ಹುಬ್ಬಳ್ಳಿ: ಚಂದ್ರಶೇಖರ ಗುರೂಜಿ ಹತ್ಯೆಯಾದ ಉಣಕಲ್ ಕೆರೆ ಬಳಿಯ ದಿ ಪ್ರೆಸಿಡೆಂಟ್ ಹೋಟೆಲ್ ಆಡಳಿತ ಮಂಡಳಿಯು ದೇವರ ಮೊರೆ ಹೋಗಿದೆ. ಹೋಟೆಲ್ನಲ್ಲಿ ಚಂದ್ರಶೇಖರ ಗುರೂಜಿಯನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಹೀಗಾಗಿ ಹೋಟೆಲ್ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗ ದೈವದ ಮೊರೆ ಹೋಗಿದೆ.
ಗುರೂಜಿ ಹತ್ಯೆ ನಡೆದ ಸ್ಥಳದಲ್ಲೇ ಹೋಟೆಲ್ ಆಡಳಿತ ಮಂಡಳಿ ಇಂದು ಹೋಮ, ಹವನ ನಡೆಸಿದರು. ಗುರೂಜಿ ಹತ್ಯೆಯಿಂದ ಸಿಬ್ಬಂದಿಯಲ್ಲಿ ತೀವ್ರ ಆತಂಕ ಹಾಗೂ ಭಯದ ವಾತಾವರಣ ನಿರ್ಮಾಣವಾಗಿತ್ತು. ಭಯ ದೂರಮಾಡಲು ಮತ್ತು ಹೋಟೆಲ್ ಶುದ್ಧಗೊಳಿಸಲು ಹುಬ್ಬಳ್ಳಿ ಖ್ಯಾತ ಪುರೋಹಿತರಿಂದ ಸುದರ್ಶನ ಹೋಮ ಮಾಡಿಸಿದ್ದಾರೆ.
ಹೋಟೆಲ್ಗೆ ಅಂಟಿದ ಕಳಂಕ ದೂರಮಾಡುವ ಹಿನ್ನೆಲೆಯಲ್ಲಿ ಇಬ್ಬರು ಪುರೋಹಿತರಿಂದ ಮಂತ್ರಘೋಷ ಮೊಳಗಿಸಿದ್ದಾರೆ. ಈ ಮೂಲಕ ಎಂದಿನಂತೆ ತಮ್ಮ ವ್ಯಾಪಾರ ವ್ಯವಹಾರ ನಡೆಯಲಿ ಎಂದೂ ಸಹ ದೇವರಲ್ಲಿ ಹೋಟೆಲ್ ಆಡಳಿತ ಮಂಡಳಿಯ ಸದಸ್ಯರು ಪ್ರಾರ್ಥಿಸಿದ್ದಾರೆ.
ಹೋಟೆಲ್ನಲ್ಲಿ ಭಕ್ತರ ಸೋಗಲ್ಲಿ ಬಂದ ಸರಳ ವಾಸ್ತು ಸಂಸ್ಥೆಯ ಮಾಜಿ ಉದ್ಯೋಗಿಗಳಿಬ್ಬರು ಗುರೂಜಿ ಅವರ ಕಾಲಿಗೆ ಬಿದ್ದು ನಮಸ್ಕರಿಸುಂತೆ ನಟಿಸಿ ನೋಡ ನೋಡುತ್ತಿದ್ದಂತೆ ಚಾಕುವಿನಿಂದ ಚುಚ್ಚಿ ಭೀಕರವಾಗಿ ಹತ್ಯೆ ಮಾಡಿದ್ದರು. ಅವರ ಹತ್ಯೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ.
ಇದನ್ನು ಓದಿ:ಹರ್ಷ ಹತ್ಯೆ ಆರೋಪಿಗಳಿಂದ ಜೈಲಿನಿಂದಲೇ ವಿಡಿಯೋ ಕರೆ: ಎಫ್ಐಆರ್ ದಾಖಲು