ಹುಬ್ಬಳ್ಳಿ: ಕಳೆದ18 ವರ್ಷಗಳ ಹಿಂದೆ ನಗರದಲ್ಲಿ ನಡೆದ ಗೋಲಿಬಾರ್‌ಗೆ ಬಲಿಯಾಗಿದ್ದ ಅಂಬಾಲಾಲ್ ಮೆಹರವಾಡೆ ಕುಟುಂಬಸ್ಥರಿಗೆ ಇಂದು ಮರಾಠಾ ಸಮಾಜದ ಮುಖಂಡರು ಪರಿಹಾರ ಧನ ವಿತರಣೆ ಮಾಡಿದ್ದಾರೆ.
ಕಳೆದ 18 ವರ್ಷಗಳ ಹಿಂದೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದ ಗಲಭೆಯಲ್ಲಿ ಪೊಲೀಸರ ಲಾಠಿ ಏಟಿಗೆ ಬಲಿಯಾಗಿದ್ದ ಅಂಬಾಲಾಲ್ ಕುಟುಂಬಕ್ಕೆ ಇಷ್ಟು ವರ್ಷ ಕಳೆದ್ರೂ ಸರ್ಕಾರದಿಂದ ಕೇವಲ ಆಶ್ವಾಸನೆ ದೊರೆತಿತ್ತೇ ವಿನಃ ಯಾವುದೇ ರೀತಿಯ ಪರಿಹಾರಧನ , ಸಹಾಯಹಸ್ತ ದೊರೆತಿರಲಿಲ್ಲ. ಈ ಕುರಿತಂತೆ ನಿನ್ನೆಯಷ್ಟೇ ನಿಮ್ಮ ಈಟಿವಿ ಭಾರತ್ ''ಹುಬ್ಬಳ್ಳಿ ಗೋಲಿಬಾರ್‌ಗೆ ಜೀವ ಕೊಟ್ಟ ಕುಟುಂಬಕ್ಕೆ ಕಣ್ಣೀರೇ ಆಸರೆ.. ಬಡವರಲ್ವೇ, ಅದಕ್ಕೆ ಸರ್ಕಾರದ ತಾತ್ಸಾರ!!'' ಎಂಬ ಶೀರ್ಷಿಕೆಯಡಿ ಕುಟುಂಬದ ಕಣ್ಣೀರಿನ ಕುರಿತು ವಿಸ್ತೃತ ವರದಿ ಮಾಡಿತ್ತು.ಈ ವರದಿ ಕಂಡು ಮಾನವೀಯತೆ ಮೆರೆದ ಮರಾಠ ಸಮುದಾಯದ ಮುಖಂಡರು ಇಂದು ಅಂಬಾಲಾಲ್ ನಿವಾಸಕ್ಕೆ ತೆರಳಿ ಅವರ ಕುಟುಂಬಕ್ಕೆ ಪರಿಹಾರ ವಿತರಿಸುವ ಮೂಲಕ ಪ್ರತಿತಿಂಗಳೂ ಸಹಾಯಹಸ್ತ ನೀಡುವುದಾಗಿ ಭರವಸೆ ನೀಡಿದ್ದಾರೆ. ಅಲ್ದೆ ಈ ಕುರಿತಂತೆ ಸರ್ಕಾರದ ಗಮನಕ್ಕೂ ತಂದು ಈ ಕುಡುಂಬಕ್ಕೆ ಸೂಕ್ತ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದ್ದಾರೆ.ಈ ಕುಟುಂಬದ ಜೊತೆ ನಮ್ಮ ಸಮಾಜದವರೆಲ್ಲರೂ ಇರುತ್ತೇವೆ ಆದಷ್ಟು ಬೇಗ ಈ ಕುಟುಂಬಕ್ಕೆ ಪರಿಹಾರ ನೀಡುವುದರ ಬಗ್ಗೆ ಎಲ್ಲಾ ಸಿದ್ಧತೆಗಳನ್ನು ಮಾಡುತ್ತೆವೆ ಎಂದು ಭರವಸೆ ನೀಡಿದರು.
- ಇದನ್ನೂ ಓದಿ: ಹುಬ್ಬಳ್ಳಿ ಗೋಲಿಬಾರ್‌ಗೆ ಜೀವ ಕೊಟ್ಟ ಕುಟುಂಬಕ್ಕೆ ಕಣ್ಣೀರೇ ಆಸರೆ.. ಬಡವರಲ್ವೇ, ಅದಕ್ಕೆ ಸರ್ಕಾರದ ತಾತ್ಸಾರ!!
ಇನ್ನು ಈ ಕುರಿತು ಹುಬ್ಬಳ್ಳಿ ಗಲಾಟೆಯೊಂದರಲ್ಲಿ ಬಲಿಯಾಗಿದ್ದ ಅಂಬಲಾಲ್ ಅವರ ಪತ್ನಿ ಮಾತನಾಡಿ' ಹದಿನೆಂಟು ವರ್ಷಗಳಿಂದ ಪರಿಹಾರಕ್ಕಾಗಿ ಹೋರಾಟ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ, ಆದ್ರೆ ನಿನ್ನೆ ಮಾಧ್ಯಮದವರು ಬಂದು ಸುದ್ದಿ ಬಿತ್ತಿರಿಸಿದ ನಂತರ ಎಲ್ಲರೂ ಸಹ ಬಂದು ನಮಗೆ ಸಹಾಯ ಮಾಡುತ್ತಿದ್ದಾರೆ ಆದ್ದರಿಂದ ಮಾಧ್ಯಮದವರಿಗೆ ಧನ್ಯವಾದ ತಿಳಿಸುತ್ತೆನೆ ಇನ್ನೂ ಮುಂದಾದ್ರೂ ಸರಕಾರ' ನಮಗೆ ಪರಿಹಾರ ಕೊಟ್ರೆ ಬಹಳ ಸಹಾಯ ಆಗುತ್ತದೆ ಎಂದು ಮನವಿ ಮಾಡಿದ್ರು.