ETV Bharat / state

ಹುಬ್ಬಳ್ಳಿ: ಪ್ರವಾಹ ಪೀಡಿತ ಪ್ರದೇಶಗಳಿಗೆ ಕೇಂದ್ರ ಅಧ್ಯಯನ ತಂಡ ಭೇಟಿ...

ಉತ್ತರ ಕರ್ನಾಟಕ ಪ್ರವಾಹದಿಂದ ತತ್ತರಿಸಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಪ್ರವಾಹ ಅಧ್ಯಯನ ತಂಡ ಧಾರವಾಡ ಜಿಲ್ಲೆಯ ಹಲವಾರು ಗ್ರಾಮಕ್ಕೆ ಭೇಟಿ ನೀಡಿ  ಜನರ ಸಮಸ್ಯೆಗಳನ್ನು ಆಲಿಸಿದ್ದಾರೆ.

author img

By

Published : Aug 26, 2019, 11:02 PM IST

ಪ್ರವಾಹ ಪೀಡಿತ ಪ್ರದೇಶಗಳಿಗೆ ಕೇಂದ್ರ ಅಧ್ಯಯನ ತಂಡ ಭೇಟಿ

ಹುಬ್ಬಳ್ಳಿ: ಉತ್ತರ ಕರ್ನಾಟಕ ಪ್ರವಾಹದಿಂದ ತತ್ತರಿಸಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಪ್ರವಾಹ ಅಧ್ಯಯನ ತಂಡ ಧಾರವಾಡ ಜಿಲ್ಲೆಯ ಹಲವಾರು ಗ್ರಾಮಕ್ಕೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿದ್ದಾರೆ.

ವಾಹ ಪೀಡಿತ ಪ್ರದೇಶಗಳಿಗೆ ಕೇಂದ್ರ ಅಧ್ಯಯನ ತಂಡ ಭೇಟಿ

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕು ಹಾಗೂ ಹುಬ್ಬಳ್ಳಿ ತಾಲೂಕಿನಲ್ಲಿ ಕೇಂದ್ರ ಪ್ರವಾಹ ತಂಡ ವೀಕ್ಷಣೆ ಮಾಡಿದೆ. ಕೇಂದ್ರ ಪ್ರವಾಹ ಅಧ್ಯಯನ ತಂಡದಲ್ಲಿ ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಪ್ರಕಾಶ, ಕೇಂದ್ರ ಹಣಕಾಸು ಸಚಿವಾಲಯದ ಲೆಕ್ಕಪತ್ರ ಶಾಖೆಯ ನಿರ್ದೇಶಕ ಎಸ್.ಸಿ.ಮೀನಾ, ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಪುನ್ನುಸ್ವಾಮಿ, ಕೇಂದ್ರ ಜಲ ಸಂಪನ್ಮೂಲದ ಪ್ರಾದೇಶಿಕ ಕಚೇರಿಯ ಅಧೀಕ್ಷಕ ಅಭಿಯಂತರ ಎಸ್.ಇ ಜಿತೇಂದ್ರ ಪನ್ವಾರ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಪ್ರಾದೇಶಿಕ ಕಚೇರಿಯ ವಿಜಯಕುಮಾರ, ಗ್ರಾಮೀಣಾಭಿವೃದ್ದಿ ಸಚಿವಾಲಯದ ಉಪಕಾರ್ಯದರ್ಶಿ ಮಾಣಿಕ್ ಚಂದ್ರ ಪಂಡಿತ ಹಾಗೂ ಇಂಧನ ಸಚಿವಾಲಯದ ಉಪನಿರ್ದೇಶಕ ಓ.ಪಿ.ಸುಮನ್ ಅವರು ವೀಕ್ಷಣೆ ಮಾಡಿದರು.

