ಹುಬ್ಬಳ್ಳಿ: ಬಿಆರ್ಟಿಎಸ್ ಕಾರಿಡಾರ್ನಲ್ಲಿ ಸತತವಾಗಿ 34 ಬಾರಿ ಸಂಚಾರ ನಡೆಸಿದ್ದ ಕಾರು ಚಾಲಕನೊಬ್ಬನಿಗೆ ಬಿಆರ್ಟಿಎಸ್ ಬರೊಬ್ಬರಿ 17 ಸಾವಿರ ದಂಡ ವಿಧಿಸಿದ ಅಪರೂಪದ ಪ್ರಕರಣ ಜರುಗಿದೆ.
ನವನಗರದ ಮೊಹಮ್ಮದ್ ಹನೀಫ್ ಸಾವಂತನವರ್ KA 25 MB 2669 ಡಸ್ಟರ್ ಕಾರಿನಲ್ಲಿ ಉಣಕಲ್ ಭಾಗದಲ್ಲಿ ಸತತವಾಗಿ 34 ಬಾರಿ ಓಡಾಡಿದ್ದಾನೆ. ಬಿ ಆರ್ ಟಿಎಸ್ ಮಾರ್ಗದಲ್ಲಿ ಸಂಚರಿಸಿರುವುದು ಕಾರಿಡಾರ್ನಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಹಿನ್ನೆಲೆ ಈ ವಾಹನಕ್ಕೆ ಬಿಆರ್ಟಿಎಸ್ ಸಿಬ್ಬಂದಿ ದಂಡ ವಿಧಿಸಿದ್ದಾರೆ.
ಬಿ ಆರ್ ಟಿಎಸ್ ಮಾರ್ಗದಲ್ಲಿ ಅಕ್ರಮವಾಗಿ ಒಮ್ಮೆ ಸಂಚರಿಸಿದ್ರೆ 500 ರೂಪಾಯಿ ದಂಡವಿದೆ. ಆದ್ರೆ ಇವರು 34 ಬಾರಿ ಸಂಚರಿಸಿದ್ದರಿಂದ ಬರೊಬ್ಬರಿ 17 ಸಾವಿರ ದಂಡ ವಿಧಿಸಲಾಗಿದೆ.
ಪೊಲೀಸರ ಕೈಗೆ ಸಿಕ್ಕಿದ್ದು ಹೀಗೆ:
ಪೂರ್ವ ಸಂಚಾರಿ ಠಾಣೆಯ ಸಿಬ್ಬಂದಿ ಕುಸುಗಲ್ ರಸ್ತೆಯಲ್ಲಿ ಇಂಟರ್ ಸೆಪ್ಟರ್ ಮೂಲಕ ವಾಹನ ತಪಾಸಣೆ ಮಾಡುತ್ತಿದ್ದರು. ಈ ವೇಳೆ ವೇಗವಾಗಿ . ಬಂದ ಹನೀಫ್ ಅವರ ಕಾರು ತಡೆದು ವಾಹನದ ಇತಿಹಾಸ ಜಾಲಾಡಿದಾಗ ಬಿ ಆರ್ ಟಿಎಸ್ ನ 17 ಸಾವಿರ ದಂಡ ಬಾಕಿ ಇರುವುದು ಪತ್ತೆಯಾಗಿದೆ.