ಹುಬ್ಬಳ್ಳಿ: ನಿನ್ನೆ ರಾತ್ರಿ ಹುಣ್ಣಿಮೆ ಹಾಗೂ ಚಂದ್ರ ಗ್ರಹಣ ಒಟ್ಟಿಗೆ ಬಂದಿದ್ದರಿಂದಾಗಿ, ಹಳೆ ಹುಬ್ಬಳ್ಳಿಯ ಆನಂದ ನಗರದ ಸ್ಮಶಾನದಲ್ಲಿ ವಾಮಚಾರ ಮಾಡಿರುವ ಘಟನೆ ನಡೆದಿದೆ.
ಸ್ಮಶಾನದಲ್ಲಿ ಸೂಜಿ ಚುಚ್ಚಿದ ನಿಂಬೆಹಣ್ಣು, ಗೊಂಬೆಯಾಕಾರದ ವಸ್ತುಗಳು ಮತ್ತು ತೆಂಗಿನಕಾಯಿಗಳು ಪತ್ತೆಯಾಗಿವೆ. ಇಂದು ಬೆಳಗ್ಗೆ ಮೃತ ವ್ಯಕ್ತಿಯನ್ನು ಹೂಳಲು ನೆಲ ಅಗೆಯುವಾಗ ಈ ವಸ್ತುಗಳು ಪತ್ತೆಯಾಗಿದ್ದು, ಇವುಗಳನ್ನು ಮಾಟ ಮಂತ್ರ ಹಾಗೂ ವಾಮಾಚಾರಕ್ಕೆ ಬಳಸಲಾಗಿದೆ ಎನ್ನಲಾಗಿದೆ.
ಅಮವಾಸ್ಯೆ ಹಾಗೂ ಹುಣ್ಣಿಮೆ ಸಮೀಪ ಬಂದರೆ ಸಾಕು ಹುಬ್ಬಳ್ಳಿಯಲ್ಲಿ ಮಾಟ ಮಂತ್ರ ಹಾಗೂ ವಾಮಾಚಾರ ಮಾಡುವವರ ಹಾವಳಿ ಹೆಚ್ಚಾಗುತ್ತದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.