ಹುಬ್ಬಳ್ಳಿ: ಕಿಮ್ಸ್ನಲ್ಲಿ ಪ್ಲಾಸ್ಮಾ ಥೆರಪಿಗೆ ಅನುಮತಿ ಇದ್ದರೂ, ಗುಣಮುಖರಾದ ಕೊರೊನಾ ಸೋಂಕಿತರು ರಕ್ತ ದಾನ ಮಾಡಲು ಒಪ್ಪದ ಕಾರಣ ವೈದ್ಯರು ಇಕ್ಕಟ್ಟಿಗೆ ಸಿಲುಕಿದ್ದಾರೆ.
ಮೊದಲು ರಕ್ತ ನೀಡಲು ಒಪ್ಪಿಕೊಂಡಿದ್ದ ಗುಣಮುಖರಾದವರು, ಕೊನೆಗೆ ರಕ್ತ ನೀಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ.
ಹೊರ ಜಿಲ್ಲೆಯಲ್ಲಿ ಸೋಂಕಿನಿಂದ ಗುಣಮುಖರಾದವರ ರಕ್ತಕ್ಕಾಗಿ ಕಿಮ್ಸ್ ವೈದ್ಯರು ಬೇಡಿಕೆ ಸಲ್ಲಿಸಿದ್ದಾರೆ. ಸದ್ಯಕ್ಕೆ ಕಿಮ್ಸ್ನಲ್ಲಿ ಪ್ಲಾಸ್ಮಾ ಥೆರಪಿ ಚಿಕಿತ್ಸೆ ನಡೆಯುವ ಅನುಮಾನವಿದೆ.
ಒಂದು ಕಡೆ ಚಿಕಿತ್ಸೆಗೆ ರಕ್ತ ಸಿಗುತ್ತಿಲ್ಲ, ಮತ್ತೊಂದೆಡೆ ಪ್ಲಾಸ್ಮಾ ಥೆರಪಿ ಚಿಕಿತ್ಸೆಗೊಳಪಡುವ ರೋಗಿಯು ಸಹ ಆಸ್ಪತ್ರೆಯಲ್ಲಿಲ್ಲ. ಬಾಗಲಕೋಟೆ ಮೂಲದ ಗರ್ಭಿಣಿಗೆ ಪ್ಲಾಸ್ಮಾ ಥೆರಪಿ ಚಿಕಿತ್ಸೆಗೆ ವೈದ್ಯರು ಸಿದ್ಧತೆ ಮಾಡಿಕೊಂಡಿದ್ದರು.
ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಹಿನ್ನೆಲೆ ಅವರಿಗೆ ಪ್ಲಾಸ್ಮಾ ಥೆರಪಿ ಅಗತ್ಯವಿಲ್ಲ. ಸದ್ಯಕ್ಕೆ ಕಿಮ್ಸ್ನಲ್ಲಿ ಪ್ಲಾಸ್ಮಾ ಥೆರಪಿಗೊಳಪಡುವ ರೋಗಿಯಿಲ್ಲ.