ETV Bharat / state

ವರದಕ್ಷಿಣೆ ತರದ ಪತ್ನಿಗೆ ಚಾಕುವಿನಿಂದ ಇರಿದ ಪಾಪಿ ಪತಿ.. ದುಡಿಯದೆ ತಿನ್ನೋ ದುರ್ಬುದ್ಧಿ! - ಪತ್ನಿಯ ಎದೆಯ ಭಾಗಕ್ಕೆ ಚಾಕು ಇರಿತ

ವರದಕ್ಷಿಣೆ ತೆಗೆದುಕೊಳ್ಳುವುದು ಕೊಡುವುದು ಕಾನೂನು ಪ್ರಕಾರ ಅಪರಾಧ. ಸರ್ಕಾರ, ಸಂಘ ಸಂಸ್ಥೆಗಳು ಎಷ್ಟೇ ತಿಳುವಳಿಕೆ ನೀಡಿದರೂ ವರದಕ್ಷಿಣೆ ಪಿಡುಗು ಮಾತ್ರ ಅಮಾಯಕ ಹೆಣ್ಣುಮಕ್ಕಳ ಬಲಿ ತೆಗೆದುಕೊಳ್ಳುತ್ತಿದೆ. ಇಲ್ಲೊಬ್ಬ ಪತಿ ವರದಕ್ಷಿಣೆ ಹಣಕ್ಕಾಗಿ ತನ್ನ ಪತ್ನಿಗೆ ಕಿರುಕುಳ ನೀಡಿದ್ದಾನೆ.

ಪಾಪಿ ಪತಿ
author img

By

Published : Nov 22, 2019, 5:01 PM IST

Updated : Nov 22, 2019, 7:33 PM IST

ಹುಬ್ಬಳ್ಳಿ: ಕಳೆದ ಹತ್ತು ವರ್ಷದ ಹಿಂದೆ ಹುಬ್ಬಳ್ಳಿಯ ಬಾದಾಮಿ ಕಾಲೋನಿ ನಿವಾಸಿ ಶಶೀಧರ್ ಗೌಡ ಎಂಬಾತ ರೂಪಾಗೌಡ ಎಂಬುವರೊಂದಿಗೆ ಮದುವೆ ಆಗಿದ್ದ. ಆದರೆ, ತವರು ಮನೆಯಿಂದ ವರದಕ್ಷಿಣೆ ತರಲಿಲ್ಲ ಎಂದು ಪತ್ನಿಗೆ ಪತಿ ಚಾಕುವಿನಿಂದ ಇರಿದಿದ್ದಾನೆ.

ವರದಕ್ಷಿಣೆ ತರದ ಪತ್ನಿಗೆ ಚಾಕುವಿನಿಂದ ಇರಿತ

ಅಲ್ಲದೇ ವರದಕ್ಷಿಣೆ ತರುವಂತೆ ನಿತ್ಯ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಇದಕ್ಕೆ ಸೊಪ್ಪು ಹಾಕದ ಕಾರಣ ಪತ್ನಿಯ ಎದೆಯ ಭಾಗಕ್ಕೆ ಚಾಕು ಇರಿದು ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾನಂತೆ. ನಂತರ ಒಂದು ಗಂಟೆಯ ಬಳಿಕ ಹಲ್ಲೆಗೊಳಗಾದ ರೂಪಾ ಮನೆಯಲ್ಲಿಯೇ ಇನ್ನೊಂದು ಬೀಗ ತೆಗೆದುಕೊಂಡು ತಾನೇ ಸ್ವತಃ ಆಸ್ಪತ್ರೆಗೆ ದಾಖಲಾಗಿದ್ದಾಳೆ.

