ಹುಬ್ಬಳ್ಳಿ: ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆಯಲ್ಲಿ ಸರ್ಕಾರ ಲಾಕ್ ಡೌನ್ ಆದೇಶಿಸಿದೆ. ಆದ್ರೆ, ವಾಣಿಜ್ಯ ನಗರಿಯ ಜನರು ಮಾತ್ರ ಲಾಕ್ಡೌನ್ಗೆ ಡೋಂಟ್ ಕೇರ್ ಎನ್ನುತ್ತಿದ್ದಾರೆ.
ಅಂದಿನಿಂದ ಇಂದಿನವರೆಗೂ ಹುಬ್ಬಳ್ಳಿಯಲ್ಲಿ ಯಥಾಸ್ಥಿತಿ ಮುಂದುವರೆದಿದೆ. ಅವಶ್ಯ ವಸ್ತುಗಳ ಖರೀದಿ ನೆಪದಲ್ಲಿ ಜನರು ಗುಂಪು ಸೇರುವುದು, ತಮ್ಮ ಖಾಸಗಿ ವಾಹನ ಹಾಗೂ ಬೈಕ್ಗಳಲ್ಲಿ ಬೇಕಾಬಿಟ್ಟಿಯಾಗಿ ಓಡಾಡುವುದು ಮತ್ತೆ ಮುಂದುವರೆದಿದೆ.
ತರಕಾರಿಗಳು ಮನೆ ಬಾಗಿಲಿಗೆ ಬರುತ್ತಿವೆ. ಕಿರಾಣಿ ಅಂಗಡಿಗಳು ತೆರೆದಿವೆ. ಇಷ್ಟಿದ್ದರೂ ಜನರು ಮಾತ್ರ ನಗರದ ಪ್ರಮುಖ ರಸ್ತೆಗಳಲ್ಲಿ ಸುತ್ತುವುದನ್ನು ಬಿಡುತ್ತಿಲ್ಲ. ಮನೆಯಿಂದ ಯಾರೂ ಹೊರಬರಬೇಡಿ ಎಂದು ಸರ್ಕಾರದ ಆದೇಶವಿದ್ರೂ ಹುಬ್ಬಳ್ಳಿ ಮಂದಿ ಪಾಲಿಸುತ್ತಿಲ್ಲ. ಮೊದ ಮೊದಲು ಪೊಲೀಸರು ವಾಹನ ಸೀಜ್ ಮಾಡಿ ಕೆಲವರಿಗೆ ಲಾಠಿ ರುಚಿ ತೋರಿಸುತ್ತಿದ್ದರು. ಪೊಲೀಸರು ಎಷ್ಟೇ ಶಿಸ್ತಿನ ಕ್ರಮ ತೆಗೆದುಕೊಂಡರೂ ಕೂಡ ಜನರು ಮಾತ್ರ ಕ್ಯಾರೆನ್ನುತ್ತಿಲ್ಲ.