ಹುಬ್ಬಳ್ಳಿ : ತಾವೂ ಸಹ ಸಭಾಪತಿ ಸ್ಥಾನದ ಆಕಾಂಕ್ಷಿ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ಪಕ್ಷದ ಮುಖಂಡರಲ್ಲಿ ಬಹುತೇಕರು ನನ್ನನ್ನೇ ಸಭಾಪತಿ ಮಾಡಲು ಆಸಕ್ತಿ ಹೊಂದಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡ ಅವರೂ ಈ ಕುರಿತು ಮೂರು ಪಕ್ಷದ ಮುಖಂಡರೊಂದಿಗೆ ಚರ್ಚಿಸಿದ್ದಾರೆ ಎಂದರು.
ಜೆಡಿಎಸ್, ಬಿಜೆಪಿ ಮೈತ್ರಿ, ವಿಲೀನ ಯಾವುದೇ ಇಲ್ಲ :
ಜೆಡಿಎಸ್ ಬಿಜೆಪಿ ಮೈತ್ರಿ ಅನ್ನೋದು ಕೇವಲ ಗಾಳಿಸುದ್ದಿ ಅಷ್ಟೇ. ಪರಿಷತ್ ಸಭಾಪತಿ ಆಯ್ಕೆಯನ್ನ ಜೆಡಿಎಸ್ ಅವರನ್ನ ಬಿಟ್ಟು ಯಾವ ಪಕ್ಷದವರೂ ಮಾಡಲು ಸಾಧ್ಯವಿಲ್ಲ. ನಾನು ಪರಿಷತ್ ಸಭಾಪತಿ ಆಗುವುದಕ್ಕೆ ಮೂರು ಪಕ್ಷದಿಂದ ಸಹಮತವಿದೆ. ನಾನು ಹಿರಿಯ ಸದಸ್ಯ ಎನ್ನುವ ಕಾರಣಕ್ಕೆ ಅವಿರೋಧ ಆಯ್ಕೆಗೆ ಮೂರು ಪಕ್ಷದವರು ಸಹಮತ ವ್ಯಕ್ತಪಡಿಸಿದ್ದಾರೆ ಎಂದರು.
ಓದಿ...ಸಿಎಂ ಹುದ್ದೆ ಖಾಲಿಯಿಲ್ಲ, ಎರಡೂವರೇ ವರ್ಷ ಬಿಎಸ್ವೈ ಅವರೇ ಸಿಎಂ: ಜಗದೀಶ್ ಶೆಟ್ಟರ್
ಅಲ್ಲದೇ ಜೆಡಿಎಸ್ ವರಿಷ್ಠ ದೇವೇಗೌಡರು ನನ್ನನ್ನ ಸಭಾಪತಿ ಮಾಡುವ ವಿಚಾರವಾಗಿ ಮಾತುಕತೆ ನಡೆಸಿದ್ದಾರೆ ಎನ್ನುವುದನ್ನ ಕೇಳಿದ್ದೇನೆ. ಪರಿಷತ್ ಸಭಾಪತಿಯನ್ನ ಕೆಳಗಿಳಿಸುವಾಗ ಬಿಜೆಪಿ ಜೊತೆಗೆ ಹೊಂದಾಣಿಕೆ ಆಗಿತ್ತು. ನಾನು ಸಭಾಪತಿಯಾಗುವುದಕ್ಕೆ ಶೇ 90 ರಷ್ಡು ಸದಸ್ಯರ ಸಹಮತವಿದೆ. ಇದು ನನ್ನದು ಕೊನೆಯ ಅವಧಿ ಅಲ್ಲ ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡಲಿದ್ದೇನೆ ಎಂದರು.