ಹುಬ್ಬಳ್ಳಿ: ಮಹಾರಾಷ್ಟ್ರ ಹಾಗೂ ಹರಿಯಾಣದಲ್ಲಿ ಬಿಜೆಪಿ ಸರ್ಕಾರ ರಚನೆ ಖಚಿತ ಎಂದು ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 5 ವರ್ಷದ ಆಡಳಿತ ನಡೆಸಿದಾಗ ಆಡಳಿತ ವಿರೋಧಿ ಅಲೆ ಸಹಜ. ಈ ಹಿನ್ನೆಲೆಯಲ್ಲಿ ಫಲಿತಾಂಶ ಏರುಪೇರು ಆಗುತ್ತದೆ. ಸ್ಥಳೀಯ ಪ್ರಾದೇಶಿಕ ಪಕ್ಷಗಳ ಜೊತೆಗೂಡಿ ಸರ್ಕಾರ ರಚನೆ ಮಾಡುತ್ತೇವೆ ಎಂದರು.
ಇನ್ನು ಇದೇ ವೇಳೆ ವಿರೋಧ ಪಕ್ಷದ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ನೆರೆ ವಿಚಾರದಲ್ಲಿ ರಾಜಕೀಯ ಮಾಡೋದು ಒಳ್ಳೆಯದಲ್ಲ. ಪಾದಯಾತ್ರೆ ಮಾಡೋದು ಬಿಟ್ಟು ರಚನಾತ್ಮಕವಾಗಿ ವಿರೋಧ ಪಕ್ಷದ ಕೆಲಸ ಮಾಡಲಿ ಎಂದರು.
ಇಲ್ಲಿಯವರೆಗೂ ಚುನಾವಣೆ ಫಲಿತಾಂಶ ಬಂದಾಗ ಇವಿಎಂ ಬಗ್ಗೆ ಆರೋಪ ಮಾಡುತ್ತಿದ್ದ ಅವರು, ಈಗ ಇಡಿ, ಐಟಿ ಎನ್ನುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ವೋಟ್ ಬ್ಯಾಂಕ್ ನೆಲಕಚ್ಚಿದೆ ಎಂದರು.
ಡಿಕೆಶಿ ಬಿಡುಗಡೆಯಾಗಿದ್ದು ಕಾಂಗ್ರೆಸಿಗೆ ಶಕ್ತಿ ಬಂದಿದೆ ಎಂಬ ಗುಂಡುರಾವ್ಗೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಶೆಟ್ಟರ್, ಕಾಂಗ್ರೆಸ್ಗೆ ಇಲ್ಲಿಯವರೆಗೂ ಶಕ್ತಿ ಇರಲಿಲ್ವಾ? ಡಿಕೆಶಿಯಿಂದಲೇ ಕಾಂಗ್ರೆಸ್ಗೆ ಶಕ್ತಿ ಬರುತ್ತಾ ಎಂದು ಟೀಕಿಸಿದರು.