ಹುಬ್ಬಳ್ಳಿ: ಮನೆಗಳ್ಳತನ ಮಾಡಿ ಪರಾರಿಯಾಗಿದ್ದ ಕುಖ್ಯಾತ ಅಂತರರಾಜ್ಯ ಕಳ್ಳನನ್ನು ಬಂಧಿಸುವಲ್ಲಿ ಗೋಕುಲ್ ರೋಡ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ತೆಲಂಗಾಣ ರಾಜ್ಯದ ದ್ವಾರಂಪುಡಿ ವೆಂಕಟೇಶ್ವರ ರೆಡ್ಡಿ (28) ಬಂಧಿತ ಆರೋಪಿ. ಬಂಧಿತನಿಂದ ತೆಲಂಗಾಣ ರಾಜ್ಯದ ಖಮ್ಮಂ ಪೊಲೀಸರ ಸಹಾಯದಿಂದ ಸುಮಾರು 900 ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗೂ 7ಕೆ.ಜಿ ತೂಕದ ಬೆಳ್ಳಿಯ ಸಾಮಾನುಗಳು ಸೇರಿದಂತೆ ಸುಮಾರು 26,13,634 ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
2019ರಲ್ಲಿ ಹುಬ್ಬಳ್ಳಿ ವಿನಾಯಕ ನಗರದಲ್ಲಿ ಮನೆ ಕಳ್ಳತನವಾಗಿತ್ತು. ಈ ಬಗ್ಗೆ ತನಿಖೆ ಕೈಗೊಂಡ ಗೋಕುಲ ರೋಡ ಪೊಲೀಸರು ಖಚಿತ ಮಾಹಿತಿ ಸಂಗ್ರಹಿಸಿ ತೆಲಂಗಾಣ ರಾಜ್ಯದ ಖಮ್ಮಂ ಟೌನ್ ಪೊಲೀಸರ ಸಹಾಯದಿಂದ ಆರೋಪಿಯನ್ನು ಬಂಧಿಸಿದ್ದಾರೆ. ಈ ಮೂಲಕ ಈತ ಭಾಗಿಯಾದ ನಾಲ್ಕು ಮನೆಗಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೋರ್ವ ಪ್ರಮುಖ ಆರೋಪಿ ನದೀಂಪಲ್ಲಿ ವೆಂಕಟ ವಿನಯಗಾಗಿ ಶೋಧ ಮುಂದುವರೆಸಿದ್ದಾರೆ.