ಹುಬ್ಬಳ್ಳಿ : ನಿನ್ನೆ ಬೆಳಗಾವಿಯಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಆರೋಪಿ ಮಾನಸಿಕ ಅಸ್ವಸ್ಥ ಎಂದಿದ್ದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಇಂದು ಯೂ ಟರ್ನ್ ಹೊಡೆದಿದ್ದಾರೆ. ಸಾರ್ವಜನಿಕ ವಲಯದಲ್ಲಿ ಬೊಮ್ಮಾಯಿ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಮಾತು ಬದಲಿಸಿದ್ದಾರೆ.
ಕುಮಾರಸ್ವಾಮಿಯವರು ಎಫ್‌ಎಸ್‌ಎಲ್ ತಜ್ಞರಂತೆ ಮಾತನಾಡುತ್ತಿದ್ದಾರೆ. ಅವರು ಸರ್ಟಿಫಿಕೇಟ್ ಕೊಡಲಿಕ್ಕೆ ಬರುತ್ತಾ? ತನಿಖೆಯಿಂದ ಎಲ್ಲವೂ ಹೊರಬರಬೇಕು. ತನಿಖೆ ನಡೆಯುತ್ತಿದೆ. ಬಂಧನವಾದ ಆರೋಪಿಯ ಸಮಗ್ರವಾದ ತನಿಖೆ ಮುಗಿದ ಮೇಲೆ ಕೃತ್ಯದ ಹಿಂದೆ ಯಾರಿದ್ದಾರೆಂದು ತಿಳಿಯುತ್ತದೆ. ಕುಮಾರಸ್ವಾಮಿಯವರು ಅಲ್ಪಸಂಖ್ಯಾತ ಓಲೈಕೆ ರಾಜಕಾರಣದಲ್ಲಿ ಕಾಂಗ್ರೆಸ್ ಜೊತೆ ಪೈಪೋಟಿ ಮಾಡ್ತಾ ಇದ್ದಾರೆ. ಹೀಗಾಗಿ ಅವರು ತೀವ್ರ ಗತಿಯಲ್ಲಿ ರಿಯಾಕ್ಟ್ ಮಾಡ್ತಾ ಇದ್ದಾರೆ. ಅವರು ಪೊಲೀಸರ ಬಗ್ಗೆ ಮಾತನಾಡುತ್ತಾರೆ. ನಾವು ಅಲ್ಲಿ ಪೋಲಿಸರನ್ನ ನೇಮಕ ಮಾಡಿಲ್ಲ. ಎಲ್ಲರೂ ಕುಮಾರಸ್ವಾಮಿ ಸಿಎಂ ಇದ್ದ ಅವಧಿಯಲ್ಲಿ ನೇಮಕರಾದವರು ಎಂದರು.
ರಾಜ್ಯದಲ್ಲಿ ಉಗ್ರ ನಿಗ್ರಹ ಪಡೆಯನ್ನು ಇನ್ನಷ್ಟು ಬಲಪಡಿಸುತ್ತಿದ್ದೇವೆ. ಅದರ ಬಗ್ಗೆ ಈಗಾಗಲೇ ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇವೆ ಎಂದು ತಿಳಿಸಿದರು.