ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ವಿಮಾನ ನಿಲ್ದಾಣ ಈಗ ಮತ್ತಷ್ಟು ವೈಜ್ಞಾನಿಕ ಹಾಗೂ ಆಧುನಿಕ ತಂತ್ರಜ್ಞಾನದ ಮೂಲಕ ಬೆಳವಣಿಗೆಯತ್ತ ದಾಪುಗಾಲು ಹಾಕುತ್ತಿದೆ. ಐಎಲ್ಎಸ್ ಲ್ಯಾಂಡಿಂಗ್ ವ್ಯವಸ್ಥೆ ಜಾರಿಗೊಳಿಸಿ ಸಂಭವಿಸಬಹುದಾದ ಸಮಸ್ಯೆಗೆ ನಿರಾಳತೆ ಕಂಡುಕೊಳ್ಳುವ ಮೂಲಕ ಮತ್ತೊಂದು ಹೊಸ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಈಗ ವಿಮಾನ ನಿಲ್ದಾಣದಲ್ಲಿ ಅಪಘಾತ ಸಂಭವಿಸಬಹುದಾದ ಸಂದರ್ಭದಲ್ಲಿ ಮುಂಜಾಗ್ರತೆಗೆ ಹಾಗೂ ಬೆಂಕಿ ನಂದಿಸಲು ವಿನೂತನ ರೀತಿಯ ರೋಸೆನ್‌ಬೌರ್ ಬಫಲೋವನ್ನು ನಿಯೋಜಿಸಲಾಗಿದೆ.
ಅಗ್ನಿಶಾಮಕ ಸೇವಾ ಸೌಲಭ್ಯವನ್ನು ಮೇಲ್ದರ್ಜೆಗೇರಿಸಿದ್ದು ವಿಮಾನ ನಿಲ್ದಾಣವು ಹೊಸ ಕ್ಷಿಪ್ರ ಕಾರ್ಯಾಚರಣೆಯ ಅಗ್ನಿಶಾಮಕ ವಾಹನವನ್ನು ಹೊಂದಿದೆ. ಇದು ರನ್‌ವೇ ಮತ್ತು ಆಫ್-ರಸ್ತೆಯಲ್ಲಿ ಕಾರ್ಯನಿರ್ವಹಿಸಲಿದ್ದು, ಈ ಕುರಿತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.