ಹುಬ್ಬಳ್ಳಿ: ದೇಶದಾದ್ಯಂತ ಜಾರಿ ಮಾಡಲಾಗಿದ್ದ ಲಾಕ್‌ಡೌನ್ ಹಲವು ಕುಟುಂಬಗಳಲ್ಲಿ ಗಂಡ-ಹೆಂಡಿರ ಅಕ್ರಮ ಸಂಬಂಧಗಳನ್ನು ಬಯಲು ಮಾಡಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ.
ಕೊರೊನಾದಿಂದಾಗಿ ಸರ್ಕಾರ ಮತ್ತು ಖಾಸಗಿ ಕಂಪನಿಗಳು ವರ್ಕ್ ಫ್ರಮ್ ಹೋಮ್ ಅಂತ ಹೇಳಿ, ಮನೆಯಲ್ಲಿಯೇ ಕುಳಿತು ಕೆಲಸ ಮಾಡಲು ಸೂಚಿಸಿದ್ದವು. ಇದು ಒಂದಿಷ್ಟು ಜನರಿಗೆ ಅನುಕೂಲವಾದ್ರೆ ಮತ್ತಷ್ಟು ಜನರ ಸಾಂಸಾರಿಕ ವಿರಸಕ್ಕೆ ಕಾರಣವಾಗಿದೆ.
ಮನೆಯಲ್ಲಿ ಪತಿ ಪತ್ನಿ ಒಂದೇ ಕಡೆ ಇರುವುದರಿಂದ ಮೊಬೈಲ್ ಅತಿಯಾಗಿ ಬಳಕೆ ಮಾಡುವುದು, ಒಬ್ಬರಿಗೆ ಗೊತ್ತಿಲ್ಲದೆ ಮತ್ತೊಬ್ಬರು ಫೋನ್ ನಲ್ಲಿ ಮಾತನಾಡುವುದು, ಇದರಿಂದ ಇಬ್ಬರ ನಡುವೆ ಜಗಳ ಉಂಟಾಗುತ್ತಿರುವುದು ಬಯಲಿಗೆ ಬಂದಿದೆ.
ಈ ಕುರಿತು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ 15 ಕ್ಕೂ ಹೆಚ್ಚು ಕೇಸ್ ಗಳು ದಾಖಲಾಗಿವೆ. ಮೊದಲು ಆಫೀಸ್ ಅಥವಾ ಇನ್ನಾವುದೋ ಕೆಲಸಕ್ಕೆ ಅಂತ ಹೊರಗಡೆ ಹೋಗುತ್ತಿದ್ದವರು ಲಾಕ್‌ಡೌನ್‌ನಿಂದಾಗಿ ಮನೆಯಲ್ಲಿಯೇ ಕುಳಿತಿದ್ದಾರೆ. ಹೀಗಾಗಿ ಗುಟ್ಟಾಗಿ ಮಾಡಿಕೊಂಡ ಮತ್ತೊಂದು ಪ್ರೇಮ್ ಕಹಾನಿಗಳು ಲಾಕ್‌ಡೌನ್‌ನಿಂದಾಗಿ ಹೊರಬರುತ್ತಿವೆ.
ಈಗಾಗಲೇ 15 ಕ್ಕೂ ಹೆಚ್ಚು ಕೇಸ್‌ಗಳು ಮಹಿಳಾ ಠಾಣೆ ಮೆಟ್ಟಿಲೇರಿದ್ದು, ಸಖಿ ಒನ್ ಸ್ಟಾಪ್ ಸಿಬ್ಬಂದಿಗೆ ಈ ಕೇಸ್‌ಗಳು ತಲೆನೋವಾಗಿ ಪರಿಣಮಿಸಿದ್ದು, ದಂಪತಿಗಳನ್ನು ಮನವೊಲಿಸುವುದೇ ದೊಡ್ಡ ಸವಾಲಾಗಿದೆಯಂತೆ!.