ETV Bharat / state

ಸೀಜ್​​ ಮಾಡಿದ ಬೈಕ್​​ಗಳಿಂದಲೇ ಭರ್ತಿಯಾಗಿವೆ ಹುಬ್ಬಳ್ಳಿ ಪೊಲೀಸ್ ಠಾಣೆಗಳ ಆವರಣ! - hubli latest news

ಲಾಕ್​ಡೌನ್​ ಹಿನ್ನೆಲೆ ಅನವಶ್ಯಕವಾಗಿ ಬೈಕ್​ನಲ್ಲಿ ತಿರುಗಾಡುವವರ ಬೈಕ್​​ಗಳನ್ನು ಪೊಲೀಸರು ಸೀಜ್ ಮಾಡುತ್ತಿದ್ದಾರೆ. ಸೀಜ್​ ಮಾಡಿದ ವಾಹನಗಳಲ್ಲಿ ಬೈಕ್​ಗಳೇ ಹೆಚ್ಚು ಇದ್ದು, ನಿನ್ನೆ ಅವಳಿ ನಗರದಲ್ಲಿ 503 ಬೈಕ್​ಗಳನ್ನು ಸೀಜ್​ ಮಾಡಲಾಗಿದೆ.

hubli darwada police department seized 503 bikes
ಬೈಕ್​ಗಳು ಪೊಲೀಸರ ವಶಕ್ಕೆ
author img

By

Published : May 11, 2021, 11:09 AM IST

ಹುಬ್ಬಳ್ಳಿ: ಲಾಕ್​ಡೌನ್ ಘೋಷಣೆ ಆಗಿದ್ದೇ ಆಗಿದ್ದು, ಹುಬ್ಬಳ್ಳಿಯ ಪೊಲೀಸ್ ಠಾಣೆಗಳು ದ್ವಿಚಕ್ರ ವಾಹನಗಳಿಂದ ಭರ್ತಿಯಾಗಿವೆ.

ಹೌದು, ಲಾಕ್​ಡೌನ್​ನ ಎರಡನೇ ದಿನವಾದ ಹಿನ್ನೆಲೆ ವಾಹನ ಸವಾರರಿಗೆ ಪೊಲೀಸರು ಶಾಕ್ ಕೊಡುತ್ತಿದ್ದಾರೆ. ಅನವಶ್ಯಕವಾಗಿ ಬೈಕ್​ನಲ್ಲಿ ತಿರುಗಾಡುವವರ ಬೈಕ್​​ಗಳನ್ನು ಸೀಜ್ ಮಾಡುತ್ತಿದ್ದಾರೆ. ಸೀಜ್​ ಮಾಡಿದ ವಾಹನಗಳಲ್ಲಿ ಬೈಕ್​ಗಳೇ ಹೆಚ್ಚು ಇವೆ.

ಸೀಜ್​​ ಮಾಡಿದ ಬೈಕ್​​ಗಳಿಂದಲೇ ಭರ್ತಿಯಾಗಿವೆ ಹುಬ್ಬಳ್ಳಿ ಪೊಲೀಸ್ ಠಾಣೆಗಳ ಆವರಣ!

ನಗರದ ಬಹುತೇಕ ಪೊಲೀಸ್ ಠಾಣೆಯ ಆವರಣಗಳು ಸೀಜ್ ಮಾಡಿದ ಬೈಕ್​ಗಳಿಂದಲೇ ತುಂಬಿದ್ದು, ವಾಹನಗಳನ್ನು ನಿಲ್ಲಿಸಲು ಸಹ ಸ್ಥಳವಿಲ್ಲದ ಸ್ಥಿತಿ ಸದ್ಯ ನಿರ್ಮಾಣವಾಗಿದೆ. ನಿನ್ನೆ ಅಷ್ಟೇ ಹು-ಧಾ ನಗರಗಳಲ್ಲೇ 503 ಬೈಕ್​ಗಳನ್ನು ಸೀಜ್ ಮಾಡಿರುವ ಪೊಲೀಸರು, ಇಂದು ಮತ್ತೆ ಬೆಳಗ್ಗೆಯಿಂದ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಇದನ್ನೂ ಓದಿ: ದ.ಕ.ಜಿಲ್ಲೆಯಲ್ಲಿ ನರ್ಸ್​​ಗಳ ಕೊರತೆಯಾಗದಂತೆ ಸೂಕ್ತ ಕ್ರಮ: ಜಿಲ್ಲಾ ಆರೋಗ್ಯಾಧಿಕಾರಿ

ಮೇ 24ರವರೆಗೆ ಲಾಕ್​ಡೌನ್ ಜಾರಿಯಲ್ಲಿರಲಿದೆ. ಅಲ್ಲಿಯವೆಗೂ ಬೈಕ್​ಗಳನ್ನು ಸೀಜ್ ಮಾಡಿದ್ರೆ ಠಾಣೆ ಅಕ್ಕಪಕ್ಕದ ಜಾಗವೂ ಕೂಡ ಸೀಜ್ ಮಾಡಿದ ವಾಹಗಳಿಂದ ತುಂಬಿ ಹೋಗುವ ಆತಂಕ ಎದುರಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.