ETV Bharat / state

ನನ್ನನ್ನ ಸಿಎಂ ಮಾಡ್ತೀನಿ ಅಂತಾ ಯಾರೂ ಹೇಳಿಲ್ಲ.. ಸಚಿವ ಜಗದೀಶ್ ಶೆಟ್ಟರ್

ಐದು ವರ್ಷಗಳ ಸರ್ಕಾರದ ಮೇಲೆ ಸಹಜವಾಗೇ ಆಡಳಿತ ವಿರೋಧಿ ಅಲೆ ಇರುತ್ತೆ. ಆದರೆ, ಕಳೆದ ವರ್ಷ ಅದೆಲ್ಲವನ್ನ ಮೀರಿ ಅಭೂತಪೂರ್ವ ಗೆಲುವು ಸಾಧಿಸಿದ್ದೇವೆ. ರಾಜ್ಯದಲ್ಲೂ ಲೋಕಸಭೆಯ 28 ಕ್ಷೇತ್ರಗಳ ಪೈಕಿ 25ರಲ್ಲಿ ಗೆಲುವು ಕಂಡಿದ್ದೇವೆ.

Jagadish shettar talking about MLAs meeting at hubli
ಜಗದೀಶ್ ಶೆಟ್ಟರ್...
author img

By

Published : Jun 1, 2020, 3:49 PM IST

ಹುಬ್ಬಳ್ಳಿ: ನನ್ನನ್ನ ಸಿಎಂ ಮಾಡ್ತೀನಿ ಅಂತ ಯಾರೂ ಹೇಳಿಲ್ಲ. ನೀವೇ ನನಗೆ ಹೇಳಿದ್ದು ಎಂದು ಮಾಧ್ಯಮದವರಿಗೆ ಬೃಹತ್ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ನಗರದಲ್ಲಿಂದು ‌ಮಾತನಾಡಿದ ಅವರು, ಯಡಿಯೂರಪ್ಪ ನಂತರ ನೀವೇ ಸಿಎಂ ಆಗಲಿದ್ದೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ, ನಂಗ್ಯಾರೂ ಫೋನ್ ಮಾಡಿ ಚರ್ಚೆ ಮಾಡಿಲ್ಲ. ನಮ್ಮದು ಶಿಸ್ತಿನ ಪಕ್ಷ, ಶಾಸಕರು ಈ ರೀತಿ ಸಭೆ ಮಾಡೋದು ಸರಿಯಲ್ಲ. ಪಕ್ಷದ ವೇದಿಕೆಯಲ್ಲಿ ಎಲ್ಲವೂ ಸರಿಪಡಿಸಿಕೊಳ್ಳಬೇಕು. ನಮ್ಮ ಪಕ್ಷದ ನಾಯಕರು ಅದನ್ನ ಬಗೆಹರಿಸುತ್ತಾರೆ ಎಂದರು.

