ಹುಬ್ಬಳ್ಳಿ: ಲಾಕ್ಡೌನ್ ಸಂದರ್ಭದಲ್ಲಿ ಜನರು ಅನಗತ್ಯವಾಗಿ ಓಡಾಡುವುದನ್ನ ತಡೆಯಲು ಪೊಲೀಸರು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಈ ನಡುವೆಯೂ ಪೊಲೀಸರು ಕಟ್ಟುನಿಟ್ಟನ ಕರ್ತವ್ಯ ವೇಳೆ ಮಾನವೀಯತೆ ಮೆರೆಯುತ್ತಿದ್ದಾರೆ.
ಹೌದು.. ಇಂತಹದೊಂದು ಪ್ರಕರಣ ನಗರದ ಚೆನ್ನಮ್ಮ ಸರ್ಕಲ್ ಬಳಿ ನಡೆದಿದೆ. ಔಷಧಿ ಅಂಗಡಿಗೆ ಹೋಗಿದ್ದ ಯುವಕನೋರ್ವ ಮಾಸ್ಕ್ ಸರಿಯಾಗಿ ಧರಸದೇ ಲಾಕ್ಡೌನ್ ನಿಯಮ ಉಲ್ಲಂಘನೆ ಮಾಡಿದ ಕಾರಣ ಪೊಲೀಸರು ದಂಡ ಹಾಕಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಈ ಯುವಕ ನನ್ನ ಹತ್ತಿರ ದಂಡ ಕಟ್ಟುವಷ್ಟು ಹಣ ಇಲ್ಲ ಎಂದ ಪರಿಪರಿಯಾಗಿ ಬೇಡಿಕೊಂಡಿದ್ದಾನೆ. ಆದರೆ ಪೊಲೀಸರು ತಮ್ಮ ಕರ್ತವ್ಯ ಮಾಡಲೇಬೇಕು. ದಂಡ ಕಟ್ಟಿ ಇಲ್ಲವಾದರೆ ಬೈಕ್ ವಶಕ್ಕೆ ಪಡೆಯುವುದಾಗಿ ತಾಕೀತು ಮಾಡಿದ್ದಾರೆ. ಈ ನಡುವೆ ಯುವಕನ ಸಮಸ್ಯೆ ಅರಿತ ಉಪನಗರ ಪೊಲೀಸ್ ಇನ್ಸ್‌ಪೆಕ್ಟರ್ ರವಿಚಂದ್ರ ಬಡಫಕೀರಪ್ಪನವರ ತಕ್ಷಣವೇ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಈ ಹಿಂದೆ ಸಹ ಕಳೆದ ವರ್ಷ ಲಾಕ್ಡೌನ್ ಸಂದರ್ಭದಲ್ಲಿ ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಔಷಧಿಗಾಗಿ ಪರದಾಡುತಿದ್ದ ಕುಟುಂಬವೊಂದಕ್ಕೆ ಔಷಧವನ್ನು ಹುಬ್ಬಳ್ಳಿಯಿಂದ ಕಳುಹಿಸಿ ಮಾನವೀಯತೆ ಮೆರೆದಿದ್ದರು.