ಅಲ್ಲದೇ ಸತತವಾಗಿ ಪಾಪಿ ಪತಿರಾಯ ಈ ರೀತಿ ಕಳೆದ 5 ಬಾರಿ ಕೊಲೆಗೆ ಯತ್ನಿಸಿದ್ದ ಎಂದು ರೂಪ ಆರೋಪಿಸಿದ್ದಾಳೆ. ಸದ್ಯ ಈ ಕುರಿತು ಹುಬ್ಬಳ್ಳಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತಿರಾಯ ನಾಪತ್ತೆ ಆಗಿದ್ದು ನನಗೆ ನ್ಯಾಯ ಕೊಡಿಸಿ ಎಂದು ರೂಪಗೌಡ ಕೇಳುತ್ತಿದ್ದಾರೆ.

Intro:HubliBody:ಸ್ಲಗ್:- ವರದಕ್ಷಿಣೆ ತರದ ಪತ್ನಿಗೆ ಚಾಕು ಹಾಕಿದ ಪಾಪಿ ಪತಿ....!

ಹುಬ್ಬಳ್ಳಿ:-ವರದಕ್ಷಿಣೆ ತೆಗೆದುಕೊಳ್ಳುವುದು ಕೊಡುವುದು ಕಾನೂನು ಪ್ರಕಾರ ಅಪರಾಧ.ಇನ್ನು ಸರ್ಕಾರ, ಸಂಘ ಸಂಸ್ಥೆಗಳು ಎಷ್ಟೇ ತಿಳುವಳಿಕೆ ನೀಡಿದರೂ ವರದಕ್ಷಿಣೆ ಪಿಡುಗು ಮಾತ್ರ ಅಮಾಯಕ ಹೆಣ್ಣುಮಕ್ಕಳ ಬಲಿ ತೆಗೆದುಕೊಳ್ಳುತ್ತಿದೆ. ಇಲ್ಲೊಬ್ಬ ಪತಿ ಮಹಾಶಯ ವರದಕ್ಷಿಣೆ ಹಣಕ್ಕಾಗಿ ತನ್ನ ಪತ್ನಿಗೆ ಎಂತಹ ಕಿರುಕುಳ ನೀಡಿದ್ದಾನೆ. ನೋಡಿ...

ಆಸ್ಪತ್ರೆ ಬೆಡ್ ಮೇಲೆ ನರಳಾಡುತ್ತಾ ಮಲಗಿರೋ ಮಹಿಳೆ ಹೆಸರು ರೂಪಾಗೌಡ ಪಾಟೀಲ ಅಂತಾ. ಕಳೆದ ಹತ್ತು ವರ್ದ ಹಿಂದೆ ವಾಣಿಜ್ಯನಗರಿ ಹುಬ್ಬಳ್ಳಿಯ ಬಾದಾಮಿ ಕಾಲೋನಿ ನಿವಾಸಿಯ ಶಶೀಧರ್ ಗೌಡ ಎಂಬವನನ್ನು ಮದುವೆ ಆಗಿದ್ದಳು, ಆದ್ರೇ ಪಾಪಿ ಪತಿರಾಯ ಇವಳು ತವರು ಮನೆಯಿಂದ ವರದಕ್ಷಿಣೆ ತರಲಿಲ್ಲ ಎನ್ನುವ ಕಾರಣಕ್ಕೆ ಪಾಪಿ ಪತಿಯೇ ಚಾಕು ಇರಿದು ಕೊಲೆ ಯತ್ನ ನಡೆಸಿದ್ದಾನೆ. ಅಲ್ಲದೇ, ವರದಕ್ಷಿಣೆ ತರುವಂತೆ ನಿತ್ಯ ತನ್ನ ಪತ್ನಿಗೆ ಕಿರುಕುಳ ನೀಡುತ್ತಿದ್ದ ಮದುವೆಯಾದಾಗಿನಿಂದ ಪತ್ನಿಗೆ ಇನ್ನಿಲ್ಲದ ಹಿಂಸೆ ನೀಡುತ್ತಿದ್ದ ಶಶಿಧರಗೌಡ, ಪತ್ನಿ ರೂಪಾಗೆ ದೌರ್ಜನ್ಯ ಎಸಗುತ್ತಿದ್ದ. ಇದಕ್ಕೆ ಸೊಪ್ಪು ಹಾಕದ ಕಾರಣ ಪತ್ನಿಯ ಎದೆಯ ಭಾಗಕ್ಕೆ ಚಾಕು ಇರಿದು ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾನಂತ್ತೇ....

