ETV Bharat / state

ಅಂತಾರಾಷ್ಟ್ರೀಯ ಶೂಟಿಂಗ್ ಸ್ಪರ್ಧೆಯಲ್ಲಿ ಸಾಧನೆ ಮಾಡಿದ ಹುಬ್ಬಳ್ಳಿ ವಿಶೇಷ ಚೇತನ..

ಕೆಲ ವರ್ಷಗಳ ಹಿಂದಷ್ಟೆ ಅಪಘಾತವೊಂದರಲ್ಲಿ ಕಾಲನ್ನು ಕಳೆದುಕೊಂಡು ಮಾನಸಿಕವಾಗಿ ಕುಗ್ಗದೇ ಎದೆಗಾರಿಕೆಯಿಂದ ವಿಶ್ವವೇ ತನ್ನತ್ತ ನೋಡುವಂತೆ ಮಾಡಿದ್ದಾರೆ. ಅಲ್ಲದೇ ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಪ್ರತಿಭೆಗಳು ವೇದಿಕೆಯಿಲ್ಲದೇ ಎಲೆ ಮರೆಯ ಕಾಯಿಗಳಂತಿವೆ..

hubli-handicap-achievement-in-international-shooting-competition
ವಿಶೇಷ ಚೇತನ
author img

By

Published : Mar 27, 2021, 5:20 PM IST

ಹುಬ್ಬಳ್ಳಿ : ಅಂಗವಿಕಲತೆ ದುರ್ಬಲತೆಯಲ್ಲ. ಏನನ್ನಾದರೂ ಸಾಧಿಸಬಹುದೆಂದು ಇಲ್ಲಿನ ಶ್ರೀಹರ್ಷ ದೇವರಡ್ಡಿ ಎಂಬ ವಿಶೇಷ ಚೇತನರೊಬ್ಬರು ಪ್ಯಾರಾ ವಿಶ್ವಕಪ್ ಶೂಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಸಾಧಿಸುವ ಮೂಲಕ ಮಾದರಿಯಾಗಿದ್ದಾರೆ.

ಶ್ರೀ ಹರ್ಷ ದೇವರಡ್ಡಿ ಅವರು ಮಾರ್ಚ್ 2021ರಲ್ಲಿ ನಡೆದ AI Ain 2021 ವರ್ಲ್ಡ್ ಪ್ಯಾರಾ ಶೂಟಿಂಗ್​ನಲ್ಲಿ R4-ಮಿಕ್ಸಡ್ 10m ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್.ಹೆಚ್-2 ವಿಭಾಗದಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡುವ ಮೂಲಕ ಕಂಚಿನ ಪದಕ ಪಡೆದಿದ್ದಾರೆ.

ಹುಬ್ಬಳ್ಳಿ ಕೀರ್ತಿಯನ್ನು ಆಕಾಶೆದೆತ್ತರಕ್ಕೆ ಕೊಂಡೊಯ್ಯುವ ಮೂಲಕ ಮಹತ್ವದ ಸಾಧನೆ ಮಾಡಿದ್ದಾರೆ. ಮಗನ ಈ ಸಾಧನೆಗೆ ತಾಯಿ ಕೂಡ ಹರ್ಷ ವ್ಯಕ್ತಪಡಿಸಿದ್ದಾರೆ.

ಅಂತಾರಾಷ್ಟ್ರೀಯ ಶೂಟಿಂಗ್ ಸ್ಪರ್ಧೆಯಲ್ಲಿ ಸಾಧನೆ

ಮನೆಯೇ ಮೊದಲ ಪಾಠಶಾಲೆ, ಜನನಿ ಮೊದಲು ಗುರುವು ಎಂಬಂತೆ ಶ್ರೀಹರ್ಷ ಅವರು ಮನೆಯವರ ಬೆಂಬಲದಿಂದ ಸಾಧನೆ ಮಾಡಿದ್ದಾರೆ. ಅಂಗವಿಕಲತೆ ಎಂಬುದು ದುರ್ಬಲತೆಯಲ್ಲ, ಹೇಗಿದ್ದರೂ ಸಾಧನೆ ಮಾಡಬಹುದು ಎಂಬುದು ಶ್ರೀಹರ್ಷ ತೋರಿಸಿಕೊಟ್ಟಿದ್ದಾರೆ.

ಕೆಲ ವರ್ಷಗಳ ಹಿಂದಷ್ಟೆ ಅಪಘಾತವೊಂದರಲ್ಲಿ ಕಾಲನ್ನು ಕಳೆದುಕೊಂಡು ಮಾನಸಿಕವಾಗಿ ಕುಗ್ಗದೇ ಎದೆಗಾರಿಕೆಯಿಂದ ವಿಶ್ವವೇ ತನ್ನತ್ತ ನೋಡುವಂತೆ ಮಾಡಿದ್ದಾರೆ. ಅಲ್ಲದೇ ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಪ್ರತಿಭೆಗಳು ವೇದಿಕೆಯಿಲ್ಲದೇ ಎಲೆ ಮರೆಯ ಕಾಯಿಗಳಂತಿವೆ. ಅಂತಹ ಬಹುತೇಕ ಪ್ರತಿಭೆಗಳಿಗೆ ಶ್ರೀಹರ್ಷ ಅವರ ಸಾಧನೆ ಪ್ರೇರಣೆಯಾಗಲಿದೆ.

ಇದನ್ನೂ ಓದಿ.. ಹೆಚ್ಚಿದ ಅಲರ್ಜಿ ಕಾರಣವಾಗಬಹುದು ಅತಿಯಾದ ಒತ್ತಡ : ಅಧ್ಯಯನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.