ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡದ ಜನ ಮತ್ತೊಂದು ಸಂಕಷ್ಟದ ಸುಳಿಗೆ ಸಿಲುಕಿಕೊಳ್ಳುವ ಸಾಧ್ಯತೆ ನಿಚ್ಚಳವಾದಂತಿದೆ. ಕೋವಿಡ್‌ನಿಂದ ಜನ ಇನ್ನೇನು ಕೊಂಚ ಚೇತರಿಸಿಕೊಳ್ಳುತ್ತಿದ್ದಂತೆ ಪಾಲಿಕೆ ಹೊಸ ರಾಗ ಶುರು ಮಾಡಿದೆ. ಅಭಿವೃದ್ಧಿ ಹೆಸರಿನಲ್ಲಿ ಆಸ್ತಿ ಕರದ ದರವನ್ನು ಹೆಚ್ಚಿಸುವ ಸಾಧ್ಯತೆ ಹೆಚ್ಚಿದೆ.
ಈ ಹಿನ್ನೆಲೆ ಪಾಲಿಕೆ ಕಾಯ್ದೆಗೆ ಸರ್ಕಾರ ತಿದ್ದುಪಡಿ ತಂದು ಕಾರ್ಪೋರೇಷನ್‌ಗಳಿಗೆ ಮಾರ್ಗಸೂಚಿಗಳನ್ನು ರವಾನಿಸಿದೆ. ಪ್ರತೀ ಮೂರು ವರ್ಷಕ್ಕೊಮ್ಮೆ ಮಾತ್ರ ಆಸ್ತಿದರ ಪಟ್ಟಿ ಪರಿಷ್ಕರಣೆ ಮಾಡಲಾಗುತ್ತಿತ್ತು. ಆದರೆ, ಇನ್ನು ಮುಂದೆ ಹಾಗಾಗಲ್ಲ, ಕಾಯ್ದೆಗೆ ಸರ್ಕಾರ ತಿದ್ದುಪಡಿ ತಂದಿದೆ. ಪರಿಣಾಮ, ಯಾವಾಗ ಬೇಕಾದರೂ, ಆಸ್ತಿ ದರ ಹೆಚ್ಚಾಗುವ ಸಾಧ್ಯತೆ ಇದೆ. ಈ ಕುರಿತು ಪಾಲಿಕೆ ಆಯುಕ್ತರು ಪ್ರತಿಕ್ರಿಯಿಸಿದ್ದಾರೆ.
ಆಸ್ತಿ ಕರದ ದರ ಹೆಚ್ಚಳ ಸಾಧ್ಯತೆ ಮಹಾನಗರ ಪಾಲಿಕೆ ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಟ್ಯಾಕ್ಸ್ ಹೆಚ್ಚಿಸುವ ಉದ್ದೇಶವಿಲ್ಲ ಅಂತಾ ಹೇಳುತ್ತಿದ್ದರೂ, ಸರ್ಕಾರದ ಮಾರ್ಗಸೂಚಿಗಳನ್ನು ಜಾರಿಗೆ ತರಬೇಕಾಗುತ್ತೆ ಅಂತಾ ಹೇಳುತ್ತಿದ್ದಾರೆ. ಆದರೆ, ಜನರು ಮಾತ್ರ ಕರ ಪರಿಷ್ಕರಣೆಗೆ ವ್ಯಾಪಕ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಗ್ಯಾಸ್, ಪೆಟ್ರೋಲ್ ನಂತೆ ಮನೆ ಟ್ಯಾಕ್ಸ್‌ನ್ನು ಹೆಚ್ಚು ಮಾಡಿದರೆ,ಬಡವರು ಬದುಕುವುದಾದರೂ ಹೇಗೆ ಅಂತಾ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಟ್ಯಾಕ್ಸ್ ಹೆಚ್ಚಳದ ಮಾತು ಹಾಗಿರಲಿ,ತೆರಿಗೆ ಕೇಳಲೇ ಬೇಡಿ ಅಂತಾ ನಾಗರಿಕರು ಆಗ್ರಹಿಸುತ್ತಿದ್ದಾರೆ. ಮೇಲ್ನೋಟಕ್ಕೆ ನಾವು ತೆರಿಗೆ ಬಗ್ಗೆ ಮಾತು ಆಡಲ್ಲ ಅಂತಾ ಹೇಳುವ ಪಾಲಿಕೆಯ ಅಧಿಕಾರಿಗಳು ಯಾವಾಗ ಸರ್ಕಾರದ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತರುತ್ತಾರೋ ಹೇಳೋಕ್ಕಾಗಲ್ಲ.ಕಳೆದ ವರ್ಷವಷ್ಟೇ,ಹುಬ್ಬಳ್ಳಿ-ಧಾರವಾಡದ ಮಹಾನಗರದ ಆಸ್ತಿಕರವನ್ನು ಹೆಚ್ಚಿಸಲಾಗಿತ್ತು. ಈ ವರ್ಷ ಮತ್ತೆ ಹೆಚ್ಚು ಮಾಡಿದ್ರೆ ಹೇಗೆ ಅನ್ನೋ ಜಿಜ್ಞಾಸೆಯಲ್ಲಿ ಜನರಿದ್ದಾರೆ. ಕಾಸಿಲ್ಲದ ಕಾರ್ಪೋರೇಷನ್ ಕೈಲಾಸ ಮಾಡುವ ಕನಸು ಕಾಣುತ್ತಿರುವುದು ಮಾತ್ರ ವಿಪರ್ಯಾಸವೇ ಸರಿ.