ಬೈಟ್: ರೂಪಾಗೌಡ ಪಾಟೀಲ
(ಹಲ್ಲೆಗೊಳಗಾದ ಗೃಹಿಣಿ)

ರೂಪಾಗೌಡಗೆ ಚಾಕುವಿನಿಂದ ಚುಚ್ಚಿದಲ್ಲದೇ, ಮನೆಗೆ ಬೀಗಹಾಕಿಕೊಂಡು ಪತಿರಾಯ ಶಶಿಧರ ಪರಾರಿಯಾಗಿದ್ದಾನೆ. ನಂತರ ಒಂದು ಗಂಟೆಯ ನಂತರ ಹಲ್ಲೆಗೊಳಗಾದ ರೂಪಾ ಮನೆಯಲ್ಲಿಯೇ ಇನ್ನೊಂದು ಬೀಗ ತೆಗೆದುಕೊಂಡು ತಾನೇ ಸ್ವತಃ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಅಲ್ಲದೇ, ಸತತವಾಗಿ ಪಾಪಿ ಪತಿರಾಯ ಶಶಿಧರ ಈ ರೀತಿ ಕಳೆದ 5 ಬಾರಿಗಳಿಂದ ಕೊಲೆಗೆ ಯತ್ನಿಸಿ ಹಿರಿಯ ಸಮ್ಮುಖದಲ್ಲಿ ಸಂಧಾನ ಮಾಡಿಕೊಂಡು ಪೊಲೀಸ್ ಕೇಸ್ ನಿಂದ ಬಚಾಜ್ ಆಗಿದ್ದಾನೆ. ಸಧ್ಯ ಈ ಕುರಿತು ಹುಬ್ಬಳ್ಳಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತಿರಾಯ ನಾಪತ್ತೆ ಆಗಿದ್ದು ನನಗೆ ನ್ಯಾಯ ಕೋಡಿಸುವಂತೇ ಮನವಿ ಮಾಡಿದ ರೂಪಗೌಡ.

ಬೈಟ್-02: ಬೈಟ್:- ಪುಷ್ಪಾ ತಾಳಿಮನಿ
(ರೂಪಾಗೌಡಳ ತಾಯಿ.)

ಒಟ್ಟಾರೆಯಾಗಿ ವರದಕ್ಷಿಣೆ ಕಿರುಕುಳ ನೀಡಿ ಚಾಕುವಿನಿಂದ ಹಲ್ಲೆ ಮಾಡಿ ನಾಪತ್ತೆಯಾಗಿರುವ ಪಾಪಿ ಪತಿರಾಯನ ವಿರುದ್ಧ ಹುಬ್ಬಳ್ಳಿ ಪೊಲೀಸರು ಕಠಿಣ ಕ್ರಮತೆಗೆದುಕೊಂಡು ಇಂತಹ ವರದಕ್ಷಿಣೆ ಪಾಪಿಗಳಿಗೆ ಕಠಿಣ ಕ್ರಮ ಕೈಗೊಂಡು ಶಿಕ್ಷೆ ನೀಡಬೇಕು. ಅಂದಾಗ ಮಾತ್ರ ಹೆಣ್ಣುಮಕ್ಕಳು ನೆಮ್ಮದಿಯಿಂದ ಜೀವನ ನಡೆಸೊಕೇ ಆಗುತ್ತೆ ಇಲ್ಲವಾದ್ರೇ ಇಂತಹ ವರದಕ್ಷಿಣೆ ಕಿರುಕುಳಕ್ಕೆ ಜೀವ ಕಳೆದಕೊಳ್ಳವ ಸಾಧ್ಯತೆ ಹೆಚ್ಚಾಗತ್ತುವೆ!

_________________________

Yallappa kundagol

HUBLI...Conclusion:Yallappa kundagol
Last Updated : Nov 22, 2019, 7:33 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.