ಹುಬ್ಬಳ್ಳಿ: ಸಿದ್ದರಾಮಯ್ಯ ಮತ್ತು ಡಿಕೆಶಿಗೆ ಸಂಘಪರಿವಾರದ ಹೆಸರು ತೆಗೆದುಕೊಳ್ಳದೇ ಇದ್ದರೆ ತಿಂದಿದ್ದು ಅರಗುವುದಿಲ್ಲ. ರಾಜ್ಯದಲ್ಲಿನ ಎಲ್ಲ ಸಮಸ್ಯೆಗಳಿಗೂ ಸಂಘವನ್ನೇ ಗುರಿ ಮಾಡುತ್ತಾರೆ. ಪದೇ ಪದೆ ಆರ್‌ಎಸ್‌ಎಸ್ ಹೆಸರು ಹೇಳೋದು ಖಯಾಲಿಯಾಗಿ ಬಿಟ್ಟಿದೆ ಎಂದು ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದರು.
ಸರ್ಕಾರದ ಬಗ್ಗೆಯಾಗಲಿ ಅಥವಾ ಮುಖ್ಯಮಂತ್ರಿಗಳ ಬಗ್ಗೆಯಾಗಲಿ ಏನಾದ್ರೂ ಮಾತಾಡೋದಿದ್ರೆ ಮಾತನಾಡಲಿ. ಅದನ್ನು ಬಿಟ್ಟು ಸಂಘಪರಿವಾರದ ವಿರುದ್ಧ ಅನಗತ್ಯ ಟೀಕೆ ಮಾಡೋದು ಸರಿಯಲ್ಲ. ಪ್ರತಿಪಕ್ಷದ ವೈಫಲ್ಯತೆಯನ್ನು ಮುಚ್ಚಿಕೊಳ್ಳಲು ಇವತ್ತು ಸಂಘದ ಹೆಸರನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ಶೆಟ್ಟರ್ ಹೇಳಿದರು.
ಧಾರವಾಡದಲ್ಲಿ ಮುಸ್ಲಿಂ ವ್ಯಾಪಾರಿಗಳ ಅಂಗಡಿ ತೆರವು ವೇಳೆ ದಾಂದಲೆ ಮಾಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದಕ್ಕೆ ಒಬ್ಬರನ್ನೇ ಹೊಣೆಗಾರರನ್ನಾಗಿ ಮಾಡೋಕೆ ಆಗಲ್ಲ. ಎರಡೂ ಕಡೆಯವರಲ್ಲಿ ಸಂಯಮ ಇದ್ದಿದ್ದರೆ ಈ ರೀತಿಯ ಘಟನೆಗಳು ನಡೆಯುತ್ತಿರಲಿಲ್ಲ. ಕಲ್ಲಂಗಡಿ ಹಣ್ಣು ಎಸೆದಾಗ ವ್ಯಾಪಾರಿಯ ಪರ ಮಾತಾಡೋರು ಶಿವಮೊಗ್ಗದ ಹರ್ಷನ ಕೊಲೆ ಬಗ್ಗೆ ಯಾಕೆ ಮಾತಾಡಲ್ಲ?. ಕೇವಲ ಒಂದು ಸಮಾಜದ, ಒಂದು ಸಮುದಾಯದ ತಪ್ಪನ್ನೇ ಎತ್ತಿ ತೋರಿಸುವುದು ಸರಿಯಲ್ಲ ಎಂದರು.
ಇದನ್ನೂ ಓದಿ: ಅವ್ರರವ್ರ ರಕ್ಷಣೆ ಅವ್ರು ಮಾಡ್ಕೊಳ್ಳಲು ಎಲ್ರೂ ಸ್ವತಂತ್ರರು.. ನಾವ್ ಮಾತ್ನಾಡಬಾರ್ದು, ನಮ್ ಕೆಲ್ಸಾ ಮಾತ್ನಾಡ್ಬೇಕು : ಸಿಎಂ