ಹುಬ್ಬಳ್ಳಿ: ಹುಬ್ಬಳ್ಳಿಯ ಪಗಡಿ ಓಣಿಯಲ್ಲಿ ಒಳಚರಂಡಿಗೆ ಎಂದು ತಗೆದ ಗುಂಡಿಯಲ್ಲಿ ಆಕಳು ಮತ್ತು ಕರುವೊಂದು ಬಿದ್ದು ಪರದಾಡಿದ್ದು, ಸ್ಥಳೀಯರು ಅವನ್ನು ರಕ್ಷಿಸಿದ್ದಾರೆ.
ಒಳಚರಂಡಿ ಕಾಮಗಾರಿಗಾಗಿ ಅರ್ಧಂಬರ್ಧ ಗುಂಡಿ ತೋಡಿ ಬಿಡಲಾಗಿತ್ತು. ಅದರಲ್ಲಿ ನೀರು ತಂಬಿದ್ದು, ನೀರು ಕುಡಿಯಲು ಹೋದ ಆಕಳು ಹಾಗೂ ಕರು ನೀರಿನಲ್ಲಿ ಬಿದ್ದಿದೆ. ಮೇಲೆ ಎದ್ದು ಬರಲಾಗದೆ ಅಲ್ಲೇ ಪರದಾಡಿದೆ.
ಇದನ್ನು ನೋಡಿದ ಇತರ ಜಾನುವಾರುಗಳು ಅಲ್ಲೇ ಸುತ್ತ-ಮುತ್ತ ಓಡಾದಿವೆ. ಇದರಿಂದ ಸ್ಥಳೀಯರು ಆಕಳು ಹಾಗು ಕರು ನೀರಿನಲ್ಲಿ ಬಿದ್ದಿರುವುದನ್ನು ಗಮನಿಸಿ, ಅವನ್ನು ಮೇಲೆ ಎತ್ತಲು ಪ್ರಯತ್ನಿಸಿದರು. ಮೊದಲು ತಾಯಿ ಆಕಳು ಕರುವಿಗೆ ಏನಾದರು ಮಾಡುತ್ತಾರೆ ಎಂಬ ಆತಂಕದಿಂದ ಕರುವನ್ನು ಮೇಲೆ ಎತ್ತಲು ಬಿಡಲಿಲ್ಲ. ಕೊನೆಗೆ ಸ್ಥಳೀಯರು ಜೆಸಿಬಿ ಸಹಾಯದಿಂದ ಆಕಳು ಹಾಗೂ ಕರುವನ್ನು ಮೇಲಕ್ಕೆ ಎತ್ತಿ ಮಾನವೀಯತೆ ಮರೆದಿದ್ದಾರೆ.
ಇದನ್ನೂ ಓದಿ: ಮಂಗಳೂರು: ಪಿಲಿಕುಳ ಉದ್ಯಾನವನಕ್ಕೆ ಹೊಸ ಅತಿಥಿಗಳ ಆಗಮನ
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮಾಡಿದ ಎಡವಟ್ಟಿನಿಂದ ಈ ಘಟನೆ ಸಂಭವಿಸಿದೆಯೆಂದು ಜನರು ಅಸಮಾಧಾನ ಹೊರಹಾಕಿದ್ದಾರೆ. ಕಳೆದ 15 ದಿನಗಳಿಂದ ಕಾಮಗಾರಿ ನಡೆಸಲಾಗುತ್ತಿದ್ದು, ಕಾಮಗಾರಿ ವಿಳಂಬಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.