ ಸಂಯುಕ್ತ ವೇದಿಕೆ ವತಿಯಿಂದ ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಳನ್ನು ಈಡೇರಿಸುವಂತೆ ಆಗ್ರಹಿಸಿ ಜ.31 ಮತ್ತು ಫೆ.01ರಂದು ಎರಡು ದಿನಗಳ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಎಐಬಿಒಸಿ ಮುಖಂಡ ರಾಮಮೋಹನ ತಿಳಿಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವೇತನ ಪರಿಷ್ಕರಣೆ, ಐದು ದಿನ ಬ್ಯಾಂಕಿಂಗ್ ಜಾರಿಗೊಳಿಸುವುದು, ಪಿಂಚಣಿ ಮತ್ತು ಕುಟುಂಬ ಪಿಂಚಣಿಯಲ್ಲಿ ಸುಧಾರಣೆ, ಹೊಸ ಪಿಂಚಣಿ ಯೋಜನೆ ರದ್ದುಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆನ್ನು ಈಡೇರಿಸುವಂತೆ ಆಗ್ರಹಿಸಿ ಬ್ಯಾಂಕ್ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದರು.
ಮುಷ್ಕರದಲ್ಲಿ ಎಐಬಿಇಒ, ಎಐಬಿಒಸಿ, ಎನ್ಸಿಬಿಇ, ಎಐಬಿಒಎ, ಬಿಇಎಫ್ಐ, ಐಎಬಿಇಎಫ್, ಐಎನ್ಸಿಒಸಿ, ಎನ್ಒಬಿಡಬ್ಲೂ, ಎನ್ಒಬಿಒ ಬ್ಯಾಂಕ್ ಸಂಘಟನೆಗಳು ಬೆಂಬಲ ಸೂಚಿಸಿದ್ದು, ಎರಡು ದಿನದ ಮುಷ್ಕರಕ್ಕೆ ಕೈಜೋಡಿಸಲಿದ್ದಾರೆ ಅವರು ಮಾಹಿತಿ ನೀಡಿದರು.
ಫೆಬ್ರವರಿ 01ರಂದು ಎಲ್ಲ ಬ್ಯಾಂಕ್ ಸಂಘಟನೆಗಳ ಒಕ್ಕೋರಲಿನಿಂದ ತಹಶಿಲ್ದಾರ್ ಕಚೇರಿಗೆ ತೆರಳಿ ಅವರ ಮೂಲಕ ಪ್ರಧಾನಮಂತ್ರಿ ಅವರಿಗೆ ಮನವಿ ಸಲ್ಲಿಸಲಾಗುವುವುದು ಎಂದು ರಾಮಮೋಹನ್ ತಿಳಿಸಿದರು.