ಸಚಿವ ಜಗದೀಶ್ ಶೆಟ್ಟರ್
ನಮಸ್ತೆ ಟ್ರಂಪ್ ಕಾರ್ಯಕ್ರದಿಂದ ಕೊರೊನಾ ಅತೀ ಹೆಚ್ಚು ಹರಡಿದೆ ಎನ್ನುವ ಶಿವಸೇನೆ ಸಂಸದ ಸಂಜಯ್ ರಾವತ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಅವರು ಟೀಕೆ ಮಾಡ್ಲೇಬೇಕು ಅಂತಾ ಮಾಡುತ್ತಿದ್ದಾರೆ. ಇಷ್ಟು ದಿನ ಯಾಕೆ ಅದರ ಬಗ್ಗೆ ಮಾತನಾಡಿಲ್ಲ‌. ಇವಾಗ ಏನಾದ್ರು ಟೀಕೆ ಮಾಡಬೇಕು ಅಂತಾ ಅವರು ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು‌. ಮೋದಿ ಸರ್ಕಾರದ 2ನೇ ಅವಧಿಯ ಒಂದು ವರ್ಷ ಸಕ್ಸಸ್ ಆಗಿ‌ ಕಂಪ್ಲೀಟ್​ ಮಾಡಿದೆ. ಐದು ವರ್ಷಗಳ ಸರ್ಕಾರದ ಮೇಲೆ ಸಹಜವಾಗೇ ಆಡಳಿತ ವಿರೋಧಿ ಅಲೆ ಇರುತ್ತೆ. ಆದರೆ, ಕಳೆದ ವರ್ಷ ಅದೆಲ್ಲವನ್ನ ಮೀರಿ ಅಭೂತಪೂರ್ವ ಗೆಲುವು ಸಾಧಿಸಿದ್ದೇವೆ. ರಾಜ್ಯದಲ್ಲೂ ಲೋಕಸಭೆಯ 28 ಕ್ಷೇತ್ರಗಳ ಪೈಕಿ 25ರಲ್ಲಿ ಗೆಲುವು ಕಂಡಿದ್ದೇವೆ. ಹೀಗಾಗಿ ಸಾಕಷ್ಟು ಉತ್ತಮ ಕೆಲಸ ಮಾಡಿದ್ದೇವೆ. ಕಳೆದ ಆರು ವರ್ಷಗಳಿಂದ ಒಂದೇ ಒಂದು ಸಣ್ಣ ಭ್ರಷ್ಟಾಚಾರ ಇಲ್ಲದ ಸರ್ಕಾರ ಮೋದಿಯವರು ನೀಡಿದ್ದಾರೆ ಎಂದರು.
ರಾಮಮಂದಿರ,ತ್ರಿವಳಿ ತಲಾಖ್​,ಪೌರತ್ವ ತಿದ್ದುಪಡಿ ಕಾಯ್ದೆಯಂತ ಬಹಳಷ್ಟು ಕಾಯ್ದೆಗಳನ್ನ ತಂದಿದ್ದಾರೆ. ಕೊರೊನಾ ವೈರಸ್ ವಿರುದ್ಧ ಹೋರಾಟವನ್ನು ಕೂಡಾ ಮೋದಿ ಸರ್ಕಾರ ಯಶಸ್ವಿಯಾಗಿ ಹಿಮ್ಮೆಟ್ಟಿಸಿದೆ. ಕೊರೊನಾದಿಂದ ಸಂಕಷ್ಟದಲ್ಲಿರೋರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಪ್ಯಾಕೇಜ್ ನೀಡಿ. ಕಾರ್ಮಿಕರು ಆಟೋ,ಹೂ,ಹಣ್ಣು ವ್ಯಾಪಾರಸ್ಥರು ಸೇರಿದಂತೆ ಬಹಳಷ್ಟು ಜನರಿಗೆ ಸರ್ಕಾರ ನೆರವು ನೀಡಿದೆ ಎಂದು ತಿಳಿಸಿದರು.
ರಾಹುಲ್ ಗಾಂಧಿ 20 ಲಕ್ಷ ಕೋಟಿ ಪ್ಯಾಕೇಜ್ ಬಗ್ಗೆ ಟೀಕೆ ಮಾಡ್ತಾರೆ. ಇದು ದೂರದೃಷ್ಠಿಯಿಂದ ಕೂಡಿದ ಪ್ಯಾಕೇಜ್. ರಾಹುಲ್‌ ಗಾಂಧಿ ಅದನ್ನ ಅರಿತು ಕೊಳ್ಳಬೇಕು. ಈ ಸಮಯದಲ್ಲಿ ಕಾಂಗ್ರೆಸ್ ಏನಾದ್ರೂ ಅಧಿಕಾರದಲ್ಲಿದ್ರೆ ದೊಡ್ಡ ಅನಾಹುತವೇ ಆಗುತ್ತಿತ್ತು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.