ನವಲಗುಂದ ತಾಲೂಕಿನ ಅಳಗವಾಡಿ, ಯಮನೂರು, ಹೆಬಸೂರು, ಸೇತುವೆ, ಬೆಳೆ ಹಾನಿಯಾದ ಪ್ರದೇಶಗಳನ್ನು ವೀಕ್ಷಣೆ ಮಾಡಿದರು. ಹುಬ್ಬಳ್ಳಿ ಉಣಕಲ್, ರಾಜ ಕಾಲುವೆ ವೀಕ್ಷಣೆ ಮಾಡಿದರು. ಆದರೆ ಕೇಂದ್ರದ ಅಧಿಕಾರಿಗಳು ರೈತರು ಹಾಗೂ ಸಂತ್ರಸ್ತರ ಮಾತನ್ನೇ ಕೇಳಲಿಲ್ಲ. ಕೇವಲ ಸ್ಥಳೀಯ ಅಧಿಕಾರಿ ಮಾತಿಗೆ ತಲೆ ಅಲ್ಲಾಡಿಸಿದರು. ಕೇಂದ್ರ ಅಧಿಕಾರಿಗಳ ತಂಡದ ಅಕ್ಕಪಕ್ಕದಲ್ಲಿ ಸ್ಥಳೀಯ ಅಧಿಕಾರಿಗಳ ಹೆಚ್ಚಿನ ಸಂಖ್ಯೆಯಲ್ಲಿದ್ದರು.ಹೀಗಾಗಿ ಅಧಿಕಾರಿಗಳು ಸಾಮಾನ್ಯ ಜನರ ಕೈಗೆ ಸಿಗಲಿಲ್ಲ. ತಮ್ಮ ದುಃಖ ದುಮ್ಮಾನ ಹೇಳಿಕೊಳ್ಳಲು ಸಂತ್ರಸ್ತರಿಗೆ ಅವಕಾಶ ಸಿಗಲಿಲ್ಲ.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ, ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಪ್ರಕಾಶ, ಈ ಭಾಗದಲ್ಲಿ ನೆರೆಯಿಂದ ಸಾಕಷ್ಟು ಹಾನಿ ಆಗಿದೆ. ನಾಲ್ಕು ಜನ ಸಾವನ್ನಪ್ಪಿದ್ದಾರೆ. ಸಾಕಷ್ಟು ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಜಿಲ್ಲಾಡಳಿತ ಸಮರ್ಪಕವಾಗಿ ನಿರ್ವಹಿಸಿದೆ. ರೈತರು ಹಾಗೂ ಸಂತ್ರಸ್ತರ‌ ಸಮಸ್ಯೆಯನ್ನು ಆಲಿಸಿದ್ದೇವೆ. ರಾಜ್ಯ ಸರ್ಕಾರ ಮನವಿ ಕೇಂದ್ರ ಸರ್ಕಾರದ ಸೂಚನೆ ಮೇರಿಗೆ ಬಂದಿದ್ದೇವೆ. ನಾವು ಭೇಟಿ ನೀಡಿದಲ್ಲೆಲ್ಲ ರೈತರನ್ನ ಮಾತನಾಡಿಸಿ ಅವರಿಂದ ಮಾಹಿತಿ ಪಡೆಯುತ್ತಿದ್ದೇವೆ. ಮೊದಲ ಹಂತದಲ್ಲಿ ಅಧ್ಯಯನ ನಡೆದಿದೆ. ಎರಡನೇ ಹಂತದಲ್ಲಿ ಪರಿಹಾರ ಧನದ ಬಗ್ಗೆ ನಿಖರ ಮಾಹಿತಿ ಲಭ್ಯವಾಗಲಿದೆ. ಮತ್ತೊಮ್ಮೆ ಅಧ್ಯಯನ ಮಾಡಿ ಆ ವರದಿಯನ್ನು ಕೇಂದ್ರಕ್ಕೆ ನೀಡಲಾಗುವುದು ಎಂದಿದ್ದಾರೆ.

Intro:ಹುಬ್ಬಳಿBody:ಪ್ರವಾಹ ಪೀಡಿತ ಪ್ರದೇಶಗಳಿಗೆ ಕೇಂದ್ರ ಅಧ್ಯಯನ ತಂಡ ಬೇಟಿ...

