ಧಾರವಾಡ: ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕಿತರೊಂದಿಗಿನ ಪ್ರಾಥಮಿಕ ಹಾಗೂ ಸೆಕೆಂಡರಿ ಸಂಪರ್ಕದಲ್ಲಿ ಇರುವ ಹಾಗೂ ಅವರ ಪ್ರವಾಸದ ತನಿಖೆ ನಡೆಸಲಾಗುತ್ತಿದೆ.
ಬಾಗಲಕೋಟೆ ಜಿಲ್ಲೆಯ ಓರ್ವ ಸೋಂಕಿತ ವ್ಯಕ್ತಿ ಪಿ-162 ಈತ ಮಾ. 16ರಂದು ಸಂಜೆ 4 ಗಂಟೆಗೆ ಕಲಬುರಗಿಯಿಂದ ವಿಜಯಪುರಕ್ಕೆ ಹೊರಟ ಬಸ್ ಸಂಖ್ಯೆ: ಕೆಎ-32 ಎಫ್-2284ನಲ್ಲಿ ಸಂಚರಿಸಿದ್ದಾನೆ. ಹಾಗೂ ಅದೇ ದಿನ ರಾತ್ರಿ 8:30ಕ್ಕೆ ಬೀಳಗಿ ಘಟಕದ ವಿಜಯಪುರದಿಂದ ಹುಬ್ಬಳ್ಳಿಯವರೆಗೆ ವಾಹನ ಸಂಖ್ಯೆ:ಕೆ.ಎ-29 ಎಫ್-1531ನಲ್ಲಿ ಪ್ರಯಾಣಿಸಿದ್ದಾನೆ ಎಂದು ತನಿಖೆಯಿಂದ ತಿಳಿದು ಬಂದಿದೆ.
ಅಂದು ಈ ಬಸ್‍ಗಳಲ್ಲಿ ಸಂಚರಿಸಿದ ಸಾರ್ವಜನಿಕರು ಕೂಡಲೇ ಕೊರೊನಾ ಸಹಾಯವಾಣಿ 104 ಅಥವಾ 1077ಕ್ಕೆ ಕರೆ ಮಾಡಿ ತಮ್ಮ ವಿವರಗಳನ್ನು ತಿಳಿಸಬೇಕು. ಹಾಗೂ ಸಮೀಪದ ತಾಲೂಕು ಆರೋಗ್ಯ ಕೇಂದ್ರಗಳಲ್ಲಾಗಲಿ ಅಥವಾ ಜಿಲ್ಲಾ ಆಸ್ಪತ್ರೆಗಳಲ್ಲಾಗಲಿ ತಮ್ಮ ಆರೋಗ್ಯ ಪರೀಕ್ಷಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.