ETV Bharat / state

ಹು-ಧಾ ಮಹಾನಗರ ಪಾಲಿಕೆಯ ಟಿಪ್ಪ‌ರ್​ ಏರ್ ಲಿಫ್ಟ್​​ ರಿಪೇರಿ ವೇಳೆ ಅವಘಡ.. ಚಾಲಕ ಸಾವು

ಚಾಲಕನ ತಲೆ ಮೇಲೆ ಬಿತ್ತು ಏರ್ ಲಿಫ್ಟ್ ಕಂಟೇನರ್​- ಹು-ಧಾ ಮಹಾನಗರ ಪಾಲಿಕೆಯ ಕಸ ಎತ್ತುವ ಆಟೋ ಟಿಪ್ಪ‌ರ್ ಲಿಫ್ಟ್ ರಿಪೇರಿ ವೇಳೆ ಅವಘಡ- ಚಾಲಕ ಸಾವು

author img

By

Published : Jul 24, 2022, 4:01 PM IST

hudha-corportaion-garbage-vehicle-driver-died
ಮಹಾನಗರ ಪಾಲಿಕೆಯ ಆಟೋ ಟಿಪ್ಪ‌ರ ಏರ್ ಲಿಪ್ಟ್ ರಿಪೇರಿ ವೇಳೆ ಅವಘಡ : ಚಾಲಕ ಸಾವು

ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಟೋ ಟಿಪ್ಪ‌ರ್ ಲಿಫ್ಟ್ ರಿಪೇರಿ ಮಾಡುವಾಗ ಅವಘಡ ಸಂಭವಿಸಿ ಪಾಲಿಕೆ ಸಿಬ್ಬಂದಿ ಮೃತಪಟ್ಟಿರುವ ಘಟನೆ ನಡೆದಿದೆ. ಗೋಪನಕೊಪ್ಪದ ನಿವಾಸಿ ದುರ್ಗಪ್ಪ ಇಲಕಲ್ಲ (38) ಮೃತ ಚಾಲಕ ಎಂದು ತಿಳಿದುಬಂದಿದೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕಸ ಎತ್ತುವ ಆಟೋ ಟಿಪ್ಪರ್ ಏರ್ ಲಿಫ್ಟ್ ದುರಸ್ತಿಗೆ ಬಂದಿತ್ತು‌. ಈ ಏರ್​ ಲಿಫ್ಟರ್ ಅನ್ನು ಕೆಳಗೆ ಮಾಡುವ ವೇಳೆ ಏರ್ ಲಿಫ್ಟ್ ಕಂಟೇನರ್ ಚಾಲಕನ ತಲೆ ಮೇಲೆ ಬಿದ್ದಿದೆ. ಪರಿಣಾಮ ದುರ್ಗಪ್ಪ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಚಾಲಕ ದುರ್ಗಪ್ಪ ಕಿಮ್ಸ್ ನಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಓದಿ : ದರೋಡೆ ಮಾಡಿ‌ ಪ್ರಾಯಶ್ಚಿತ್ತಕ್ಕೆ ಮಹದೇಶ್ವರ ಬೆಟ್ಟಕ್ಕೆ ಹೋಗಿ ಪೂಜೆ ಸಲ್ಲಿಸಿದ್ದ ಆರೋಪಿಗಳ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.