ಹುಬ್ಬಳ್ಳಿ:- ಉತ್ತರ ಕರ್ನಾಟಕದಲ್ಲಿ ಎಂದು ಕಂಡರಿಯದ ಜಲ ಪ್ರಳಯ ಸಂಭವಿಸಿದೆ. ಲಕ್ಷಾಂತರ ಜನರ ಬಾಳು ಬೀದಿಗೆ ಬಂದಿದೆ. ಅನ್ನದಾತ ಬೆಳೆದ ಬೆಳೆ ಪ್ರವಾಹಕ್ಕೆ ಆಹುತಿಯಾಗಿವೆ. ದೊಡ್ಡ ಪ್ರಮಾಣದ ಅನಾಹುತ ಸಂಭವಿಸಿದ್ದ ಪರಿಣಾಮ ಕೇದ್ರ ಪ್ರವಾಹ ಅಧ್ಯಾಯನ ಇಂದು ಧಾರವಾಡ ಜಿಲ್ಲೆಯ ಹಲವಾರು ಗ್ರಾಮಕ್ಕೇ ಬೇಟಿ ನೀಡಿದ ತಂಡ ಜನರ ಸಮಸ್ಯೆಗಳನ್ನು ಆಲಿಸಿದರು....

ವಾಓ:- ಧಾರವಾಡ ಜಿಲ್ಲೆಯ ನವಲಗುಂದ ತಾಲೂಕು ಹಾಗೂ ಹುಬ್ಬಳ್ಳಿ ತಾಲೂಕಿನಲ್ಲಿ ಕೇಂದ್ರ ಪ್ರವಾಹ ತಂಡ ವೀಕ್ಷಣೆ ಮಾಡಿದೆ. ಕೇಂದ್ರ ಪ್ರವಾಹ ಅಧ್ಯಯನ ತಂಡದಲ್ಲಿ ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಪ್ರಕಾಶ, ಕೇಂದ್ರ ಹಣಕಾಸು ಸಚಿವಾಲಯದ ಲೆಕ್ಕಪತ್ರ ಶಾಖೆಯ ನಿರ್ದೇಶಕ ಎಸ್.ಸಿ.ಮೀನಾ, ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಪುನ್ನುಸ್ವಾಮಿ, ಕೇಂದ್ರ ಜಲ ಸಂಪನ್ಮೂಲದ ಪ್ರಾದೇಶಿಕ ಕಚೇರಿಯ ಅಧೀಕ್ಷಕ ಅಭಿಯಂತರ ಎಸ್.ಇ ಜಿತೇಂದ್ರ ಪನ್ವಾರ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಪ್ರಾದೇಶಿಕ ಕಚೇರಿ
ವಾಲಯದ ಪ್ರಾದೇಶಿಕ ಕಚೇರಿಯ ವಿಜಯಕುಮಾರ, ಗ್ರಾಮೀಣಾಭಿವೃದ್ದಿ ಸಚಿವಾಲಯದ ಉಪಕಾರ್ಯದರ್ಶಿ ಮಾಣಿಕ್ ಚಂದ್ರ ಪಂಡಿತ ಹಾಗೂ ಇಂಧನ ಸಚಿವಾಲಯದ ಉಪನಿರ್ದೇಶಕ ಓ.ಪಿ.ಸುಮನ್ ಅವರು ವೀಕ್ಷಣೆ ಮಾಡಿದರು. ನವಲಗುಂದ ತಾಲೂಕಿನ ಅಳಗವಾಡಿ, ಯಮನೂರು, ಹೆಬಸೂರು, ಸೇತುವೆ, ಬೆಳೆ ಹಾನಿಯಾದ ಪ್ರದೇಶಗಳನ್ನು ವೀಕ್ಷಣೆ ಮಾಡಿದರು. ಹುಬ್ಬಳ್ಳಿ ಉಣಕಲ್, ರಾಜ ಕಾಲುವೆವೀಕ್ಷಣೆ ಮಾಡಿದ್ರು. ಆದ್ರೆ ಕೇಂದ್ರದ ಅಧಿಕಾರಿಗಳು ರೈತರು ಹಾಗೂ ಸಂತ್ರಸ್ತರ ಮಾತನ್ನೇ ಕೇಳಲಿಲ್ಲ. ಕೇವಲ ಸ್ಥಳೀಯ ಅಧಿಕಾರಿ ಮಾತಿಗೆ ತಲೆ ಅಲ್ಲಾಡಿಸಿದ್ರು.