ಹುಬ್ಬಳ್ಳಿ : ಗಣರಾಜ್ಯೋತ್ಸವ ದಿನದಂದು ರೈತರು ಟ್ರ್ಯಾಕ್ಟರ್ ರ‍್ಯಾಲಿ ಆಯೋಜನೆ ಮಾಡಿದ್ದಾರೆ. ವಾಣಿಜ್ಯ ನಗರಿಯಲ್ಲಿಯೂ ಕೂಡ ಬೃಹತ್ ಮೆರವಣಿಗೆಗೆ ರೈತರ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು, ದಲಿತ ಸಂಘಟನೆಗಳು ಸೇರಿದಂತೆ ಹಲವು ಸಂಘಟನೆ ಹಾಗೂ ರಾಜಕೀಯ ಪಕ್ಷಗಳು ಟ್ರ್ಯಾಕ್ಟರ್ ರ‍್ಯಾಲಿ ನಡೆಸಲು ನಿರ್ಧರಿಸಿವೆ.
ಈ ಹಿನ್ನೆಲೆ ರೈತ ಮುಖಂಡರೊಂದಿಗೆ ಹು-ಧಾ ಪೊಲೀಸ್ ಕಮಿಷನರ್ ಲಾಬೂರಾಮ್ ಅವರು ಸಭೆ ನಡೆಸಿದರು. ರೈತರು ಯಾವುದೇ ಕಾರಣಕ್ಕೂ ಅಹಿತಕರ ಘಟನೆಗಳಿಗೆ ಅವಕಾಶ ಕೊಡಬಾರದು. ಶಾಂತಯುತವಾಗಿ ರ‍್ಯಾಲಿ ನಡೆಸುವಂತೆ ಅವರು ಸೂಚನೆ ನೀಡಿದರು.