ಕೇಂದ್ರ ಅಧಿಕಾರಿಗಳ ತಂಡದ ಅಕ್ಕಪಕ್ಕದಲ್ಲಿ ಸ್ಥಳೀಯ ಅಧಿಕಾರಿಗಳ ಹೆಚ್ಚಿನ ಸಂಖ್ಯೆಯಲ್ಲಿಯಿದ್ದರು. ಹೀಗಾಗಿ ಅಧಿಕಾರಿಗಳು ಸಾಮಾನ್ಯ ಜನರ ಕೈಗೆ ಸಿಗಲಿಲ್ಲ ತಮ್ಮ ದುಃಖ ದುಮ್ಮಾನ ಹೇಳಿಕೊಳ್ಳಲು ಸಂತ್ರಸ್ತರಿಗೆ ಅವಕಾಶ ಸಿಗಲಿಲ್ಲ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ, ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಪ್ರಕಾಶ, ಈ ಭಾಗದಲ್ಲಿ ನೆರೆಯಿಂದ ಸಾಕಷ್ಟು ಹಾನಿ ಆಗಿದೆ. ನಾಲ್ಕು ಜನ ಸಾವನ್ನಪ್ಪಿದ್ದಾರೆ. ಸಾಕಷ್ಟು ಪ್ರಮಾಣದಲ್ಲಿ ಬೆಳೆಹಾನಿಯಾಗಿದೆ. ರಾಜ್ಯ ಸರ್ಕಾರದ ನಿರ್ದೇಶನ ಮೇರಿಗೆ ಜಿಲ್ಲಾಡಳಿತ ಸಮರ್ಪಕವಾಗಿ ನಿರ್ವಹಿಸಿದೆ. ರೈತರು ಹಾಗೂ ಸಂತ್ರಸ್ತರ‌ ಸಮಸ್ಯೆಯನ್ನು ಆಲಿಸಿದ್ದೇವೆ.ರಾಜ್ಯ ಸರ್ಕಾರ ಮನವಿ ಕೇಂದ್ರ ಸರ್ಕಾರದ ಸೂಚನೆ ಮೇರಿಗೆ ಬಂದಿದ್ದೇವೆ..ನಾವು ಭೇಟಿ ನೀಡಿದಲ್ಲೆಲ್ಲ ರೈತರನ್ನ ಮಾತನಾಡಿಸಿ ಅವರಿಂದ ಮಾಹಿತಿ ಪಡೆಯುತ್ತಿದ್ದೇವೆ.
ಮೊದಲ ಹಂತದಲ್ಲಿ ಅಧ್ಯಯನ ನಡೆದಿದೆ. ಎರಡನೇ ಹಂತದಲ್ಲಿ ಪರಿಹಾರ ಧನದ ಬಗ್ಗೆ ನಿಖರ ಮಾಹಿತಿ ಲಭ್ಯವಾಗಲಿದೆ. ಮತ್ತೊಮ್ಮೆ ಅಧ್ಯಯನ ಮಾಡಿ ಆ ವರದಿಯನ್ನು ಕೇಂದ್ರಕ್ಕೆ ನೀಡಲಾಗುವುದು ಅಂತಾ ಹೇಳಿದರು..

ಬೈಟ್:- ಪ್ರಕಾಶ. ಕೇಂದ್ರದ ಅಧಿಕಾರಿ

___________________________

ಹುಬ್ಬಳ್ಳಿ: ಸ್ಟ್ರಿಂಜರ್

ಯಲ್ಲಪ್ಪ‌ ಕುಂದಗೋಳ
Conclusion:ಯಲ್ಲಪ್ ಕುಂದಗೊಳ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.